ಬಾಗಲಕೋಟೆ: ಜಿಲ್ಲೆಯಲ್ಲಿ ಮಾರ್ಚ 21 ರಿಂದ ಏಪ್ರೀಲ್ 4 ರವರೆಗೆ ಜರುಗಲಿರುವ ಎಸ್.ಎಸ್.ಎಲ್.ಸಿ ವಾಷರ್ಿಕ ಪರೀಕ್ಷೆಯನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿಂದು ಜರುಗಿದ ಪರೀಕ್ಷಾ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 94 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಯಾವುದೇ ರೀತಿಯ ಅನಾನುಕೂಲತೆಯಾಗದಂತೆ ಬೇಕಾಗುವ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡು ವಿದ್ಯಾಥರ್ಿಗಳಿಗೆ ಪರೀಕ್ಷೆ ಬರೆಯಲು ಉತ್ತಮ ವಾತಾವರಣ ಕಲ್ಪಸಿಕೊಡಬೇಕೆಂದು ತಿಳಿಸಿದರು.
ವಿದ್ಯಾಥರ್ಿಗಳಿಗೆ ಪರೀಕ್ಷೆಗಳು ಜೀವನದ ಮುಂದಿನ ಹೆಜ್ಜೆಗೆ ಅನುವಾಗುತ್ತಿದ್ದು, ನಕಲುಮುಕ್ತವಾಗಿ ಹಾಗೂ ಅವ್ಯವಹಾರ ನಡೆಯದಂತೆ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾಥರ್ಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವಂತೆ ಮಾಡಬೇಕು. ಶಿಸ್ತನ್ನು ಕಾಯ್ದುಕೊಳ್ಳಬೇಕು. ಸಮಯಕ್ಕೆ ಮಹತ್ವ ಕೊಟ್ಟು ಸುಸೂತ್ರವಾಗಿ ಪರೀಕ್ಷೆಗಳು ನಡೆಯಬೇಕು. ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ ಆಯಾ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಕೆಲಸವಾಗಬೇಕು ಎಂದರು. ಜಿಲ್ಲಾ ಪಂಚಾಯತ ಸಿಇಓ ಗಂಗೂಬಾಯಿ ಮಾನಕರ ಮಾತನಾಡಿ ವಿದ್ಯಾಥರ್ಿಗಳಿಗೆ ಪರೀಕ್ಷೆ ಬರೆಯಲು ಉತ್ತಮವಾದ ಡೆಸ್ಕ ವ್ಯವಸ್ಥೆ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕು. ಪರೀಕ್ಷಾಥರ್ಿಗಳ ಜೊತೆ ಸಂಯಮದಿಂದ ವತರ್ಿಸಬೇಕು. ಅಂಗವಿಕಲರಿಗೆ ರ್ಯಾಂಪ್ ವ್ಯವಸ್ಥೆ ಹಾಗೂ ವಿದ್ಯಾಥರ್ಿಗಳಿಗೆ ಆರೋಗ್ಯದ ಸಮಸ್ಯೆ ಉಂಟಾದಲ್ಲಿ ಚಿಕಿತ್ಸೆಗೆ ಪ್ರತಿಯೊಂದ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಆರೋಗ್ಯ ಸಹಾಯಕರನ್ನು ನೇಮಿಸಲಾಗುತ್ತಿದೆ.
ಪರೀಕ್ಷಾ ಕೊಠಡಿಗಳಲ್ಲಿ ಮಾಧ್ಯಮದವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. ಪರೀಕ್ಷಾ ನೋಡಲ್ ಅಧಿಕಾರಿ ಎ.ಕೆ.ಬಸಣ್ಣವರ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 94 ಪರೀಕ್ಷಾ ಕೇಂದ್ರಗಳಿಗೆ 94 ಮುಖ್ಯ ಅಧೀಕ್ಷಕರನ್ನು ಹಾಗೂ 28 ಹೆಚ್ಚುವರಿ ಅಧೀಕ್ಷಕರನ್ನು, 94 ಕಸ್ಟೋಡಿಯನ್, 94 ಸ್ಥಾನಿಕ ಜಾಗೃತದಳ, 27 ಮಾಗರ್ಾಧಿಕಾರಿಗಳು, 18 ಸಂಚಾರಿ ಜಾಗೃತದಳ, ತಾಲೂಕಾ ಮಟ್ಟದಲ್ಲಿ ಒಟ್ಟು 67 ವೀಕ್ಷಕರು ಹಾಗೂ ಜಿಲ್ಲಾ ಹಂತದಲ್ಲಿ 6 ಜಾಗೃತ ದಳಗಳನ್ನು ನೇಮಿಸಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 29,999 ವಿದ್ಯಾಥರ್ಿಗಳು ಪರೀಕ್ಷೆ ಬರೆಯಲಿದ್ದು, ಅದರಲ್ಲಿ ಆಂಗ್ಲ ಮಾಧ್ಯಮದಲ್ಲಿ 3531, ಕನ್ನಡ ಮಾಧ್ಯಮದಲ್ಲಿ 25453, ಮರಾಠಿ ಮಾಧ್ಯಮದಲ್ಲಿ 23 ಹಾಗೂ ಉದರ್ು ಮಾಧ್ಯಮದಲ್ಲಿ 992 ವಿದ್ಯಾಥರ್ಿಗಳು ಇದ್ದು, ಒಟ್ಟಾರೆಯಾಗಿ 16121 ಬಾಲಕರು ಹಾಗೂ 13878 ಬಾಲಕಿಯರು ಇದ್ದಾರೆಂದರು. ಮೆಕ್ಯಾನಿಜಮ್ದಿಂದ ಕೂಡಿದ ವಾಚ್ ಮಾತ್ರ ಪರೀಕ್ಷೆಗೆ ತರಬೇಕು. ಸ್ಮಾರ್ಟ ವಾಚ್ಗಳಿಗೆ ಅವಕಾಶವಿರುವದಿಲ್ಲ. ಪರೀಕ್ಷೆ ಸುಸೂತ್ರವಾಗಿ ನಡೆಸುವ ದೃಷ್ಠಿಯಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲದೇ ಪರೀಕ್ಷಾ ಕೇಂದ್ರದ ಸುತ್ತಲೂ ಪೊಲೀಸ್ ಬಂದೋ ಬಸ್ತ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಬಿ.ಎಚ್.ಗೋನಾಳ, ಖಜಾನೆ ಇಲಾಖೆಯ ಉಪನಿದರ್ೇಶಕ ಗೋಪಾಲಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಲತ್ವಾಡಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ಎನ್.ದೇಸಾಯಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.