ಧಾರವಾಡ 16: 21ನೇ ಶತಮಾನವು ಜ್ಞಾನದ ಶತಮಾನವಾಗಿದ್ದು ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿರುವ ಕೋಟ್ಯಾವಧಿ ಯುವ ಪೀಳಿಗೆಯನ್ನು ಜ್ಞಾನವಂತರನ್ನಾಗಿ ಮಾಡುವ ಅವಶ್ಯಕತೆಯಿದೆ. ನಮ್ಮ ದೇಶದ ವಿಶ್ವವಿದ್ಯಾನಿಲಯಗಳು ಜಾಗತಿಕ ಮಟ್ಟದ 100 ಅಗ್ರಮಾನ್ಯ ವಿಶ್ವವಿದ್ಯಾನಿಲಯಗಳ ಪಂಕ್ತಿಯಲ್ಲಿ ಬರದೇ ಇರುವುದು ವಿಷಾದನೀಯವೆಂದು ಪ್ರೊ. ಜಿ. ಎನ್. ದೇವಿಯವರು ಖೇದ ವ್ಯಕ್ತಪಡಿಸಿದರು.
ಭಾರತೀಯ ಸಮಾಜ - ವಿಜ್ಞಾನಗಳ ಅನುಸಂಧಾನ ಪರಿಷತ್ತಿನಿಂದ ದಿ. 16ರಿಂದ 25ರವರೆಗೆ ನಡೆಯುತ್ತಿರುವ
ಸಮಾಜ-ವಿಜ್ಞಾನ ವಿಷಯಗಳಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುತ್ತಿರುವ ವಿದ್ಯಾಥರ್ಿಗಳಿಗಾಗಿ ರಿಸಚರ್್ ಮೆಥಡಾಲಜಿ ಕೋರ್ಸ/ಸಂಶೋಧನಾ ವಿಧಾನಗಳ ಕಾಯರ್ಾಗಾರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಭಾರತದಲ್ಲಿ ಸಂಶೋಧನೆಗಳು ಕಳಪೆಮಟ್ಟದ್ದಾಗಿದ್ದು ಈ ನಿಟ್ಟಿನಲ್ಲಿ ವಿಶೇಷ ಗಮನಹರಿಸುವುದು ಅವಶ್ಯಕವಾಗಿದೆ. ಸಂಶೋಧನೆಗಳು ಬೋಧನೆಗೆ ತಳಪಾಯವಾಗಿವೆ. ಸಂಶೋಧನಾ ವಿದ್ಯಾಥರ್ಿಗಳು ಸದರಿ ಕಾಯರ್ಾಗಾರದ ಸಂಪೂರ್ಣ ಉಪಯೋಗ ಪಡೆದುಕೊಂಡು ಉತ್ತಮ ಭವಿಷ್ಯಕ್ಕಾಗಿ ಜ್ಞಾನಾರ್ಜನೆಯನ್ನು ಗಳಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಕನರ್ಾಟಕ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಈಶ್ವರಭಟ್ ಅವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿ, ಸಂಶೋಧನಾ ವಿದ್ಯಾಥರ್ಿಗಳು ಸಂಶೋಧನಾ ಪರಿಕಲ್ಪನೆಗಳು ಹಾಗೂ ಸಂಬಂಧಪಟ್ಟ ವಿಷಯಗಳ ಮೇಲೆ ಸೂಕ್ತ ಪ್ರಶ್ನೆಗಳನ್ನು ಕೇಳುವಂತಾಗಬೇಕು. ತನ್ಮೂಲಕ ಸದರಿ ಕಾಯರ್ಾಗಾರದಿಂದ ಹೆಚ್ಚು ಜ್ಞಾನಗಳಿಸಿಕೊಳ್ಳಲು ಸಹಕಾರಿಯಾಗಬಲ್ಲದೆಂದರು. ಪರಿಕಲ್ಪನಾತ್ಮಕ ಮತ್ತು ನೀತಿ ನಿರೂಪಣೆಗೆ ಅವಶ್ಯವಿರುವ ಸಂಶೋಧನೆಗಳ ಅಗತ್ಯತೆ ಇದೆಯೆಂದು ಅಭಿಪ್ರಾಯಪಟ್ಟರು. ನೀತಿ ನಿರೂಪಕ ಸಂಶೋಧನೆಗಳು ಸಮಾಜಕ್ಕೆ ಹೆಚ್ಚು ಲಾಭದಾಯಕ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿರುವ ಪ್ರೊ. ಜಿ.ಕೆ. ಕಡೆಕೋಡಿಯವರು ಸಧ್ಯದ ಪರಿಸ್ಥಿತಿಯಲ್ಲಿ ವಿದ್ಯಾಥರ್ಿಗಳು ಹೆಚ್ಚು ಹೆಚ್ಚು ಇಂತಹ ಕಾಯರ್ಾಗಾರಗಳಲ್ಲಿ ಭಾಗವಹಿಸಿ ನೀತಿಯುಕ್ತ ಸಂಶೋಧನೆಗಳನ್ನು ಕೈಗೊಳ್ಳಬೇಕೆಂದರು. ಇಂತಹ ಸದಾವಕಾಶಗಳನ್ನು ಈ ಪ್ರದೇಶದಲ್ಲಿ ಅಲಭ್ಯ ಇರುವುದರಿಂದ ಸಿ.ಎಂ.ಡಿ.ಆರ್ ಸಂಸ್ಥೆಯನ್ನು ಸದರಿ ಕಾಯರ್ಾಗಾರಕ್ಕೆ ಸಂಘಟಿಸಿದ್ದಕ್ಕಾಗಿ ಶ್ಲಾಘಿಸಿದರು.
ಸಿ.ಎಂ.ಡಿ.ಆರ್ ಸಂಸ್ಥೆಯ ನಿದರ್ೇಶಕ ಪ್ರೊ. ವಿ. ಬಿ. ಅಣ್ಣಿಗೇರಿಯವರು ಸ್ವಾಗತಿಸಿದರು. ಡಾ. ಎ. ಆರ್. ಕುಲಕಣರ್ಿಯವರು ಕಾಯರ್ಾಗಾರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜೈ ಪ್ರಭಾಕರ್, ಡಾ. ಎಸ್. ಹನಗೋಡಿಮಠ, ಡಾ. ಡಿ. ಆರ್. ರೇವಣಕರ್, ಪ್ರೊ. ನಯನತಾರಾ ನಾಯಕ ಉಪಸ್ಥಿತರಿದ್ದರು.