ಬಹುಮತವಿಲ್ಲದ ಸರಕಾರ ವಿಸರ್ಜಿಸುವಂತೆ ಆಗ್ರಹಿಸಿ ಬಿಜೆಪಿ ಧರಣಿ

ಬೆಂಗಳೂರು 10: ಬಹುಮತ ಕಳೆದುಕೊಂಡಿರುವ ಮೈತ್ರಿ ಸಕರ್ಾರವನ್ನು ವಿಸರ್ಜಿಸಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.  

   ವಿಕಾಸಸೌಧ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಬಹುಮತ ಕಳೆದುಕೊಂಡ ಸರಕಾರ ಹಾಗೂ ಮುಖ್ಯಮಂತ್ರಿಗೆ ಧಿಕ್ಕಾರ ಕೂಗಲಾಯಿತು.   ಪ್ರತಿಭಟನೆಯಲ್ಲಿ ಯಡಿಯೂರಪ್ಪ ಮಾತನಾಡಿ, ಇನ್ನೆರಡು ದಿನದಲ್ಲಿ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಬೇಕು. ಆದರೆ ಮೈತ್ರಿ ಸರಕಾರಕ್ಕೆ  ಬಹುಮತವಿಲ್ಲದ ಕಾರಣ  ವಿಧಾನಸಭೆ ಅಧಿವೇಶನ ನಡೆಸಲು ಸಾಧ್ಯವೇ ಇಲ್ಲ. ಹೀಗಾಗಿ ಕುಮಾರಸ್ವಾಮಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಹುಮತ ಇರುವ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ಮಾಡಬೇಕು ಎಂದರು.

  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸೌಧಕ್ಕೆ ಹೋಗುವ  ಶಾಸಕರನ್ನು ಪೊಲೀಸರು  ತಡೆಯುವ  ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಈಗಾಗಲೇ ಶಾಸಕರ ರಾಜೀನಾಮೆ ಪ್ರಕರಣ  ಸುಪ್ರಿಂಕೋರ್ಟ್  ಮೆಟ್ಟಿಲೇರಿದೆ. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್, ನ್ಯಾಯಾಲಯದ ತೀಪರ್ಿಗಾಗಿ ಕಾಯದೇ ಶಾಸಕರ ರಾಜೀನಾಮೆ ಅಂಗೀಕರಿಸಬೇಕು ಎಂದು ಅವರು ಒತ್ತಾಯಿಸಿದರು. ಈಗಾಗಲೇ 14 ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಸಕರ್ಾರ ಅಲ್ಪಮತಕ್ಕೆ ಕುಸಿದಿದೆ. 

  ಹೀಗಿದ್ದರೂ ಸಹ ಸಕರ್ಾರದಲ್ಲಿ ಹಗಲು ದರೋಡೆ ಮುಂದುವರೆದಿದೆ. ಹೀಗಾಗಿ ಬಹುಮತವಿಲ್ಲದ ಸಕರ್ಾರವನ್ನು ಕಿತ್ತೊಗೆಯಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ. ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಅವರನ್ನು ಒತ್ತಾಯಿಸುವುದಾಗಿ ಯಡಿಯೂರಪ್ಪ ಹೇಳಿದರು.  ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಜೀನಾಮೆ  ನೀಡಿರುವ ಶಾಸಕರನ್ನು ವಾಪಸು ಕರೆದುಕೊಂಡು ಬರಲು ಡಿ.ಕೆ.ಶಿವಕುಮಾರ್ ಮುಂಬೈಗೆ ಹೋಗಿದ್ದಾರೆ. ಆದರೆ ಅವರ ಆಟಕ್ಕೆ ಯಾವುದೇ ಶಾಸಕರು ಬಗ್ಗುವುದಿಲ್ಲ. ಪ್ರಜಾಪ್ರಭುತ್ವದ ಉಳಿವಿಗಾಗಿ ಶಾಸಕರು ರಾಜೀನಾಮೆ ನೀಡಿದ್ದನ್ನು ಗೌರವಿಸುತ್ತೇನೆ ಎಂದರು.  ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ರುಚಿಕಂಡವರು. 

  ಹೀಗಾಗಿ ಸಕರ್ಾರದ ಕೊನೆಗಾಲದಲ್ಲಿ ಕೈಗೆ ಸಿಕ್ಕಿದ್ದಷ್ಟು ಬಾಚುವ ಕೆಲಸ  ಮಾಡುತ್ತಿದ್ದಾರೆ. ಸಚಿವ ಹೆಚ್.ಡಿ.ರೇವಣ್ಣ ಹಗಲು ದರೋಡೆಯಲ್ಲಿ ತೊಡಗಿದ್ದು, ರಾಜ್ಯದಲ್ಲಿ ಜನಪರ ಸಕರ್ಾರವಿಲ್ಲ. ಈ ಸಕರ್ಾರ ಇನ್ನು ಸ್ವಲ್ಪದಿನಗಳ ಕಾಲ ಅಧಿಕಾರದಲ್ಲಿ ಮುಂದುವರೆದಿದ್ದೇ ಆದಲ್ಲಿ  ರಾಜ್ಯ ಹಾಗೂ ವಿಧಾನಸೌಧವನ್ನೂ ಮಾರಿಬಿಡುತ್ತಾರೆ. ಇದೊಂದು ಲೂಟಿ ಸಕರ್ಾರ ಎಂದು ಈಶ್ವರಪ್ಪ ಆರೋಪಿಸಿದರು.   ಬಹುಮತವಿಲ್ಲದ ಸಕರ್ಾರ ಹಾಗೂ ಮುಖ್ಯಮಂತ್ರಿ ಉಳಿಯಬಾರದು. ಸಕರ್ಾರವನ್ನು ಆದಷ್ಟು ಬೇಗ ವಜಾಗೊಳಿಸಬೇಕು. ಸ್ಪೀಕರ್ ತಮ್ಮ ನಡವಳಿಕೆ ಬದಲಿಸಿ ಶಾಸಕರ ರಾಜೀನಾಮೆ ಅಂಗೀಕರಿಸುವ ಮೂಲಕ ಮಾದರಿಯಾಗಬೇಕು. ಕುಮಾರಸ್ವಾಮಿ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು. 

  ಪ್ರಜಾಪ್ರಭುತ್ವದ ಬಗ್ಗೆ ಬಹಳ ಮಾತನಾಡುತ್ತಿದ್ದ  ಕುಮಾರಸ್ವಾಮಿ ಹಾಗೂ ರಮೇಶ್  ಕುಮಾರ್, ಈಗ ಈ ಬಗ್ಗೆ ಮಾತನಾಡುವ  ನೈತಿಕತೆ ಕಳೆದುಕೊಂಡಿದ್ದು,  ಇಡೀ ದೇಶ ಇವರನ್ನು ಗಮನಿಸುವಂತಾಗಿದೆ.  ಶಾಸಕರ ರಾಜೀನಾಮೆಯನ್ನು ಅಂಗೀಕರಿಸದಿರುವುದೇ ತಪ್ಪು ಎಂದು ಕಾನೂನು ತಜ್ಞರೇ  ಹೇಳುತ್ತಿದ್ದಾರೆ. ಆದರೂ ರಮೇಶ್ ಕುಮಾರ್ ,  ಯಾರದ್ದೋ ಪ್ರಭಾವಕ್ಕೆ ಮಣಿದು ರಾಜೀನಾಮೆಯನ್ನು  ಅಂಗೀಕರಿಸದೆ ಹಾಗೇ ಇಟ್ಟುಕೊಂಡಿದ್ದಾರೆ. 5 ಜನರ ರಾಜೀನಾಮೆ ಕ್ರಮಬದ್ಧವಾಗಿದ್ದು, ಉಳಿದವರ ರಾಜೀನಾಮೆಸರಿಯಿಲ್ಲ  ಎನ್ನುತ್ತಾರೆ.   ಇವರ ಹೇಳಿಕೆಗಳನ್ನು  ಗಮನಿಸಿದರೆ,  ಚೌಕಾಶಿ ಮಾಡುತ್ತಿದ್ದಾರೆಯೇ ಎಂದು ಅನಿಸುತ್ತಿದೆ. ಶಾಸಕರ ರಾಜೀನಾಮೆ ಪ್ರಕರಣ ಸುಪ್ರೀಂಕೋಟರ್್ ಮೆಟ್ಟಿಲೇರಿದ್ದು, ಗುರುವಾರ ತೀಪು ಬರಲಿದೆ. ಅವಮಾನವಾಗುವ ಮೊದಲು ಸಭಾಧ್ಯಕ್ಷರು, ಈ   ರಾಜೀನಾಮೆಗಳನ್ನು ಅಂಗೀಕರಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.  30 ಸಾವಿರ ಕೋಟಿ ಬೆಲೆಬಾಳುವ ಸರಕಾರಿ  ಭೂಮಿಯನ್ನು ಜಿಂದಾಲ್ ಕಂಪೆನಿಗೆ ಕೇವಲ 30 ಕೋಟಿ ರೂ.ಗೆ ಮಾರಾಟ ಮಾಡಿದ್ದು, ಸಕರ್ಾರದಿಂದ ಕಿಕ್ ಬ್ಯಾಕ್ ಪಡೆದವರು ಅವಸರದಲ್ಲಿ ಭೂಮಿ ಕಸಿದುಕೊಂಡಿದ್ದಾರೆ. 

  ಸಕರ್ಾರ ಪತನವಾಗುವ ಭಯದಲ್ಲಿ ಸಚಿವ ಸಂಪುಟ ಉಪಸಮಿತಿಯಿಂದ ಭೂಮಿ ಮಾರಾಟಕ್ಕೆ ಒಪ್ಪಿಗೆ ಕೊಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಜಿಂದಾಲ್ ಕಂಪೆನಿಗೆ ನೀಡಿರುವ ಭೂಮಿಯನ್ನು ಹಿಂಪಡೆಯಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.  ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಮಾತನಾಡಿ, 14ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಮೈತ್ರಿ ಸರಕಾರ  ಬಹುಮತ ಕಳೆದುಕೊಂಡಿದೆ.ರಾಜ್ಯದಲ್ಲಿ ಅರಾಜಕತೆ ಉಂಟಾಗಿದ್ದರೂ ಭಂಡತನದಲ್ಲಿ  ಸಕರ್ಾರ ಮುಂದುವರೆಸಿದ್ದಾರೆ. 

   ಒಂದು ಕಡೆ ಸಚಿವರಿಂದ ರಾಜೀನಾಮೆ ಪಡೆಯುವ ಕುಮಾರಸ್ವಾಮಿ, ಮತ್ತೊಂದು ಕಡೆ ವಿಧಾನಸೌಧದಲ್ಲಿ ಕಡತಗಳ ವಿಲೇವಾರಿ ನಡೆಸಿದ್ದಾರೆ ಎಂದು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.  ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಈ ಮೂವರನ್ನು ಓಲೈಸಲು ರಮೇಶ್ ಕುಮಾರ್ ಹೈಡ್ರಾಮಾ ಮಾಡುತ್ತಿದ್ದು, ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುವ  ತಮ್ಮ ಗೌರವ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು. 

   ಶಾಸಕ ಶ್ರೀರಾಮುಲು ಮಾತನಾಡಿ, ಸ್ಪೀಕರ್ ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕು. ಸಂವಿಧಾನದ ನಿಯಮದಂತೆ ಅವರಿಗೆ ನಡೆದುಕೊಳ್ಳಲು ಸಾಧ್ಯವಾಗದೇ ಇದ್ದರೆ, ರಾಜ್ಯಪಾಲರು, ರಾಷ್ಡ್ರಪತಿಗೆ ದೂರು ಕೊಡಲಿ. ರಮೇಶ್ ಕುಮಾರ್ ಸಂವಿಧಾತ್ಮಕವಾಗಿ ನಡೆದುಕೊಂಡಲ್ಲಿ ಅವರ ರಕ್ಷಣೆಗೆ ಬಿಜೆಪಿ ಬರಲಿದೆ  ಎಂದರು. 

  ವಿಧಾನಸೌಧದಲ್ಲಿ ಧರಣಿ ನಡೆಸಿದ ಬಳಿಕ ಬಿಜೆಪಿ ಮುಖಂಡರು ನೂರಾರು ಸಂಖ್ಯೆಯ ಕಾರ್ಯಕರ್ತರೊಡನೆ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ದೂರು ನೀಡಿದರು.