ಕಾಗವಾಡ 05: ಜೈನಸಮಾಜ ಅತಿ ಪ್ರಾಚೀನ ಸಮಾಜ. ವಿಶ್ವ ಶಾಂತಿಗಾಗಿ, ಅಹಿಂಸಾ ತತ್ವಗಳನ್ನು ಸಾರಿ ಹೇಳುತ್ತಾ, ಸಮಾಜದ ಮುನಿಗಳು, ಸಂಪೂರ್ಣ ಜೀವನ ಮೂರು ಋತುಗಳಲ್ಲಿ ದಿಗಂಬರವಾಗಿ ಉಳಿದು, ಬರಿಗಾಲಿನಿಂದ ಇಡಿ ದೇಶ ಬ್ರಹ್ಮಣವಾಗಿ ಮಾಡಿ, ಅಹಿಂಸಾ ತತ್ವಗಳು ಸಾರಿ ಹೇಳುತ್ತಾ, ಶರೀರ ಮೇಲೆ ಮೋಹ ಇಡದೆ, ಶರೀರ ಸಾಥ ನೀಡದೆ ಇದ್ದಾಗ ಬೇರೆಯವರಿಂದ ಸೇವೆ ತಗೆದುಕೊಳ್ಳದೆ, ಯಮಸಲ್ಲೇಖನ್ ವೃತ್ ಧರಿಸಿ, ಸಾವಿಗೆ ಹೆದರದೆ, ಅದರ ಎದುರು ಹೋಗುವ ಸಾಮಥ್ರ್ಯ ಜೈನ ಮುನಿಗಳಲ್ಲಿ ಮಾತ್ರ ಇದೆ ಎಂದು ಗಣಿಣಿ ಜೀನಮತಿ ಮಾತಾಜಿ ಹೇಳಿದರು.
ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಆಚಾರ್ಯ ಶಾಂತಿಸಾಗರ ಜೈನ ಆಶ್ರಮದಲ್ಲಿ ಕಳೆದ 13 ದಿನಗಳಿಂದ ಸಂಪೂರ್ಣವಾಗಿ ನೀರು ಸಹಿತ ತ್ಯಜಿಸಿ ಗುರುವಾರ ಬೆಳಗ್ಗೆ 7:32 ಸಮಯದಲ್ಲಿ ಸಮಾಧಿ ಮರಣ ಹೊಂದಿದ ವಾರಿಸೆನ್ ಮುನಿ ಮಹಾರಾಜರು(90) ಅಂತಿಮ ಸಂಸ್ಕಾರ ಸಮಯದಲ್ಲಿ ಅವರು ಹೇಳಿದರು.
ಸಮಾಧಿ ಸಮ್ರಾಟ್ ಆಚಾರ್ಯ ಸುಭಲಸಾಗರ್ ಮುನಿ ಮಹಾರಾಜರ ಮತ್ತು ಆಚಾರ್ಯ ದೇವಸೆನ್ ಮುನಿ ಮಹಾರಾಜರ ಸಂಘದಲ್ಲಿಯ ವಾರಿಸೆನ್ ಮುನಿಗಳಾಗಿದ್ದರು. ಅವರು ಮೂಲತಾ ಜಮಖಂಡಿ ತಾಲೂಕಿನ, ತೇರದಾಳ ಗ್ರಾಮದ ನೇಮಣ್ಣಾ ತವನಪ್ಪಾ ಬನಿಜವಾಡ ಗ್ರಾಮದವರು. ಸನ್ 1996ರಲ್ಲಿ ಆಚಾರ್ಯ ಸುಭಲಸಾಗರ್ ಮುನಿ ಮಹಾರಾಜರದಿಂದ ಮುನಿದೀಕ್ಷೆ ಸ್ವೀಕರಿಸಿದರು. 22 ವರ್ಷಗಳಲ್ಲಿ ಸಂಘದ ಮುನಿಗಳೊಂದಿಗೆ ಸಂಪೂರ್ಣದೇಶ ಬ್ರಹ್ಮಣ ಮಾಡಿದ್ದರು.
ವಾರಿಸೆನ್ ಮುನಿಗಳ ಶರೀರ ಸಾಥ ನೀಡದೆ ಇದಿದ್ದರಿಂದ, ಇನ್ನೊಬ್ಬರ ಸಹಾಯ ಪಡೆಯದೆ. ಪ್ರಾರಂಭದಲ್ಲಿ ಆಹಾರ, ರಸ್ ನಂತರ ನೀರು ತ್ಯಜಿಸಿ, ಗುರುವಾರರಂದು ಸಮಾಧಿ ಮರಣ ಹೊಂದರು.
ಆಚಾರ್ಯ ದೇವಸೇನ ಮುನಿಮಹಾರಾಜರು ಜೀನಮತಿ ಮಾತಾಜಿ ಅವರ ಸಾನಿಧ್ಯದಲ್ಲಿ ಪ್ರತಿಷ್ಠಾಚಾರ್ಯ ಅಥಣಿಯ ಆನಂದ ಉಪಾಧ್ಯೆ, ಬಾಹುಬಲಿ ಉಪಾಧ್ಯೆ, ಕುಮಾರ ಅಲಗೌಡರ್ ಅಂತ್ಯಕ್ರಿಯೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಆಚಾರ್ಯ ಶಾಂತಿಸೆನ್ ಮಹಾರಾಜ, ಆಚಾರ್ಯ ವಜ್ರಸೆನ್ ಮಹಾರಾಜ, ಮಹಿಮಾಸಾಗರ ಮಹಾರಾಜರು, ಕ್ಷುಲ್ಲಕ ಮಹಾರಾಜರಾದ ದಿವ್ಯಸೆನ್, ಸಮಾಧಿಸೆನ್ ಮುನಿಗಳು ಸಾನಿಧ್ಯ ವಹಿಸಿದ್ದರು.
ಶ್ರೀಗಂಧ ಕಟ್ಟಿಗೆ, ಕೊಬ್ಬರಿ, ಹಾಲು, ತುಪ್ಪ, ಕಪರ್ೂರ, ಚಂದನ ಮೊದಲಾದ ಪದಾರ್ಥಗಳಿಂದ ಸ್ವಾಮಿಜೀಯವರ ಅಂತ್ಯಕ್ರಿಯೆ ಮಾಡಲಾಯಿತು. ತೇರದಾಳದ ಭೂಪಾಲ ಕಾಗೆ ಚಂದನಾಭೀಷೇಕ ಮಾಡಿದರು. ಬೀಬಾತಾಯಿ ಹನುಮನ್ನವರ ತುಪ್ಪದಅಭಿಷೇಕ ಮಾಡಿದರು. ಅಮೋಲ ಖಟಾವಣೆ ಕಬ್ಬಿನ ಹಾಲು, ಸಿದ್ದಪ್ಪ ಕೋರೆಗೇರಿ ಕಡಲೆಬೆಳೆ ಅಭಿಷೇಕ, ರಾವಸಾಬ ಉಗಾರೆ, ಧರಪ್ಪ ಕಾಗೆ ಮೊದಲಾದವರು ಅಂತ್ಯಕ್ರಿಯೇ ಪೂರ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವಿಜಯಪುರ ಚಡಚಣದ ಉದ್ಯಮಿ ಅಜೀತ ಮುತ್ತಿನ್ರವರು ಅಗ್ನಿ ಸ್ಪರ್ಶ ಮಾಡಿದರು.
ಸಮಾಧಿ ಮರಣ ಆತ್ಮಹತ್ಯೆ ಅಲ್ಲ:
ಜೈನ ಸಮಾಜದ ಮುನಿಗಳು ಸಮಾಧಿ ಮರಣ ಸ್ವೀಕರಿಸುತ್ತಾರೆ. ಇದು ಆತ್ಮಹತ್ಯೆ ಅಲ್ಲ. ಇದು ಅವರ ಆತ್ಮ ಉಜರ್ಿತ್ ಅವಸ್ಥೆಗೆ ಒಯುತ್ತಾರೆ. ಸಮಾಧಿ ಮರಣ ಹೊಂದಿರುವ ಮುನಿಗಳು ಈ ಶರೀರವನ್ನು ಬಿಟ್ಟು, ಬೇರೆ ಶರೀರವನ್ನು ಪ್ರವೇಶಿಸಿದ್ದಾರೆ. ಇದು ಜೈನ ಧರ್ಮದಲ್ಲಿ ಉಲ್ಲೇಖವಿದೆ ಎಂದು ಅಥಣಿಯ ಹಿರಿಯ ಪಂಡಿತರಾದ ಆನಂದ ಉಪಾಧ್ಯೆ ಪ್ರತಿಕ್ರಿಯೆಸಿದರು.
ಫೋಟೊಶಿಷರ್ಿಕೆ: ವಾರಿಸೆನ್ ಮುನಿ ಮಹಾರಾಜರ ಸಮಾಧಿ ಮರಣ ಬಳಿಕ ಅಂತ್ಯ ಸಂಸ್ಕಾರದ ವಿಧಿ ಕಾರ್ಯಕ್ರಮದಲ್ಲಿ ವಿಜಯಪುರ ಚಡಚಣದ ಉದ್ಯಮಿ ಅಜೀತ ಮುತ್ತಿನ್ರವರು ಅಗ್ನಿ ಸ್ಪರ್ಶ ಮಾಡಿದರು.
ಮುನಿ -