, ಮಾ 12 ಕೇರಳದ ಕೋಜಿಕ್ಕೋಡ್ ನಲ್ಲಿ ಹಕ್ಕಿಜ್ವರದ ಹಲವು ಪ್ರಕರಣಗಳು ವರದಿಯಾದ ಬಳಿಕ ಪರಪ್ಪನಗಡಿ ಸಮೀಪದ ಫಲತಿಂಗಳ್ ನಲ್ಲಿಯೂ ಹಕ್ಕಿಜ್ವರ ದೃಢಪಟ್ಟಿದೆ. ಫಲತಿಂಗಳ್ ನ ಕೋಳಿಸಾಕಾಣಿಕೆ ಕೇಂದ್ರದಲ್ಲಿ ಕೋಳಿಗಳೂ ಸಾವನ್ನಪ್ಪುತ್ತಿದ್ದುದರಿಂದ ಶಂಕೆಗೊಂಡ ಪಶುಸಂಗೋಪನಾ ಇಲಾಖೆಯು ಸತ್ತ ಕೋಳಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದರಿಂದ ಹಕ್ಕಿ ಜ್ವರವಿರುವುದು ದೃಢಪಟ್ಟಿದೆ. ಜಿಲ್ಲಾ ಪಶುಸಂಗೋಪನೆ, ಆರೋಗ್ಯ, ಸಿವಿಕ್ ಮತ್ತು ಇತರ ಸಂಬಂಧಿತ ಅಧಿಕಾರಿಗಳ ತುರ್ತು ಸಭೆ ಸಮಾವೇಶ ನಂತರ ಗುರುವಾರ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ, ಎಲ್ಲಾ ಅಗತ್ಯ ಪ್ರೋಟೋಕಾಲ್ ಕ್ರಮಗಳು ಇಂದಿನಿಂದಲೇ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ. ಫಲತಿಂಗಳ್ ನ ಒಂದು ಕಿಲೋಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿನ ಎಲ್ಲ ಹಕ್ಕಿಗಳೂ ಹಾಗೂ ಸಾಕುಪ್ರಾಣಿಗಳನ್ನು ಶುದ್ಧೀಕರಿಸಲಾಗುತ್ತಿದ್ದು, ಕೋಳಿ ಮತ್ತಿತರ ಪಕ್ಷಿಗಳ ವ್ಯಾಪಾರ ಹಾಗೂ ವಿನಿಮಯ ನಿಷೇಧಿಸಲಾಗಿದೆ. ಯುಎನ್ಐ ಎಸ್ಎ ವಿಎನ್ 1435 NNNN-------------------------------------------------------------------------------------------------ZCZCNormalKDR 5HEALTH-KERALA COVID 19-TDBಕೊರೋನಾ ಭೀತಿ:ಜನರ ಗುಂಪು ತಡೆಯಲು ಟಿಡಿಬಿ ಹಾಗೂ ಚಿತ್ರೋದ್ಯಮ ನಿರ್ಧಾರ ಕೊಟ್ಟಾಯಂ, ಮಾ 12 (ಯುಎನ್ಐ) ಕೇರಳದಲ್ಲಿ ಕೊರೋನಾ ವೈರಾಣು ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಒಂದೆಡೆ ಒಟ್ಟುಗೂಡಿಸದಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಡಿರುವ ಮನವಿಗೆ ತಿರುವಾಂಕೂರು ದೇವಸ್ವಮ್ ಮಂಡಳಿ ಟಿಡಿಬಿ ಹಾಗೂ ಚಿತ್ರೋದ್ಯಮ ಸಮ್ಮತಿ ಸೂಚಿಸಿವೆ. ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಎನ್ ವಾಸು ಮಾರ್ಚ್ 13 ರಂದು ಪ್ರಾರಂಭವಾಗುವ ಆರು ದಿನಗಳ ಮಾಸಿಕ ಪೂಜೆಯಲ್ಲಿ ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಬಾರದಂತೆ ಭಕ್ತರಲ್ಲಿ ಮನವಿ ಮಾಡಿದ್ದಾರೆ. ಚಲನಚಿತ್ರೋದ್ಯಮವು ಮಾರ್ಚ್ 31 ರವರೆಗೆ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಿದೆ. ಟಿಡಿಬಿ ವ್ಯಾಪ್ತಿಗೆ ಬರುವ ದೇವಾಲಯಗಳು ಈ ತಿಂಗಳು ಯಾವುದೇ ಉತ್ಸವ ನಡೆಸುವುದಿಲ್ಲ. ಕೊರೋನಾ ಸೋಂಕು ತಡೆಯಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕಿದೆ ಎಂದು ಟಿಡಿಬಿ ತಿಳಿಸಿದೆ.