ಭಗವಾನ್ ಮಹಾವೀರರ 2624 ಜನ್ಮ ಕಲ್ಯಾಣಕ ಮಹೋತ್ಸವ
ಕಾಗವಾಡ 10 : ಇಡೀ ವಿಶ್ವಕ್ಕೆ ಸತ್ಯ ಅಹಿಂಸಾ ತತ್ವಗಳನ್ನು ಮತ್ತು ನೀನು ಬದುಕು ಇನ್ನೊಬ್ಬರನ್ನು ಬದುಕಲು ಬಿಡು ಎಂಬ ಸಂದೇಶ ಸಾರಿದ ಭಗವಾನ್ ಮಹಾವೀರರ 2624 ಜನ್ಮ ಕಲ್ಯಾಣಕ ಮಹೋತ್ಸವ ತಾಲೂಕಾಡಳಿತ ಕಚೇರಿಯಲ್ಲಿ, ತಾಲೂಕಿನ ಎಲ್ಲ ಗ್ರಾಮಗಳ ಜೈನಮಂದಿರದಲ್ಲಿ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಗುರುವಾರ ದಿ. 10 ರಂದು ತಹಸಿಲ್ದಾರ ಕಚೇರಿಯಲ್ಲಿ ತಹಶೀಲ್ದಾರ ರಾಜೇಶ್ ಬುರ್ಲಿ ಇವರು ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಗವಾನ ಮಹಾವೀರರು ಇಡೀ ವಿಶ್ವಕ್ಕೆ ಸತ್ಯ, ಅಂಹಿಸೆ ಮತ್ತು ತ್ಯಾಗದ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ ಉಪಾಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡಿ, ಭಗವಾನ್ ಮಹಾವೀರರ ಸಂದೇಶದ ಪಾಲನೆ ನಮ್ಮ ಜೀವನದಲ್ಲಿ ಮಾಡಿಕೊಳೋಣ. ರಾಜ್ಯ ಸರ್ಕಾರ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಭಗವಾನ್ ಮಹಾವೀರರ ಜನ್ಮ ಕಲ್ಯಾಣಕ ಮಹೋತ್ಸವ ಆಚರಿಸುತ್ತಿರುವ ಬಗ್ಗೆ ಸರ್ಕಾರಕ್ಕೆ, ಎಲ್ಲ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಮಾಜದ ವತಿಯಿಂದ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ತಹಶೀಲ್ದಾರ ಕಚೇರಿ, ತಾಲೂಕ ಪಂಚಾಯಿತಿಯ ಕಚೇರಿ, ಪಟ್ಟಣ ಪಂಚಾಯಿತಿಯ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಭಗವಾನ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜನ್ಮ ಜಯಂತಿ ಆಚರಿಸಲಾಯಿತು.
ಈ ವೇಳೆ ಉಪತಹಸಿಲ್ದಾರ ಅಣ್ಣಾಸಾಹೇಬ ಕೋರೆ, ಸಿಡಿಪಿಓ
ಸಂಜೀವಕುಮಾರ ಸದಲಗೆ, ತಾ.ಪಂ. ಇಓ ವೀರಣ್ಣಾ ವಾಲಿ, ಪ.ಪಂ.ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಎಂ.ಆರ್ ಪಾಟೀಲ ಹಾಗೂ ಎಲ್ಲ ಇಲಾಖೆಗಳ ಸಿಬ್ಬಂದಿ ವರ್ಗದವರು, ತಾಲೂಕಿನ ರಾಜ್ಯ ಸರ್ಕಾರದ ಪಂಚ್ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಪಟ್ಟಣದ ಜೈನ್ ಸಮಾಜ ಸಂಘಟನೆಯ ಅಧ್ಯಕ್ಷ ನ್ಯಾಯವಾದಿ ತಾತ್ಯಾಸಾಹೇಬ ದೋತ್ರೆ,
ಸಮಾಜದ ಮುಖಂಡರಾದ ಸುಧೀರ ಹುದ್ದಾರ, ಶಾಂತಿನಾಥ ಕರವ, ಅಜೀತ ಕರವ, ಅನಿಲ ಶಹಾಪುರೆ, ಭರತ ಚಿಂಚವಾಡೆ, ಪ್ರಶಾಂತ ಖುರುಪೆ, ಕಲ್ಲು ತೇೆರದಾಳ, ಮಹಾವೀರ ಬಿಂದಿಗೆ, ಆದಿನಾಥ ಕರವ ಸೇರಿದಂತೆ ಜೈನ ಹಾಗೂ ಜೈನರ ಸಮಾಜ ಪ್ರಮುಖರು ಉಪಸ್ಥಿತರಿದ್ದರು.