ಶ್ರೀಶೈಲದಲ್ಲಿ ಯಾತ್ರಿನಿವಾಸ ಕಾಮಗಾರಿ ಆರಂಭ

Pilgrimage work started in Srishaila

ಲೋಕದರ್ಶನ ವರದಿ 

ಶ್ರೀಶೈಲದಲ್ಲಿ ಯಾತ್ರಿನಿವಾಸ ಕಾಮಗಾರಿ ಆರಂಭ 


ಧಾರವಾಡ 03: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಆಂಧ್ರ​‍್ರದೇಶದ ಶ್ರೀಶೈಲದ ಜಗದ್ಗುರು ಸೂರ್ಯಸಿಂಹಾಸನ ಪಂಡಿತಾರಾಧ್ಯ ಮಹಾಪೀಠದ ವತಿಯಿಂದ ಶ್ರೀಶೈಲ ಕ್ಷೇತ್ರದಲ್ಲಿ ಭಕ್ತರಿಗಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಯಾತ್ರಿ ನಿವಾಸ ಹಾಗೂ ಶ್ರೀಮಲ್ಲಿಕಾರ್ಜುನ ಸ್ವಾಮಿಯ ಬೃಹತ್ ಕಂಬಿಮಂಟಪ ಕಾಮಗಾರಿಗೆ ಬುಧವಾರ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಮತ್ತು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಶಂಕುಸ್ಥಾಪನೆ ಮಾಡಿದರು.  

ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಯುಗಾದಿ, ಕಾರ್ತಿಕ ದೀಪೋತ್ಸವ, ಶಿವರಾತ್ರಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಶ್ರೀಶೈಲ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗಾಗಿ ತಂಗಲು ವಿಭಿನ್ನ ಪ್ರಕಾರದ 374 ಕೋಠಡಿಗಳು, ಎರಡು ಡಾರ್ಮೆಟ್ರಿ ಹಾಲ್‌ಗಳು, ಎರಡು ದಾಸೋಹ ಭವನಗಳು, 500 ಕಂಬಿಗಳನ್ನು ಇರಿಸುವ ಸಾಮರ್ಥ್ಯದ ಬೃಹತ್ ಕಂಬಿಮಂಟಪಗಳು ನಿರ್ಮಾಣಗೊಳ್ಳಲಿವೆ. ಇಲ್ಲಿ ನೂರಕ್ಕಿಂತ ಹೆಚ್ಚು ವಾಹನಗಳ ನಿಲುಗಡೆಗೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ ಎಂದರು.  

ಜಮಖಂಡಿ, ನಾಗಣಸೂರು, ಅಂಬಿಕಾನಗರ, ಶಹಾಪುರ, ನೀಲಗಲ್, ಕರಿಬಂಟನಾಳ ಮುಂತಾದ ಮಠಗಳ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಉದ್ಯಮಿ ನವಲಿ ಹಿರೇಮಠ, ಬಸವರಾಜ ಬುಕ್ಕಾಣಿ, ಶಾಂತಗೌಡ ಬಿರಾದಾರ ಇತರರು ಇದ್ದರು.  




ಫೋಟೋ : 3 ಡಿಡಬ್ಲ್ಯೂಡಿ (ಶ್ರೀಶೈಲ ಪೀಠ)  

ಆಂಧ್ರ​‍್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಭಕ್ತರಿಗಾಗಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸಕ್ಕೆ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಬುಧವಾರ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.