ನಮ್ಮ ಫ್ಲಿಕ್ಸ್ ನಲ್ಲಿ “ಕನ್ನಡ್ ಗೊತ್ತಿಲ್ಲ”

ಬೆಂಗಳೂರು, ಏ 02,ನಮ್ಮ ಫ್ಲಿಕ್ಸ್ ಆ್ಯಪ್ ಅನ್ನು ಎಲ್ಲಾ ಕನ್ನಡಿಗರು ಮೆಚ್ಚಿ, ಒಪ್ಪಿಕೊಂಡಿದ್ದು,  ಗೂಗಲ್ ರಿವ್ಯೂ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನಮ್ಮ ಫ್ಲಿಕ್ಸ್ ತಂಡ ತಿಳಿಸಿದ್ದು, ಬೆಂಬಲ ಮುಂದುವರಿಸುವಂತೆ ಮನವಿ ಮಾಡಿದೆ.ಇದೇ ವೇಳೆ ವೀಕ್ಷಕರ ಒತ್ತಾಯ ಹಾಗೂ ಸಲಹೆ ಮೇರೆಗೆ ಪ್ರತಿವಾರ ಒಂದೊಂದು ಹೊಚ್ಚಹೊಸ ಸಿನಿಮಾ ಗಳನ್ನು  ಬಿಡುಗಡೆ ಮಾಡಲು "ನಮ್ಮ ಫ್ಲಿಕ್ಸ್"  ತಂಡ ನಿರ್ಧರಿಸಿದೆ.ಈ ವಾರ  "ನಮ್ಮ ಫ್ಲಿಕ್ಸ್" ಆ್ಯಪ್ ಮೂಲಕ ಹರಿಪ್ರಿಯ ನಟನೆ, ಮಯೂರ ರಾಘವೇಂದ್ರ ನಿರ್ದೇಶನ ಹಾಗೂ ಶ್ರೀ ರಾಮರತ್ನ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಯಶಸ್ಸನ್ನು ಕಂಡಿದ್ದ ಚಿತ್ರ ಮನರಂಜಿಸಲಿದೆ.  ಎಂದು ತಿಳಿಸಿರುವ ನಮ್ಮ ಫ್ಲಿಕ್ಸ್ ತಂಡ, ಪ್ರತಿ ವಾರ ಹೊಸ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಿ, ಸೇಫಾಗಿ ಮನೆಯಲ್ಲೇ ಇರಿ ಅಂತ ಮನವಿ ಮಾಡಿದೆ.