ಹೊಸ ಬಸ್‌ಸ್ಟ್ಯಾಂಡ್ ಹಿಂಭಾಗದಲ್ಲಿ ನಿರ್ಮಿಸುತ್ತಿರುವ ‘ಗಾಂಧಿ ಭವನ’ ಉದ್ಘಾಟನೆ ಕುರಿತು
ಧಾರವಾಡ 24 : ಹೊಸ ಬಸ್‌ಸ್ಟ್ಯಾಂಡ್ ಹಿಂಭಾಗದಲ್ಲಿ ನಿರ್ಮಿಸುತ್ತಿರುವ ‘ಗಾಂಧಿ ಭವನ’ ಉದ್ಘಾಟನೆ ಕುರಿತು. ಮಾನ್ಯರೆ, ಇತ್ತೀಚೆಗೆ ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ‘ಬೆಳಗಾವಿ ಕಾಂಗ್ರೆಸ್ 100 ಮಹಾ ಅಧಿವೇಶನ’ ಸವಿನೆನಪಿಗಾಗಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಅಂಹಿಸಾತ್ಮಕ ಚಳುವಳಿ, ತ್ಯಾಗ, ಬಲಿದಾನ ಸ್ಮರಿಸಿ ಅವರಿಗೆ ಗೌರವ ಸಲ್ಲಿಸಿದ್ದು ಇಡೀ ದೇಶವೆ ಹೆಮ್ಮೆ ಹಾಗೂ ಅಭಿಮಾನ ಪಡುವ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾಕಾಶಿ ಧಾರವಾಡದಲ್ಲಿ ಗಾಂಧಿ ತತ್ವ, ಸಿದ್ಧಾಂತ, ಅವರ ಜೀವನ-ಸಾಧನೆ ಇತ್ಯಾದಿ ಚಟುವಟಿಕೆ ಹಮ್ಮಿಕೊಂಡು ಮುಂದಿನ ಪೀಳಿಗೆಗೆ ಕಟ್ಟಿಕೊಡುಲು ಅನುಕೂಲವಾಗುವ ದಿಸೆಯಲ್ಲಿ ಸರಕಾರ ‘ಗಾಂಧಿ ಭವನ’ ನಿರ್ಮಿಸಲು ಯೋಜಿಸಿ, ಸದರಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಗರದ ಹೊಸ ಬಸಸ್ಟ್ಯಾಂಡ ಹಿಂದುಗಡೆ ಸುಮಾರು 10 ವರ್ಷಗಳ ಹಿಂದೆಯೆ ಪ್ರಾರಂಭಿಸಿದೆ. ಆದರೆ ಅದು ಇನ್ನೂವರೆ ಉದ್ಘಾಟನೆಗೊಳ್ಳದಿರುವುದು ವಿಪರ್ಯಾಸದ ಸಂಗತಿ. ಈ ರೀತಿ ಕಾಲಮಿತಿ ಇಲ್ಲದೆ ಆಮೆಗತಿಯಲ್ಲಿ ನಡೆಯುತ್ತಿರುವ ಈ ‘ಗಾಂಧಿ ಭವನ’ದ ಕೆಲಸ ಅವಲೋಕಿಸಿದರೆ ಇದರಲ್ಲಿ ಅಧಿಕಾರಿಗಳ ಜಡತ್ವ, ಬೇಜವಾಬ್ದಾರಿ, ಬದ್ಧತೆ ಎದ್ದು ಕಾಣುತ್ತದೆ. ಇದು ಗಾಂಧಿ ತತ್ವ, ವಿಚಾರಗಳಿಗೆ ವೈರುಧ್ಯವಾಗಿದೆ ಹಾಗೂ ಗಾಂಧೀಜಿಯವರಿಗೆ ಮಾಡುವ ಅಪಮಾನದಂತಿದೆ. ಇದು ಅವಳಿನಗರದ ಜನತೆಗೆ ಬಹಳಷ್ಟು ನಿರಾಶೆ ಉಂಟುಮಾಡಿದೆ ಹಾಗೂ ಆಕ್ರೋಶಕ್ಕೆ ಗುರಿಯಾಗಿದೆ. ಕೇವಲ ಗಾಂಧಿ ತತ್ವ, ಸಿದ್ಧಾಂತ ಕುರಿತು ಮಾತನಾಡಿದರೆ ಸಾಲದು ಅದು ಕೃತಿಯಲ್ಲಿಯೂ ಇರಬೇಕು. ಆದ್ದರಿಂದ, ರಾಜ್ಯ ಸರಕಾರ ಕೂಡಲೇ ಇದೆ ಜನೇವರಿ 30 ರಂದು ಗಾಂಧೀಜಿಯವರ ಸ್ಮರಣೋತ್ಸವದಂದು ಈ ‘ಗಾಂಧಿ ಭವನ’ ಉದ್ಘಾಟನೆ ಮಾಡಬೇಕೆಂದು ತಮ್ಮಲ್ಲಿ ಜನತಾದಳ (ಸಂಯುಕ್ತ) ಜೆಡಿ(ಯು) ಪಕ್ಷವು ವಿನಂತಿಸಿಕೊಳ್ಳುತ್ತದೆ. ಒಂದು ವೇಳೆ ಈ ಕುರಿತು ನಿರ್ಲಕ್ಷ್ಯ ಧೋರಣೆ ತೋರಿದರೆ 2025 ಜನೇವರಿ 30 ರಿಂದ ಗಾಂಧೀವಾದಿಗಳು ಸಂಘ, ಸಂಸ್ಥೆಗಳು ಹಾಗೂ ನಾಗರಿಕರೊಂದಿಗೆ ‘ಗಾಂಧಿ ಭವನ’ ಉದ್ಘಾಟನೆಯಾಗುವವರೆಗೂ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ, ಧಾರವಾಡ ದಿ: 15-1-2025 ಪ್ರತಿ : ಮಾಹಿತಿ ಹಾಗೂ ಮುಂದಿನ ಕ್ರಮಕ್ಕಾಗಿ 1) ಸನ್ಮಾನ್ಯ ಶ್ರೀ ಸಂತೋಷ ಲಾಡ ಅವರು ಮಾನ್ಯ ಕಾರ್ಮಿಕ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು 2) ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಅವರು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು 3) ಮಾನ್ಯ ಶ್ರೀ ಬಿ.ಕೆ. ಸಂಗಮೇಶ ಅವರು ಶಾಸಕರು ಹಾಗೂ ಅಧ್ಯಕ್ಷರು, ಕೆ.ಆರ್.ಐ.ಡಿ.ಎಲ್, ಬೆಂಗಳ