ಅಲಗೇರಿ ವಿಮಾನ ನಿಲ್ದಾಣ ನಿರಾಶ್ರಿತರಿಗೆ ನಿವೇಶನ ಹಂಚಿಕೆ ; ಶಾಸಕ ಸೈಲ್
ಕಾರವಾರ 23: ಅಲಗೇರಿ ವಿಮಾನ ನಿಲ್ದಾಣದ 76 ಜನ ನಿರಾಶ್ರಿತರಿಗೆ ಪರಿಹಾರ ವಿತರಣೆಯಲ್ಲಿ ಇದ್ದ ಅಸಮಾಧಾನವನ್ನು ಕಾಂಗ್ರೆಸ್ ಸರ್ಕಾರ ಹೊಗಲಾಡಿಸಿದೆ. ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಚೀಟಿ ಎತ್ತುವ ಮೂಲಕ 60 ್ಠ 90 ಜಾಗವನ್ನು ನೀಡಲಾಗಿದೆ ಎಂದು ಶಾಸಕ ಸತೀಶ್ ಕೆ. ಸೈಲ್ ಹೇಳಿದರು.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಅಲಗೇರಿ ನಿರಾಶ್ರಿತರಿಗೆ ನಿವೇಶನ ಹಂಚುವ ಕುರಿತ ಸಭೆಯಲ್ಲಿ ಮಾತನಾಡಿದರು.ವಿಮಾನ ನಿಲ್ದಾಣನಿರಾಶ್ರಿತರು ಮೂರು ಗ್ರಾಮದವರು ಇದ್ದರು. ಬೇಲೇಕೇರಿ, ಅಲಗೇರಿ ನಿರಾಶ್ರಿತರ ಗ್ರಾಮದಜಾಗವನ್ನು ಆಳತೆ ಮಾಡುವಾಗ ರಿಜಿಸ್ಟ್ರೇಷನ್ ಕಚೇರಿಯಿಂದ ಮೂರು ವರ್ಷದ ದಾಖಲೆಗಳನ್ನು ತೆಗೆದುಕೊಂಡು ಪರಿಗಣಿಸಿ ಮಾಡಿರುವುದರಿಂದ, ನಾಲ್ಕು ರೀತಿಯಲ್ಲಿ ಬೆಲೆ ನಿಗದಿಯಾಗಿತ್ತು. ತಾರತಮ್ಯವೂ ಆಗಿತ್ತು. ಅದರಿಂದ ನಿರಾಶ್ರಿತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ಸಿದ್ದರಾಮಯ್ಯ ಸರ್ಕಾರ ಸರಿಪಡಿಸಿತು. ಇದರಲ್ಲಿ ಸಚಿವ ಎಂ.ಬಿ.ಪಾಟೀಲ, ಮಂಕಾಳು ವೈದ್ಯ ಅವರ ನೆರವು ಸ್ಮರಣೀಯ ಎಂದು ಶಾಸಕ ಸೈಲ್ ಹೇಳಿದರು.ಈ ಮೊದಲು ನೀಡಿದ್ದ 5 ಗುಂಟೆ ಜಾಗದಲ್ಲಿ 30 ್ಠ 40 ರಂತೆ ನಿರಾಶ್ರಿತರಿಗೆ ಜಾಗವನ್ನು ನೀಡಲಾಗಿತ್ತು.
ಈ ಜಾಗದಿಂದ ಸುವ್ಯವಸ್ಥಿತವಾದ ಮನೆಗಳನ್ನು ನಿರ್ಮಿಸಲು ಸಾಧ್ಯವಾಗದೆ ಇರುವ ಕಾರಣ ಅವರಿಗೆ 60 ್ಠ 90 ಜಾಗವನ್ನು ಹಸ್ತಾಂತರಿಸಲು ಸೂಚಿಸಲಾಗಿದೆ ಹಾಗೂ ಎಕ್ಸ್ಗ್ರೇಶಿಯಾ 11 ಕೋಟಿ ಅನುದಾನವನ್ನು ಸಹ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಅನುದಾನ ಬಿಡುಗಡೆಯಾದ ತಕ್ಷಣ ನಿರಾಶ್ರಿತರಿಗೆ ಅನ್ಯಾಯವಾಗದಂತೆ ಸುಸಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.ವಿಮಾನ ನಿಲ್ದಾಣಕ್ಕೆ ಇನ್ನೂ ಅಗತ್ಯವಿರುವ 6 ಎಕರೆ ಜಾಗವನ್ನು ಪರೀಶೀಲಿಸಿ, ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಅಲಗೇರಿ ವಿಮಾನ ನಿಲ್ದಾಣದ ನಿರಾಶ್ರಿತರು ಉಪಸ್ಥಿತರಿದ್ದರು.