ಧಾರವಾಡ 05: ಇಲ್ಲಿನ ಹೊಸ ಯಲ್ಲಾಪೂರ ಮಾರುತಿ ಮಂದಿರದಿಂದ ಶ್ರೀಕ್ಷೇತ್ರ ಫಂಡರಪುರಕ್ಕೆ 5ರಂದು 28ನೇ ವರ್ಷದ ಪಾದಯಾತ್ರೆ ಹೊರಡಲಿದೆ. ಸುಭಾಸ ಧಮರ್ಾಜಿ ಅವರ ನೇತೃತ್ವದಲ್ಲಿ ಹೊರಡುವ ಪಾದಯಾತ್ರೆಯು ಅಮ್ಮಿನಭಾವಿ, ಇನಾಮಹೊಂಗಲ, ಸವದತ್ತಿ, ಗೊಡಚಿ, ಸಾಲಹಳ್ಳಿ, ಹಲಕಿ, ಮುಧೋಳ, ಜಮಖಂಡಿ, ಸಾವಳಗಿ, ತೇಲಸಂಗ, ಉಮರಾಣಿ, ಜತ್ತ, ಗಿರಡಿ ಮಾರ್ಗವಾಗಿ 27ರಂದು ಫಂಡರಪುರ ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಯಸುವವರು ರಾಜು ಕಾಳೆ ಮೊ. 9342943950, ಸುಭಾಸ ಪವಾರ ಮೊ. 959066713 ಗೆ ಸಂಪಕರ್ಿಸಬಹುದು ಎಂದ ಪ್ರಕಟಣೆ ತಿಳಿಸಿದೆ. ತಾಲೂಕಿನ ನರೇಂದ್ರ ಗ್ರಾಮದಿಂದ ಶ್ರೀಕ್ಷೇತ್ರ ಫಂಡರಪುರಕ್ಕೆ 5ರಂದು 22ನೇ ವರ್ಷದ ಪಾದಯಾತ್ರೆ ಹೊರಡಲಿದೆ. ಹನಮಂತಪ್ಪ ಶಿಂಧೆ ಅವರ ನೇತೃತ್ವದಲ್ಲಿ ಹೊರಡುವ ಪಾದಯಾತ್ರೆಯು ಕುರುಬಗಟ್ಟಿ, ಹಿರೇ ಉಳ್ಳಿಗೇರಿ, ಚುಂಚನೂರು, ಶಿರೋಳ, ಜಮಖಂಡಿ, ತೇಲಸಂಗ, ಜತ್ತ ಮಾರ್ಗವಾಗಿ 21 ರಂದು ಫಂಡರಪುರ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.