ಬಿಜೆಪಿ ಪಕ್ಷವನ್ನು ಪುನ: ಅಧಿಕಾರಕ್ಕೆ ತರಲು ಸರ್ವೋತ್ತಮ ಜಾರಕಿಹೊಳಿ ಕರೆ

A brilliant call to bring the BJP party back to power

ಬಿಜೆಪಿ ಪಕ್ಷವನ್ನು ಪುನ: ಅಧಿಕಾರಕ್ಕೆ ತರಲು ಸರ್ವೋತ್ತಮ ಜಾರಕಿಹೊಳಿ ಕರೆ

ಹಳ್ಳೂರ 29: ಭಾರತೀಯ ಜನತಾ ಪಕ್ಷವನ್ನು ಗಟ್ಟಿಗೊಳಿಸುವ ಸಲುವಾಗಿ ಗ್ರಾಮದ ಎಲ್ಲಾ ಬೂತ ಮಟ್ಟದಲ್ಲಿ ಸಭೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದೀಜೀವರ ಅಭಿವೃಧ್ದಿ ಕಾರ್ಯಗಳ ಬಗ್ಗೆ ತಿಳುವಳಿಕೆ ಹೇಳಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೆಚ್ಚು ಬೆಂಬಲ ನೀಡುವಂತೆ ಕಾರ್ಯಕರ್ತರಿಗೆ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಕರೆ ನೀಡಿದರು.                                  

ಅವರು ಗ್ರಾಮದ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ ಅರಬಾಂವಿ ಮಂಡಲದ ಭೂತ ಸಮಿತಿ ರಚನೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.                                           ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಸ ಪಾಟೀಲ ಮಾತನಾಡಿ ಭಾರತೀಯ ಜನತಾ ಪಾರ್ಟಿ ಸುಭದ್ರಗೊಳಿಸಲು ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಬೇಕಾದರೆ ಕಾರ್ಯಕರ್ತರು ಒಗ್ಗಟ್ಟಾಗಿರಬೇಕು. ಭೂತ ಸಮಿತಿ ರಚನೆ ಕುರಿತು ಮಾಹಿತಿ ನೀಡಿದರು.                 

ಈ ಸಮಯದಲ್ಲಿ  ಅಬ್ದುಲ ಮಿರ್ಜಾನಾಯ್ಕ.ರಾಷ್ಟ್ರೀಯ ಒಬಿಸಿ ಸದಸ್ಯರಾದ ಲಕ್ಷ್ಮಣ ತಪಸಿ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕುಡಚಿ ಸೇರಿದಂತೆ ನೂರಾರು ಜನ ಬಿಜೆಪಿ ಕಾರ್ಯಕರ್ತರಿದ್ದು ಕಾರ್ಯಕ್ರಮವನ್ನು ಸಿದ್ದು ದುರದುಂಡಿ ನಿರೂಪಿಸಿ. ಮುರಿಗೆಪ್ಪ ಮಾಲಗಾರ ವಂದಿಸಿದರು.