ಯಲಬುರ್ಗಾ: ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿರಿ: ರಾಯರಡ್ಡಿ

ಲೋಕದರ್ಶನ ವರದಿ

ಯಲಬುರ್ಗಾ  03: ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವದು ನಿಶ್ಚಿತವಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣಾ ನಿಮಿತ್ಯ ಏರ್ಪಡಿಸಿದ್ದ ಕಾರ್ಯಕರ್ತರ  ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿಯವರ ಆಡಳಿತದಿಂದ ಬೆಸತ್ತ  ಜನತೆ ಬದಲಾವಣೆಯನ್ನು  ಬಯಸಿದ್ದಾರೆ ಅದರಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಗಲಿದೆ ಅದರಂತೆ ಯುಪಿಎ ಸರಕಾರ ಮಾಡಿದಂತಹ ಹಲವಾರು ಯೋಜನೆಗಳು ಬಡವರ ದಿನ ದಲಿತರ ಪರವಾಗಿದ್ದು ಜನತೆ ಅವುಗಳನ್ನ ಮರೆತಿಲ್ಲಾ ಬಿಜೆಪಿಯವರು ಸುಳ್ಳು ಬರವಸೆಗಳನ್ನ ನೀಡಿ ಅಧಿಕಾರಕ್ಕೆ ಬಂದು ಯಾವುದೆ ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುವ ಯೋಜನೆಗಳನ್ನ ಜಾರಿಗೆ ತಂದಿರುವದಿಲ್ಲಾ ಅವರದು ಕೇವಲ ಕಾರ್ಪೊರೇಟರ್  ಸಂಸ್ಕೃತೀಯ ಆಡಳಿತವಾಗಿದೆ ಜನತೆ ಎಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದು ಇಗ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ ಮಾತನಾಡಿ ಇದೆ ಎ,04 ರಂದು ಕೊಪ್ಪಳ ಲೋಕಸಭಾ ಅಭ್ಯರ್ಥಿ  ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಸುತ್ತಿದ್ದು ಅಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ ಅಂದು ನಮ್ಮ ಕಾಂಗ್ರೇಸ್ ಪಕ್ಷ ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಆಗಮಿಸಬೇಕು ಎಂದರು,

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಪಂ ಸದಸ್ಯರಾದ ಹನುಮಂತಗೌಡ ಚಂಡೂರು, ಮುಖಂಡರಾದ ರುದ್ರಪ್ಪ ಮರಕಟ್,ಯಂಕಣ್ಣ ಯರಾಸಿ, ಕೇರಿಬಸಪ್ಪ ನಿಡಗುಂದಿ, ಸುಭಾಸ್ ಮಾದಿನೂರು, ಕಳಕಪ್ಪ ಕಂಬಳಿ, ಮಹೇಶ ಹಳ್ಳಿ, ರೇವಣೆಪ್ಪ ಸಂಗಟಿ, ಮುತ್ತಣ್ಣ ಗದುಗಿನ, ಬಿ ಎಂ ಶಿರೂರು, ಜೆಡಿಎಸ್ ಮುಖಂಡರಾದ ಅಂದಾನಗೌಡ ಪೋಲಿಸ್ಪಾಟೀಲ, ಬಸವರಾಜ ಕುಡಗುಂಟಿ, ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

ಜೆಡಿಎಸ್ ಮುಖಂಡರ ಗೈರು: ಜೆಡಿಎಸ್ನ ಯಾವುದೇ ತಾಲೂಕ ಪಧಾದಿಕಾರಿಗಳಿಗಾಗಲಿ ಅಥವಾ ಕಾರ್ಯಕರ್ತರಿಗಾಗಲಿ ಸಭೆಯ ಮಾಹಿತಿ ನೀಡದೆ ಇರುವದರಿಂದ ಜೆಡಿಎಸ್ನ ಯಾವುದೇ ಕಾರ್ಯಕರ್ತರು ಆಗಮಿಸರಲಿಲ್ಲಾ ಕೇಲವು ಮುಖಂಡರು ಭಾಗವಹಿಸಿದ್ದು ಅವರ ವೈಯಕ್ತಿಕ ವಿಚಾರ ನಮ್ಮ ಪಕ್ಷದ ವತಿಯಿಂದ ಅವರು ಹೊಗಿರುವದಿಲ್ಲಾ ಇಲ್ಲಿ ಯಾವುದೇ ಮೈತ್ರಿ ಧರ್ಮ ಪಾಲನೆಯಾಗುವದಿಲ್ಲಾ  ಆದ್ದರಿಂದ ನಮ್ಮ ಪಕ್ಷದ ಕಾರ್ಯಕರ್ತರ ಜೊತೆ ಚಚರ್ಿಸಿ ಮುಂದಿನ ತೀರ್ಮಾನ  ಮಾಡಲಿದ್ದೆವೆ ಎಂದು ಜೆಡಿಎಸ್ ತಾಲೂಕ ಅದ್ಯಕ್ಷ ಶರಣಪ್ಪ ಕರಂಡಿ ಹೇಳಿದರು.