ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಾಣ ಮಾಡುತ್ತಿರುವ ಬಸವ ಭವನ ಕಟ್ಟಡಕ್ಕೆ ಸಚಿವ ಎಚ್‌.ಕೆ ಪಾಟೀಲ ಅವರಿಂದ ನೆರವು

Minister H.K. Patil provides assistance to the Basava Bhavan building being constructed by the Banaj

ಲೋಕದರ್ಶನ ವರದಿ 

ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಾಣ ಮಾಡುತ್ತಿರುವ ಬಸವ ಭವನ ಕಟ್ಟಡಕ್ಕೆ ಸಚಿವ ಎಚ್‌.ಕೆ ಪಾಟೀಲ ಅವರಿಂದ ನೆರವು 

ಗದಗ 03: ನಗರದಲ್ಲಿ ಗದಗ ತಾಲೂಕ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಾಣ ಮಾಡುತ್ತಿರುವ ಬಸವ ಭವನ ಕಟ್ಟಡಕ್ಕೆ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲ ಅವರು 1ನೇ ಕಂತಿನ ಭಾಗ 25 ಲಕ್ಷ ರೂ. ಹಣ ಈಗಾಗಲೇ ನೀಡಿದ್ದು, ಸರ್ಕಾರದಿಂದ ಬಿಡುಗಡೆ ಮಾಡಿದ 2ನೇ ಕಂತಿನ 25 ಲಕ್ಷ ರೂ. ಅನುದಾನದ ಮಂಜೂರಾತಿ ಪತ್ರವನ್ನು ಸಮಾಜದ ಹಿರಿಯರಾದ ಹಾಗೂ ಜಿಲ್ಲಾಧ್ಯಕ್ಷ ಈಶಣ್ಣ ಮುನವಳ್ಳಿ, ಕಟ್ಟಡ ಸಮಿತಿ ಅಧ್ಯಕ್ಷ ಕಿರಣ ಭೂಮಾ, ಉಪಾಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ತಾಲೂಕು ಅಧ್ಯಕ್ಷ ನಾಗೇಶ ಸವಡಿ ಅವರಿಗೆ ಹಸ್ತಾಂತರಿಸಿದರು. 

ಗದಗ-ಬೆಟಗೇರಿ ಶಹರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಗದಗ ತಾಲೂಕ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ನಗರದಲ್ಲಿ ಗದಗ ತಾಲೂಕ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ 1 ಕೋಟಿ ಗೂ. ಅದಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಸವ ಭವನ ಕಟ್ಟಡ ನಿರ್ಮಾಣಕ್ಕಾಗಿ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲ ಅವರು ಈಗಾಗಲೇ 50 ಲಕ್ಷ ರೂ. ಅನುದಾನವನ್ನು ನೀಡಿದ್ದು, ಅವರಿಗೆ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಗೃತ್ಪೂರಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಜೊತೆಗೆ ಇನ್ನೂ 50 ಲಕ್ಷ ರೂ. ಅನುದಾನ ಒದಗಿಸುವಂತೆ ಮನವಿ ಮಾಡಿದರು.  

ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ, ನಾವು ಎಂದಿಗೂ ಬಣಜಿಗ ಸಮಾಜದ ಬೆನ್ನೆಲುಬಾಗಿ ನಿಂತು ಬಸವ ಭವನ ಕಟ್ಟಡಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿ, ಹಿಂದೆ ನಮ್ಮ ರಾಜಕೀಯ ಏಳಿಗೆಗಾಗಿ ದುಡಿದ ಬಣಜಿಗ ಸಮಾಜದ ಹಿರಿಯರಾದ ಬಸಪ್ಪ ಅಸೂಟಿ, ವೀರ​‍್ಪ ಅಂಗಡಿ, ವೀರಭದ್ರ​‍್ಪ ಬಳ್ಳಾರಿ ಅವರು ನಮಗೆ ಶಕ್ತಿಯಾಗಿ ನಿಂತಿದ್ದನ್ನು ಸ್ಮರಿಸಿದರು. 

ಈ ಸಭೆಯಲ್ಲಿ ಸಮಾಜದ ಹಿರಿಯರಾದ ರೇವಣಸಿದ್ದಪ್ಪ ಎಳಮಲಿ, ಸುರೇಶ್ ನಿಲುಗಲ್, ಕಾರ್ಯದರ್ಶಿ ಲಲಿತಾ ಇಂಗಳಹಳ್ಳಿ, ನಗರಸಭೆ ಸದಸ್ಯೆ ಲಲಿತಾ ಅಸೂಟಿ, ವಿರೂಪಾಕ್ಷಪ್ಪ ಅಕ್ಕಿ, ಬಸವರಾಜ್ ರಾಮನಕೊಪ್ಪ, ಸಿದ್ದರಾಮಪ್ಪ ಉಮಚಗಿ. ವಿಶ್ವನಾಥ್ ರಾಮನಕೊಪ್ಪ, ಡಾ. ರಾಜಶೇಖರ್ ಬಳ್ಳಾರಿ, ಅಶೋಕ್ ಯಾಳಗಿಶೆಟ್ಟರ, ಬಸವರಾಜ ಅಂಗಡಿ, ಚನ್ನವೀರ​‍್ಪ ದುಂದೂರ, ಸುಶೀಲಮ್ಮ ಕೋಟಿ, ಶಿವಯೋಗಿ ಅಗಡಿ, ಮಹೇಶ್ ಮುಂಡರಗಿ, ರವಿ ಪಟ್ಟಣಶೆಟ್ಟಿ, ಚೇತನ್ ಅಂಗಡಿ, ಅಮರನಾಥ ಗಡಗಿ, ಅಡಿವೆಪ್ಪ ದುಂಡಿಸಿ, ಶರಣಪ್ಪ ಜಾಲಿಹಾಳ, ಚನ್ನಬಸಪ್ಪ ಅಕ್ಕಿ, ರವಿ ಪಟ್ಟಣಶೆಟ್ಟಿ, ವಿಶ್ವನಾಥ್ ಯಳಮಲಿ, ಗಂಗಾಧರ್ ಮೇಲಗೆರಿ, ವೀರ​‍್ಪ ಸವಡಿ, ಮಹೇಶ್ ಬೆಲ್ಲದ, ಪ್ರಭು ಡಿಗ್ಗಾವಿ, ಮಾಂತೇಶ್ ಗದಗ, ಉಮೇಶ್ ನಾಲ್ವಾಡ, ಶಶಿಧರ್ ಕಳಸಾಪುರಶೆಟ್ಟರ, ಕುಮಾರ್ ಬಳ್ಳಾರಿ, ಮಾಂತೇಶ್ ರಾಮನಕೊಪ್ಪ, ಸಿದ್ದು ಉಮಚಗಿ, ಮಾಂತೇಶ್ ಸೂಡಿ, ಶಂಕರ ನೀರಲಕೇರಿ, ಅನೂಪ ಹುಬ್ಬಳ್ಳಿ, ಶ್ರೀಧರ ವಜ್ರಬಂಡಿ, ಗೀರೀಶ್ ಕೋರಿ, ಸುರೇಶ ಮಾಳವಾಡ, ಶಶಿಧರ ಅರಳಿ, ಈರಣ್ಣ ಗಡಗಿ, ಮುರಗೇಪ್ಪ ನಾಲ್ವಾಡ, ಮುತ್ತಣ್ಣ ಭರಡಿ, ಸೋಮನಾಥ ಜಾಲಿ, ವಿಜಯಲಕ್ಷ್ಮೀ ಮಾನ್ವಿ, ಲಲಿತಾ ಸವಡಿ, ಉಮಾ ರಾಮನಕೊಪ್ಪ, ಮಂಜುನಾಥ ಲಕ್ಕುಂಡಿ, ಶಿವರಾಜ ಕೋಟಿ ಹಗೂ ಹಲವಾರು ಸಮಾಜದ ಹಿರಿಯರು ಇದ್ದರು.