ಇಂದು ಬೆಳಗಾವಿಗೆ ಪ್ರಮುಖಸಾಗರ ಶ್ರೀಗಳುtoday


ಬೆಳಗಾವಿ 3: ಜೈನ ಮುನಿ ಪ್ರಮುಖಸಾಗರಜೀ ಮುನಿಗಳು ಬುಧವಾರ ಜುಲೈ 4 ರಂದು ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ನಗರ ಪ್ರವೇಶ ಮಾಡಲಿದ್ದಾರೆ. ಅಂದು ಬೆಳಿಗ್ಗೆ 8 ಗಂಟೆಗೆ  ಕೋಟೆ ಆವರಣದ ಬಳಿಯಿರುವ ಭರತೇಶ ಶಿಕ್ಷಣ ಸಂಸ್ಥೆಯ ಹತ್ತಿರ ಶ್ರೀಗಳನ್ನು ಜೈನ ಸಮಾಜದ ವತಿಯಿಂದ ಸ್ವಾಗತ ಕೋರಲಾಗುವುದು. ಶ್ರಿಗಳು ಮುಂದಿನ ಐದು ದಿನಗಳ ವರೆಗೆ ಬೆಳಗಾವಿ ಮಠ ಬೀದಿಯ ಚಿಕ್ಕ ಬಸದಿಯಲ್ಲಿ ವಾಸ್ತವ್ಯ ಮಾಡಲಿದ್ದು ಈ ಐದು ದಿನಗಳ ಕಾಲ ಮಧ್ಯಾಹ್ನ 3 ಗಂಟೆಗೆ ಪ್ರವಚನ  ನೀಡಲಿದ್ದಾರೆ. ಹಾಗಾಗಿ ಜೈನ ಸಮಾಜ ಬಾಂಧವರು ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು  ಸಮಾಜದ ಮುಖಂಡರಾದ ರಾಜೀವ ದೊಡ್ಡಣ್ಣವರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.