'ಭವಿಷ್ಯದ ಬಗ್ಗೆ ಮಾತಾಡಲು ಇದು ಸಮಯವಲ್ಲ

ಸೋಚಿ 02: ಒಂದು ವಿಶ್ವಕಪ್ ಪಂದ್ಯಾವಳಿ ಎನ್ನುವುದು ಅನೇಕ ಆಟಗಾರರ ಭವಿಷ್ಯವನ್ನೇ ಕೊನೆಗಾಣಿಸುತ್ತದೆ. ಇದೊಂದು ಮಾಮೂಲು ಪ್ರಕ್ರಿಯೆ. ಕಳಪೆ ಫಾರ್ಮ, ಈಡೇರದ ಕನಸು, ಹೆಚ್ಚುತ್ತಿರುವ ವಯಸ್ಸು.... ಇವೆಲ್ಲ ಆಟಗಾರರನ್ನು ನೇಪಥ್ಯಕ್ಕೆ ತಳ್ಳುವಂತೆ ಮಾಡುತ್ತದೆ. 

ಈ ಸಲದ ವಿಶ್ವಕಪ್ ಫುಟ್ಬಾಲ್ನಲ್ಲಿ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗುವವರು ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ. ಇವರಿಬ್ಬರ ತಂಡ ಕೆಲವೇ ಗಂಟೆಗಳ ಅಂತರದಲ್ಲಿ ಪ್ರೀ-ಕ್ವಾರ್ಟರ್ ಫೈನಲ್ನಲ್ಲೇ ಆಘಾತಕಾರಿ ಸೋಲುಂಡು ಹೊರಬಿದ್ದಿದೆ. ಸ್ಟಾರ್ ಆಟಗಾರರಾಗಿಯೂ ವಿಶ್ವಕಪ್ ವಿಜೇತ ತಂಡದ ಸದಸ್ಯರೆನಿಸಿಕೊಳ್ಳದಿದ್ದು ಈ ಫುಟ್ಬಾಲಿಗರಿಬ್ಬರ ದುರಂತ. 

ಮೆಸ್ಸಿ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ನಿವೃತ್ತಿಯ ಸುಳಿವನ್ನಿತ್ತಿದ್ದರು. ಫ್ರಾನ್ಸ್ ವಿರುದ್ಧ ಆಜರ್ೆಂಟೀನಾ ಸೋತ ಬಳಿಕ ಅವರು ಭಾವುಕರಾಗಿ ಮೈದಾನಕ್ಕೆ ನಮಿಸಿದ್ದನ್ನು ಕಂಡಾಗ ಇದು ನಿಜವೆನಿಸುತ್ತದೆ. ಆದರೆ ರೊನಾಲ್ಡೊ ಮಾತ್ರ ಇಂಥದೊಂದು ನಿಧರ್ಾರದ ಕುರಿತು ಮಾತಾಡಲು ಇದು ಸೂಕ್ತ ಸಮಯವಲ್ಲ ಎಂದಿದ್ದಾರೆ. 

"ಆಟಗಾರರ ಹಾಗೂ ತರಬೇತುದಾರರ ನಿವೃತ್ತಿ ಕುರಿತು ಹೇಳಿಕೊಳ್ಳಲು ಇದು ಸೂಕ್ತ ಸಮಯವಲ್ಲ. ನಮ್ಮದೊಂದು ಅದ್ಭುತ ತಂಡ. ಅಪಾರ ನಿರೀಕ್ಷೆಯನ್ನು ಹೊತ್ತಿರುವ ಯುವ ಪಡೆಯೇ ನಮ್ಮಲ್ಲಿದೆ. ಹೀಗಾಗಿ ಭವಿಷ್ಯದಲ್ಲಿ ನಮ್ಮತಂಡ ಬಲಿಷ್ಠವಾಗಿಯೇ ಉಳಿಯಲಿದೆ' ಎಂದು 4 ವಿಶ್ವಕಪ್ಗ್ಳಲ್ಲಿ ದುರಂತ ಅಂತ್ಯವನ್ನೇ ಕಂಡ ರೊನಾಲ್ಡೊ ಹೇಳಿದ್ದಾರೆ. 

ಈ ವಿಶ್ವಕಪ್ನಲ್ಲಿ ಅವರ ಗೋಲು ಗಳಿಕೆ ನಾಲ್ಕಕ್ಕೆ ನಿಂತಿದೆ. "ಪೋಚರ್ುಗಲ್ ಫುಟ್ಬಾಲ್ಗೆ ರೊನಾಲ್ಡೊ ಇನ್ನೂ ಸಾಕಷ್ಟು ಕೊಡುಗೆ ಸಲ್ಲಿಸಲಿಕ್ಕಿದೆ. ಅವರು ನಮ್ಮ ತಂಡದ ಭಾಗವಾಗಿ ಮುಂದುವರಿಯಲಿದ್ದಾರೆ' ಎಂಬ ವಿಶ್ವಾಸ ಕೋಚ್ ಫೆನರ್ಾಂಡೊ ಸ್ಯಾಂಟೋಸ್ ಆವರದು.ಮುಂದಿನ ವಿಶ್ವಕಪ್ ವೇಳೆ ರೊನಾಲ್ಡೊಗೆ 37 ವರ್ಷ ವಯಸ್ಸಾಗುತ್ತದೆ. ಆಗಲೂ ಅವರು ಪೋಚರ್ುಗಲ್ ತಂಡದಲ್ಲಿರುವರೇ ಎಂಬುದು ಕುತೂಹಲದ ಪ್ರಶ್ನೆ.