ಗದಗ 17: ಇದೇ ದಿ. 13ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಗದಗ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಚಾಲ್ತಿ ಇದ್ದ 506 ಪ್ರಕರಣಗಳು ಹಾಗೂ 55 ವ್ಯಾಜ್ಯ ಪೂರ್ವ ಪ್ರಕರಣಗಳು ರಾಜೀ ಆಗಿವೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಸ್.ಸಂಗ್ರೇಶಿ ಅವರು ಹೇಳಿದರು.
ಗದಗದಲ್ಲಿ 275 ಪ್ರಕರಣಗಳು, ಮುಂಡರಗಿಯಲ್ಲಿ 31, ಲಕ್ಷ್ಮೇಶ್ವರದಲ್ಲಿ 84, ರೋಣದಲ್ಲಿ 82 ಮತ್ತು ನರಗುಂದದಲ್ಲಿ 34 ಹೀಗೆ ಗದಗ ಜಿಲ್ಲೆಯಲ್ಲಿ ಒಟ್ಟು 506 ವಿವಿಧ ಚಾಲ್ತಿ ಪ್ರಕರಣಗಳು ರೂ.7,43,80,653 ಮೊತ್ತಕ್ಕೆ ರಾಜೀ ಆಗಿದ್ದು, ವ್ಯಾಜ್ಯ ಪೂರ್ವ 55 ಪ್ರಕರಣಗಳಲ್ಲಿ ರೂ.62,15,126 ಮೊತ್ತಕ್ಕೆ ರಾಜೀ ಆಗಿದ್ದು, ಇದರಲ್ಲಿ ಮೊಟಾರು ವಾಹನ ಅಪಘಾತ ವಿಮೆಯ 40 ಪ್ರಕರಣಗಳಲ್ಲಿ ರೂ.1,03,74,706 ಗಳ ಪರಿಹಾರಕ್ಕೆ ರಾಜೀ ಆಗಿದ್ದು, 106 ಚೆಕ್ ಬೌನ್ಸ್ ಪ್ರಕರಣಗಳಲ್ಲಿ ರೂ.1,65,16,975 ಗಳಿಗೆ ರಾಜೀ ಆಗಿದ್ದು, ಇತರೆ 142 ದಿವಾಣಿ ಪ್ರಕರಣಗಳಲ್ಲಿ ರೂ.1,96,61,291 ಗಳಿಗೆ ರಾಜೀ ಆಗಿದ್ದು, 142 ಫೌಜದಾರಿ ಪ್ರಕರಣಗಳು ರೂ.2,71,22,681 ಗಳಿಗೆ ಹಾಗೂ 17 ವೈವಾಹಿಕ ಪ್ರಕರಣಗಳು ರಾಜೀ ಆಗಿರುತ್ತವೆ.
ಕೌಟುಂಬಿಕ ನ್ಯಾಯಾಲಯದ ವೈವಾಹಿಕ ಪ್ರಕರಣದಲ್ಲಿ ಪತಿ ಪತ್ನಿಯನ್ನು ರಾಜೀ ಸಂಧಾನ ಮಾಡಿಸಿ ಅವರಿಂದ ಹೂವಿನ ಹಾರವನ್ನು ಬದಲಾಯಿಸಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಸ್.ಸಂಗ್ರೇಶಿಯವರು ಮತ್ತು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರೂಪಾ ನಾಯಕ ಅವರು ನೆನಪಿನ ಕಾಣಿಕೆ ನೀಡಿ ಶುಭಹಾರೈಸಿದರು. ಹೆಚ್ಚಿನ ರೀತಿಯಲ್ಲಿ ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಲು ಸಹಕಾರ ನೀಡಿದ ಎಲ್ಲಾ ವಕೀಲ ಬಾಂಧವರಿಗೆ, ನ್ಯಾಯಾಧೀಶರಿಗೆ, ಪಕ್ಷಗಾರರಿಗೆ, ಎಲ್ಲಾ ಇಲಾಖೆಯವರಿಗೆ, ವಿಮೆ ಕಂಪನಿ ಹಾಗೂ ಬ್ಯಾಂಕಿನವರಿಗೆ, ಸಕರ್ಾರಿ ವಕೀಲರಿಗೆ, ಅಭಿಯೋಜನಾ ಇಲಾಖೆಯವರಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್. ಸಂಗ್ರೇಶಿಯವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ, ಸದಸ್ಯ ಕಾರ್ಯದಶರ್ಿ, ಜಿ.ಎಸ್. ಸಲಗರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.