ಕ್ಷತ್ರೀಯ ಸಮಾಜದ ರಾಜ್ಯ ಸಮಿತಿಯ ಮೆಹರವಾಡೆ ವರ ನೇಮಕ

Appointment of Meharwade Vara of the State Committee of the Kshatriya Samaj

ಕ್ಷತ್ರೀಯ ಸಮಾಜದ ರಾಜ್ಯ ಸಮಿತಿಯ ಮೆಹರವಾಡೆ ವರ ನೇಮಕ 

ಹಾವೇರಿ 04 : ಕರ್ನಾಟಕ ರಾಜ್ಯ ಸೋಮವಂಶಿಯ್ ಸಹಸ್ರಾರ್ಜುನ್ ಕ್ಷತ್ರೀಯ ಸಮಾಜದ ರಾಜ್ಯ ಸಮಿತಿಯ ನಿರ್ದೇಶಕರಾಗಿ ವಕೀಲರು ಹಾಗೂ ಯುವ ಕ್ರಿಯಾಶೀಲ ನಾಯಕರಾದ   ಶಂಕರ ಮೆಹರವಾಡೆ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಡಾ. ಶಶಿಕುಮಾರ್ ಮೆಹರವಾಡೆ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಎಸ್ ಎಸ್ ಕೆ ಸಮಾಜದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿ ಸಂಘಟನೆ ,ಸಮಾಜದ ಬೆಳವಣಿಗೆ , ಅಭಿವೃದ್ಧಿ ಹಾಗೂ ಬಲವರ್ಧನೆ ಮಾಡಲು ಅವಕಾಶ ನೀಡಲಾಗಿದ್ದು, ಎಲ್ಲಾ ತಾಲ್ಲೂಕಿನಲ್ಲಿ ಎಸ್ ಎಸ್ ಕೆ ಸಮಾಜದ ಅಭಿವೃದ್ಧಿಯ ಬಗ್ಗೆ ಹೆಚ್ಚು ಮಹತ್ವ ನೀಡಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ನೂತನ ರಾಜ್ಯ ನಿರ್ದೇಶಕರಾಗಿ ಶಂಕರ ಮೆಹರವಾಡೆ ಅವರು ನೇಮಕ ಮಾಡಲು ಸಹಕಾರ ನೀಡಿದ   ಸತೀಶ ಮೆಹರಾವಾಡೆರವರು ಹಾಗೂ ಹಾವೇರಿ ಜಿಲ್ಲೆಯ ಎಸ್ ಎಸ್ ಕೆ ಸಮಾಜದ   ಯಲ್ಲಪ್ಪ ಲದ್ವಾ, ಸಾವಜಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು   ವಿಜಯ್ ಬಾಕಳೆ ಹಾಗೂ ಎಸ್ ಎಸ್ ಕೆ ಸಮಾಜದ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಲದ್ವಾ, ಹಿರಿಯ ಮತ್ತು ಯುವ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.