88ನೇಅ.ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೈಜೋಡಿಸಿ: ಜಿಲ್ಲಾಧ್ಯಕ್ಷ ನಿಷ್ಠಿ ರುದ್ರ್ಪ
ಕಂಪ್ಲಿ 20: ಇಲ್ಲಿನ ವಿಜಯನಗರ ಪ್ರೌಢಶಾಲೆಯಲ್ಲಿ ಕಸಾಪ ತಾಲೂಕು ಘಟಕ ಹಮ್ಮಿಕೊಂಡಿದ್ದ ಕಲ್ಗುಡಿ ಉಮೇಶ, ಮಹಾಂತಿನಮಠದ ಶ್ಯಾಮಲಮ್ಮ, ಗೌರಮ್ಮ, ದಿವಂಗತ ಎಂ.ಪಿ.ಪ್ರಕಾಶ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಬುಧವಾರ ನಡೆಯಿತು.
ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸತತ 20ವರ್ಷಗಳ ಪ್ರಯತ್ನದಿಂದಾಗಿ ಬಳ್ಳಾರಿಗೆ ಒಲಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರ್ವರೂ ಸೇರಿ ಯಶಸ್ವಿಗೊಳಿಸಬೇಕಿದೆ. 67ವರ್ಷಗಳ ನಂತರ ದೊರಕಿದ ಸಮ್ಮೇಳನವಾಗಿದ್ದು ತಾಲೂಕಿನ ಸರ್ವರೂ ಕೈಜೋಡಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.ಶಿಕ್ಷಕ ಸುನೀಲ್ ಮಾಲಿಪಾಟೀಲ್ ‘ಶರಣ ಸಾಹಿತ್ಯ ಹಾಗೂ ವಚನ ವಾಜ್ಮಯ ವಿಹಾರ’ ಕುರಿತು ಉಪನ್ಯಾಸ ನೀಡಿ, ಶರಣರ ತತ್ವ ಆದರ್ಶಗಳ ಪರಿಪಾಲನೆಯಿಂದ ಬಡತನ, ಅಜ್ಞಾನ, ಮೂಢನಂಬಿಕೆಗಳನ್ನು ತೊಲಗಿಸಿ ಅರ್ಥಪೂರ್ಣ ಜೀವನ ಸಾಗಿಸಲು ಮುಂದಾಗಬೇಕು ಎಂದರು.
ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ಎಸ್.ನೀಲಪ್ಪ, ಕಾರೇಮಂಗಿ ತಿಪ್ಪೇಸ್ವಾಮಿ, ಅಶೋಕ ಕುಕನೂರ ಗೌರವ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆವಹಿಸಿದ್ದರು. ಕಮ್ಮವಾರಿ ಸಂಘದ ಉಪಾಧ್ಯಕ್ಷ ಕೆ.ಕೊಂಡಯ್ಯ, ಮುಖ್ಯಶಿಕ್ಷಕ ವಿಷ್ಣು, ದತ್ತಿದಾನಿಗಳಾದ ಕಲ್ಗುಡಿ ವಿಜಯಕುಮಾರ್, ಮಹಾಂತಿನಮಠದ ಆಶಾ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಹಾದಿಮನಿ ಕಾಳಿಂಗವರ್ಧನ, ಯು.ಎಂ.ವಿದ್ಯಾಶಂಕರ, ಎಲಿಗಾರ ವೆಂಕಟರೆಡ್ಡಿ ಇತರರಿದ್ದರು.