ಬೆಳಗಾವಿ ಅಧಿವೇಶನ-ಪೂರ್ವಸಿದ್ಧತೆ ಪರಿಶೀಲನಾ ಸಭೆ ಖಚರ್ುವೆಚ್ಚ ಕಡಿತ : ಪಾರದರ್ಶಕತೆಗೆ ಉಜ್ವಲ್ ಘೋಷ್ ಸೂಚನೆ

ಬೆಳಗಾವಿ, 29: ಪ್ರಸಕ್ತ ಅಧಿವೇಶನ ಸಂದರ್ಭದಲ್ಲಿ ಮಾಡಲಾಗುವ ಪ್ರತಿಯೊಂದು ಖಚರ್ು-ವೆಚ್ಚಗಳು ಪಾರದರ್ಶಕವಾಗಿರಬೇಕು. ಸಾರ್ವಜನಿಕ ತೆರಿಗೆ ಹಣ ಸದ್ಬಳಕೆ ಆಗಬೇಕು ಎಂಬುದು ವಿಧಾನಸಭೆ ಅಧ್ಯಕ್ಷರ ಆಶಯವಾಗಿದೆ. ಆ ಪ್ರಕಾರ ಈ ಬಾರಿಯ ಅಧಿವೇಶನದ ಖಚರ್ುವೆಚ್ಚಗಳನ್ನು ಕಡಿತಗೊಳಿಸುವುದರ ಜತೆಗೆ ದಾಖಲೆಗಳು ಸೇರಿದಂತೆ ಎಲ್ಲವೂ ಪಾರ್ದರ್ಶಕವಾಗಿ ಇರಬೇಕು ಎಂದು ಅಧಿವೇಶನಕ್ಕಾಗಿ ವಿಶೇಷ ಅಧಿಕಾರಿಯಾಗಿ ನಿಯೋಜಿಸಲಾಗಿರುವ ಹಿರಿಯ ಐಎಎಸ್ ಅಧಿಕಾರಿ ಉಜ್ವಲ್ ಘೋಷ್ ಸೂಚನೆ ನೀಡಿದರು.

ಸುವರ್ಣಸೌಧದಲ್ಲಿ ಗುರುವಾರ (ನ.29) ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಅಧಿವೇಶನದ ತಯಾರಿಗೆ ಕಡಿಮೆ ಅವಧಿ ಇರುವುದರಿಂದ ತಕ್ಷಣವೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಧಿಕಾರಿಗಳ ತಂಡಗಳನ್ನು ರಚಿಸಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಅಗತ್ಯವಿರುವ ಸಲಕರಣೆ-ಸಾಮಗ್ರಿಗಳ ಪಟ್ಟಿಯನ್ನು ಮಾಡಿಕೊಳ್ಳಬೇಕು. ವಿಧಾನಸಭೆ ಮತ್ತು ಪರಿಷತ್ತಿನ ಕಾರ್ಯದಶರ್ಿಗಳ ಜತೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಘೋಷ್ ನಿದರ್ೇಶನ ನೀಡಿದರು.

ಕಳೆದ ಬಾರಿ ಅಧಿವೇಶನದ ಸಂಪೂರ್ಣ ಉಸ್ತುವಾರಿಯನ್ನು ವಿಧಾನಸಭೆ ಮತ್ತು ವಿಧಾನಪರಿಷತ್ ಕಾರ್ಯದಶರ್ಿಗಳೇ ನಿರ್ವಹಿಸಿದ್ದರು.

ಈ ಬಾರಿ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತಕ್ಕೆ ವಹಿಸಲಾಗಿರುತ್ತದೆ. ಆದ್ದರಿಂದ ಪ್ರತಿಯೊಂದು ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘಣ್ಣವರ ಸೂಚನೆ ನೀಡಿದರು.

ಯಾವುದೇ ಖರೀದಿ ಅಥವಾ ಸೇವೆ ಪಡೆಯುವಾಗ ಗುಣಮಟ್ಟ, ಪ್ರಮಾಣ ಹಾಗೂ ದರಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪಾರದರ್ಶಕತೆಯಿಂದ ನ್ಯಾಯಸಮ್ಮತ ದರವನ್ನು ನಿಗದಿಪಡಿಸಬೇಕು ಎಂದು ಸಲಹೆ ನೀಡಿದರು.

ಸುವರ್ಣ ವಿಧಾನಸೌಧದ ಆವರಣ ಸೇರಿದಂತೆ ವಸತಿ ಸೌಲಭ್ಯ ಕಲ್ಪಿಸಿರುವ ವಿವಿಧ ಕಡೆಗಳಲ್ಲಿ ಮೊಬೈಲ್ ಶೌಚಾಲಯ ಕಲ್ಪಿಸಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘಣ್ಣವರ ನಿದರ್ೇಶನ ನೀಡಿದರು.

ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತಕ್ಕೆ:

ಈ ಬಾರಿ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಪ್ರತಿ ಸಲದಂತೆ ಊಟ, ವಸತಿ, ಸಾರಿಗೆ, ಶಿಷ್ಟಾಚಾರ ಮತ್ತಿತರ ಕೆಲಸ ಕಾರ್ಯಗಳ ಸುಗಮ ನಿರ್ವಹಣೆಗೆ ಅಗತ್ಯವಿರುವ ಸಮಿತಿಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ವಿಧಾನಸಭಾ ಅಧ್ಯಕ್ಷರು ಮತ್ತು ಪರಿಷತ್ ಸಭಾಪತಿ ಅವರ ಆಶಯದಂತೆ ಖಚರ್ುವೆಚ್ಚಗಳನ್ನು ಕಡಿತಗೊಳಿಸುವುದರ ಜತೆಗೆ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಎಂದರು.

ಕಡಿಮೆ ಅವಧಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸವಾಲಿನ ಕೆಲಸವಾಗಿದ್ದು, ಎಲ್ಲ ಅಧಿಕಾರಿಗಳು ಸಮನ್ವಯದೊಂದಿಗೆ ಒಂದು ತಂಡವಾಗಿ ಕೆಲಸ ಮಾಡುವ ಮೂಲಕ ಈ ಬಾರಿಯ ಅಧಿವೇಶನವನ್ನು ಸುಗಮವಾಗಿ ನಡೆಯುವಂತೆ ಪ್ರಯತ್ನಿಸೋಣ ಎಂದರು.

ಅಧಿವೇಶನ ಸಂದರ್ಭದಲ್ಲಿನ ಪ್ರತಿಯೊಂದು ಖಚರ್ುವೆಚ್ಚಗಳನ್ನು ಕಡ್ಡಾಯವಾಗಿ ವಿಶೇಷ ಅಧಿಕಾರಿಗಳು ಮತ್ತು ತಮ್ಮ ಗಮನಕ್ಕೆ ತಂದು ಅನುಮತಿ ಪಡೆದುಕೊಳ್ಳಬೇಕು ಎಂದು ಡಾ.ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಾವುದೇ ಇಲಾಖೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಇದ್ದರೆ ಕೂಡಲೇ ನೆರೆಹೊರೆಯ ಜಿಲ್ಲೆಗಳಿಂದ ಮುಂಚಿತವಾಗಿ ಕರೆಸುವಂತೆ ಅವರು ತಿಳಿಸಿದರು.

ಭದ್ರತೆಗೆ 4000 ಪೊಲೀಸರ ನಿಯೋಜನೆ:

ಅಧಿವೇಶನ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸಲು ಸುಮಾರು 4000 ಅಧಿಕಾರಿಗಳು/ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಹೇಳಿದರು.ವಿವಿಧ ಕಡೆಯಿಂದ ಆಗಮಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಊಟ-ವಸತಿ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ.

  ಸುವರ್ಣಸೌಧ ಬಳಿ ಪ್ರತಿಭಟನಾಕಾರರಿಗೆ ಸ್ಥಳಾವಕಾಶ ಕಲ್ಪಿಸಲಾಗುವುದು. ಪ್ರತಿವರ್ಷದಂತೆ ಪ್ರತಿಭಟನಾ ಸ್ಥಳದಲ್ಲಿ ತಾತ್ಕಾಲಿಕ ಟೆಂಟ್, ಕುಡಿಯುವ ನೀರು, ಶೌಚಾಲಯ ಮತ್ತಿತರ ಸೌಲಭ್ಯ ಒದಗಿಸಲಾಗುತ್ತಿದೆ.

ಪೊಲೀಸ್ ಸಿಬ್ಬಂದಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಹಿರಿಯ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದು, ಯಾವುದೇ ತೊದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಡಾ.ರಾಜಪ್ಪ ಹೇಳಿದರು.

   ಸಚಿವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತುತರ್ು ವೈದ್ಯಕೀಯ ಸೌಲಭ್ಯ, ಪಾವತಿ ಆಧಾರದ ಮೇಲೆ ಉಪಾಹಾರ ಗೃಹಗಳ ನಿಮರ್ಾಣ, ಕುಡಿಯುವ ನೀರು ಒದಗಿಸುವುದು.ದೂರವಾಣಿ ಸಂಪರ್ಕ, ಲೇಖನ-ಮುದ್ರಣ ಸಾಮಗ್ರಿಗಳ ಪೂರೈಕೆ ಅಗ್ನಿಶಾಮಕ ದಳ ನಿಯೋಜನೆ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚಚರ್ೆ ನಡೆಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ಸುಧೀರಕುಮಾರ್ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ್, ಮಹಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.