ಲೋಕದರ್ಶನ ವರದಿ
ಧಾರವಾಡ
10: ನಿತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಸುಳಿಯಿಂದ ಪಾರಾಗಲು ಅನೇಕರು ದುಶ್ಚಟಗಳ ಬೆನ್ನುಬಿದ್ದು, ವ್ಯಸನಿಗಳಾಗುತ್ತಾರೆ. ಇದರಿಂದಾಗಿ ತಮ್ಮ ಮಾನಸಿಕ ಆರೋಗ್ಯ
ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೆ.
ವ್ಯಸನಮುಕ್ತ ಸಮಾಜ ರೂಪಿಸಲು ಪ್ರತಿ
ಕ್ಷೇತ್ರದ ತಜ್ಞರು ಕೈಜೋಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ
ಭೂತೆ ಹೇಳಿದರು.
"ಅವರು ಇಂದು ನಗರದ ಡಿಮ್ಯಾನ್ಸ್ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ "ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ" ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಬಹಳಷ್ಟು ಜನರು ಬದುಕಿನಲ್ಲಿ ಎದುರಾಗುವ ಸಮಸ್ಯೆಗಳ ನೆಪವೊಡ್ಡಿ, ಪರಿಹಾರ ಕಾಣದೆ ತಾತ್ಕಾಲಿಕ ಬಿಡುವಿಗಾಗಿ ಮದ್ಯಪಾನ, ಧೂಮ್ರಪಾನದಂತಹ ದುಶ್ಚಟಗಳಿಗೆ ಮೊರೆ ಹೋಗುತ್ತಾರೆ. ಇದರಿಂದ ಅವರ ಜೀವನವೇ ಹಾಳಾಗುತ್ತದೆ. ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿ ಕುಟುಂಬ ಮತ್ತು ಸಮಾಜದ ನೆಮ್ಮದಿಗೆ ಭಂಗ ತರುತ್ತಾರೆ. ಇಂದಿನ ಯುವಕರು ವ್ಯಸನಗಳಿಂದಾಗಿ ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ಅವರಿಗೆ ಉತ್ತಮ ಮಾರ್ಗದರ್ಶನ, ಆಪ್ತಸಮಾಲೋಚನೆಯ ಅಗತ್ಯವಿದೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರಗಳು ಯುವಕರ ವ್ಯಕ್ತಿತ್ವದಲ್ಲಿ ಮೂಡಿ ಬರುವಂತೆ ಜಾಗೃತಿ ವಹಿಸಬೇಕು. ಸದಾಕಾಲ ಸಕಾರಾತ್ಮಕ ಚಿಂತನೆ ಮಾಡುವಂತೆ ಯುವ ಸಮೂಹವನ್ನು ಬೆಳೆಸಬೇಕಿದೆ. ಶಾಲಾ ಹಂತದಿಂದಲೇ ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಸದೃಢತೆ ಬೆಳೆದು ಬರುವಂತೆ ನೀತಿಪಾಠ ರೂಢಿಸಬೇಕು. ಈ ನಿಟ್ಟಿನಲ್ಲಿ ಪಾಲಕರ, ಶಿಕ್ಷಕರ, ಸಮಾಜ ಮತ್ತು ವೈದ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.
ಆರ್.ಎಸ್.ಚಿಣ್ಣನ್ನವರ್ ಹಾಗೂ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ಎಮ್.ದೊಡ್ಡಮನಿ ಅವರು, ಮಾನಸಿಕ ಆರೋಗ್ಯ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು
ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ಡಿಮ್ಯಾನ್ಸ್ ಸಂಸ್ಥೆಯ ವೈದ್ಯರು, ಸಿಬ್ಬಂದಿ ಹಾಗೂ ನಸರ್ಿಂಗ್ ವಿದ್ಯಾಥರ್ಿಗಳು
ಪಾಲ್ಗೊಂಡಿದ್ದರು.