ಹೈದರಾಬಾದ್ 10: ಭಾರತೀಯ ಕ್ರಿಕೆಟ್ ರಂಗದ ದೃವತಾರೆ... ಟೀಂ ಇಂಡಿಯಾವನ್ನು ಉತ್ತುಂಗಕ್ಕೆ ಒಯ್ದ ಹೀರೋ ಅಂದರೆ ಅದು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ...
ದಾದಾ ಸೌರವ್ ಗಂಗೂಲಿ ನಂತರ ಭಾರತ ಕ್ರಿಕೆಟ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ ಮಾಹಿ ಮತ್ತೆ ತಿರುಗಿ ನೋಡಲೇ ಇಲ್ಲ... ಕ್ರಿಕೆಟ್ನ ಮೂರು ಫಾಮರ್ೆಟ್ಗಳಲ್ಲಿ ತಂಡವನ್ನು ಔನ್ಯತ್ತಕ್ಕೆ ಒಯ್ದಿದ್ದು ಇದೆ ಮಹೇಂದ್ರ ಸಿಂಗ್ ಧೋನಿ.
ತಂಡಕ್ಕೆ ಸೇರಿದ ಆರಂಭದಲ್ಲಿ ತಮ್ಮ ಹೇರ್ ಸ್ಟೈಲ್ನಿಂದಲೇ ಪಾಕ್ನ ಆಗಿನ ಅಧ್ಯಕ್ಷ ಫವರ್ೆಜ್ ಮುಷರಫ್ ಅವರ ಮೆಚ್ಚುಗೆ ಪಾತ್ರರಾಗಿದ್ದರು. ಅಷ್ಟೇ ಅಲ್ಲ ದೇಶಾದ್ಯಂತ ಅಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದಾರೆ.
ಮೊನ್ನೆ ಮೊನ್ನೆ 37 ನೇ ಹುಟ್ಟು ಹಬ್ಬ ಆಚರಿಸಿಕೊಂಡ ಧೋನಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.. ಧೋನಿ ತಮ್ಮ ಯಶಸ್ವಿ ನಾಯಕತ್ವದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಅಚ್ಚರಿಕರ ಸಂಗತಿಯೊಂದನ್ನು ಹೊರ ಹಾಕಿದ್ದಾರೆ.
ಏನಪ್ಪ ಅಂದರೆ, ಅದುವೇ ಕಾಮನ್ ಸೆನ್ಸ್... ಅಂದರೆ ಪ್ರತಿಯೊಬ್ಬನಿಗೂ ಇರಬೇಕಾದ ಸಾಮಾನ್ಯ ಸಂಗತಿಗಳು.. ಎಲ್ಲರ ಮನಸನ್ನು ಅರಿತುಕೊಳ್ಳುವ ಸ್ವಭಾವ... ಸಂದರ್ಭವನ್ನು ನಿಭಾಯಿಸಲು ಇರಬೇಕಾದ ಸಡನ್ ನಿಧರ್ಾರ ಹಾಗೂ ಸಾಮಾನ್ಯ ಜ್ಞಾನ. ಇದುವೇ ಮಾಹಿಯ ಹಿಂದಿರುವ ಯಶಸ್ಸಿನ ಗುಟ್ಟಂತೆ... ಇದು ಅಚ್ಚರಿಯಾದರೂ ನಿಜ.
ಸಹ ಆಟಗಾರರ ಅಭಿಪ್ರಾಯಗಳನ್ನು ಗೌರವಿಸುವುದು ಅತ್ಯವಶ್ಯಕ.. ಸಮಸ್ಯೆ ತಲೆಧೋರಿದಾಗ ಸ್ವಲ್ಪವೇ ಕಾಮನ್ ಸೆನ್ಸ್ ಉಪಯೋಗಿಸಿದರೆ, ತಕ್ಷಣವೇ ಎಲ್ಲ ಪರಿಹಾರ ಆಗುತ್ತೆ ಎನ್ನುತ್ತಾರೆ ಧೋನಿ... ಅಲ್ಲದೇ ಎಲ್ಲರೊಂದಿಗೆ ಯಾವುದೇ ಬಿಗುಮಾನ ತೋರದೆ ಸ್ನೇಹಪರವಾಗಿರುವುದೇ ಯಶಸ್ಸಿನ ಹಿಂದಿರುವು ಗುಟ್ಟು... ಇದು ಮೊನ್ನೆ ನಡೆದ ಮಾಹಿ ಹುಟ್ಟು ಹಬ್ಬವೇ ಧೋನಿ ಅವರ ಗುಣವನ್ನು ಸಾರಿ ಹೇಳುತ್ತಿದೆ