ಆಸ್ತಿಯ ಈ ಖಾತಾ ಮತ್ತು ಬಿ ಖಾತಾ ಸುಲಭ ಮತ್ತು ತ್ವರಿತ ವಾಗಿ ಪಡೆದುಕೊಳ್ಳಿ: ಪಟೇಲ್‌

Get property E Khata and B Khata easily and quickly: Patel

ಆಸ್ತಿಯ ಈ ಖಾತಾ ಮತ್ತು ಬಿ ಖಾತಾ ಸುಲಭ ಮತ್ತು ತ್ವರಿತ ವಾಗಿ ಪಡೆದುಕೊಳ್ಳಿ: ಪಟೇಲ್‌

ಕೊಪ್ಪಳ 03: ಸುಮಾರು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ಈ ಖಾತಾ ಮತ್ತು ಬಿ ಖಾತ ಎಂ ಬಿ ನಂಬರ್ ನಮೋನೇ 3 ಪಡೆಯಲು ಸಾರ್ವಜನಿಕರು ಪರದಾಡುವಂತ ಸ್ಥಿತಿ ಗಮನಿಸಿದ ಈಗಿನ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ  ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಮನೆಬಾಗಿಲಿಗೆ ಈ ಖಾತ ಮತ್ತು ಬಿ ಖಾತ ಫಾರಂ ನಂಬರ್ 3 ವಿತರಣೆ ಅಭಿಯಾನ ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಜನತೆಗೆ ಸಲಹೆ ನೀಡಿದರು. 

 ಅವರು ಗುರುವಾರ ನಗರದ ಮೂರನೇ ವಾರ್ಡಿನ ವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಈ ಖಾತ ಮತ್ತು ಬಿ ಖಾತ ವಿತರಣಾ ಅಭಿಯಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಸದರಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಹಮ್ಮಿಕೊಂಡಿರುವ ಈ ಅಭಿಯಾನ ಮೂರು ತಿಂಗಳದ ಒಳಗಾಗಿ ಸಂಬಂಧಿಸಿದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಈ ಖಾತ ಬಿ ಖಾತ ದಿಂದ ಜನರಿಗೆ ಸರ್ಕಾರದಿಂದ ಸಿಗಬಹುದಾದ ಸಹಾಯ ಸಾಲ ಸೌಕರ್ಯ ಇತ್ಯಾದಿ ಯೋಜನೆಗಳು ಸಿಗಲು ಇದು ಅತ್ಯಂತ ಸುಲಭ ವಾಗಲಿದೆ ಇಂತಹ  ನೂತನ ಯೋಜನೆ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದೆ ಇದರ  ಲಾಭ ಸೌಲಭ್ಯಪಡೆಯಲು ಪ್ರತಿಯೊಬ್ಬರು ತನ್ನ ಮನೆಯ ಆಸ್ತಿ ದಾಖಲೆಯ ಪತ್ರ ಗಳನ್ನು ನೀಡಿ ಈ ಖಾತ ಮತ್ತು ಬಿ ಖಾತ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಅವರು ಕರೆ ನೀಡಿದರು. 

ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಉಪಾಧ್ಯಕ್ಷರಾದ ಅಶ್ವಿನಿ ಗದುಗಿನಮಠ್‌. ಪೌರಾಯುಕ್ತರಾದ ಗಣಪತಿ ಪಾಟೀಲ್, ಓಣಿಯ ಹಿರಿಯರಾದ ಖಾಜಾ ಹುಸೇನ್ ರೆವಡಿ ಸಲೀಂ ಅಳವಂಡಿ ಹಜರತ್ ಮುಜಾವರ್ ಸೇರಿದಂತೆ ನಗರಸಭೆಯ ಕಂದಾಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮತ್ತಿತರರು ಪಾಲ್ಗೊಂಡಿದ್ದರು.