ನಾಳೆ ಅಹಿಲ್ಯಾಬಾಯಿ ಹೋಳ್ಕರ ಜಯಂತ್ಯೋತ್ಸವ


ಲೋಕದರ್ಶನ ವರದಿ

ವಿಜಯಪುರ 06:  ಜಿಲ್ಲಾ ಕುರುಬ (ಹಾಲುಮತ) ನೌಕರರ ಸಂಘ ಹಾಗೂ ಜಿಲ್ಲಾ ಕುರುಬರ ಸಂಘ ಮತ್ತು ಹಾಲುಮತ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ದಿ.  8ರಂದು ರವಿವಾರದಂದು ಸಂಗನಬಸವ ಸಭಾಭವನ ಲಿಂಗದ ಗುಡಿ ಹತ್ತಿರ ವಿಜಯಪುರದಲ್ಲಿ ಅಹಿಲ್ಯಾಬಾಯಿ ಹೋಳ್ಕರ ಜಯಂತ್ಯೋತ್ಸವ ಹಾಗೂ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದಿ.8ರಂದು ಬೆಳಿಗ್ಗೆ 8.00 ಗಂಟೆಗೆ ಕನಕದಾಸ ವೃತ್ತ ದಿಂದ ಪ್ರಾರಂಭಗೊಂಡು ಅಂಬೇಡ್ಕರ ವೃತ್ತ, ಗಾಂಧಿವೃತ್ತ ಹಾಗೂ ಸಿದ್ದೇಶ್ವರ ದೇವಸ್ಥಾನ ಮಾರ್ಗವಾಗಿ ಅಹಿಲ್ಯಾಬಾಯಿ ಹೋಳ್ಕರ ಭಾವಚಿತ್ರ ಮೆರವಣಿಗೆ, ಕುಂಭಮೇಳ ಹಾಗೂ ವಿವಿಧ ವಾದ್ಯ ವೃಂದಗಳೊಂದಿಗೆ ಮೆರವಣಿಗೆ ಜರುಗಲಿದೆ. ನಂತರ ಬೆಳಿಗ್ಗೆ 11.00 ಗಂಟೆಗೆ ಸಂಗನಬಸವ ಸಭಾಭವನದಲ್ಲಿ ಅಹಿಲ್ಯಾಬಾಯಿ ಹೋಳ್ಕರ ಜಯಂತ್ಯೋತ್ಸವ ಮತ್ತು ಉಪನ್ಯಾಸ, ಶೇಕಡಾ 85ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ. ,ದ್ವಿತಿಯ ಪಿ.ಯು.ಸಿ. ಕುರುಬ ಸಮಾಜದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ, 2017-18 ನೇ ಸಾಲಿನಲ್ಲಿ ನೂತನವಾಗಿ ನೇಮಕವಾದ, ನಿವೃತ್ತಿ ಹೊಂದಿದ ನೌಕರರಿಗೆ ಹಾಗೂ ವಿಶೇಷ ಸಾಧನೆಗೈದ ಸಾಧಕರಿಗೆ  ಸನ್ಮಾನ ಕಾರ್ಯಕ್ರಮ ಜರುಗುವುದು.

ಆದ್ದರಿಂದ ಸದರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಾಂಧವರು, ನೌಕರರು, ವಿದ್ಯಾಥರ್ಿಗಳು ಭಾಗವಹಿಸಬೇಕೆಂದು ಜಿಲ್ಲಾ ಕುರುಬರ (ಹಾಲುಮತ) ನೌಕರರ ಸಂಘದ ಅದ್ಯಕ್ಷರಾದ ಚಂದ್ರಶೇಖರ ಬಗಲಿ, ಉಪಾಧ್ಯಕ್ಷರಾದ ರವಿ ಕಿತ್ತೂರ, ಕಾರ್ಯದಶರ್ಿಗಳಾದ ಸುನೀಲ ತೋಂಟಾಪೂರ, ಖಜಾಂಚಿಗಳಾದ ಮಲ್ಲು ವಾಲಿಕಾರ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9844667275, 9980685833 ಇಲ್ಲಿಗೆ ಸಂಪಕರ್ಿಸಲು ಕೋರಲಾಗಿದೆ.