ವಿಜಯಪುರ 06: ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ರಾಜ್ಯಸರಕಾರದ ಸತ್ವಹೀನ ಬಜೆಟ್ನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್, ಕನರ್ಾಟಕ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿಚೌಕ, ಬಸವೇಶ್ವರ ಚೌಕ, ಅಂಬೇಡ್ಕರ್ ವೃತ್ತದಿಂದ ಬೃಹತ್ ರ್ಯಾಲಿಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಭಾಗ ಸಂಚಾಲಕರಾದ ಸಚೀನ ಕುಳಗೇರಿ ಮಾತನಾಡಿ, ಕನರ್ಾಟಕ ರಾಜ್ಯದ 2018-19 ನೇ ಸಾಲಿನ ಬಜೆಟ್ ಹಲವಾರು ನಿರೀಕ್ಷೆಗಳನ್ನು ಮೂಡಿಸಿತ್ತು. ಆದರೆ ನಿನ್ನೆ ಮಂಡನೆಯಾದ ರಾಜ್ಯ ಬಜೆಟ್ನಲ್ಲಿ ಬಡ, ಪ್ರತಿಭಾವಂತ, ಮತ್ತು ಹಿಂದುಳಿದ ವರ್ಗ ಸೇರಿದಂತೆ ಎಲ್ಲ ವಿದ್ಯಾಥರ್ಿಗಳಿಗೆ ನಿರಾಸೆಯನ್ನು ಉಂಟು ಮಾಡಿದೆ.
ನಿನ್ನೆ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಸತ್ವಹೀನವಾಗಿದ್ದು, ವಿದ್ಯಾಥರ್ಿಗಳಿಗೆ ಅವಶ್ಯವಿರುವ ಉಚಿತ ಬಸ್ಪಾಸ್ಗೆ ಬಗ್ಗೆ ಸಾರಿಗೆ ಸಚಿವರು ಗೊಂದಲ ಹೇಳಿಕೆಗಳನ್ನು ತುಂಬುತ್ತಿದ್ದಾರೆ. ಒಂದುವಾರದ ಹಿಂದೆ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ಕೊಡುವ ನಿಟ್ಟಿನಲ್ಲಿ ಚಚರ್ೆ ಸಹ ನಡೆಸಲಾಗಿತ್ತು. ಉಚಿತ ಬಸ್ ಪಾಸ್ ಕೊಡುವುದಾಗಿ ಮಾಧ್ಯಮಗಳ ಮೂಲಕ ತಿಳಿಸಲಾಗಿದ್ದರೂ ಸಹ ಈ ಸದ್ಯ ಇರುವ ಸಮ್ಮಿಶ್ರ ಸರಕಾರದಲ್ಲಿ ಒಬ್ಬ ಸಾರಿಗೆ ಸಚಿವರ ಹೇಳಿಕೆಯನ್ನು ಸಹ ಮಾನ್ಯ ಮುಖ್ಯಮಂತ್ರಿಗಳು ಪರಿಗಣಿಸಿಲ್ಲ. ಇನ್ನು ಎಸ್.ಸಿ., ಎಸ್.ಟಿ., ಓಬಿಸಿ ಸರಕಾರಿ ಹಾಸ್ಟೇಲ್ಗಳ ಉನ್ನತೀಕರಣ, ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಸೇರಿದಂತೆ, ಶಿಕ್ಷಣ ಕ್ಷೇತ್ರದಲ್ಲಿ ಈ ಹೊತ್ತಿನ ಅವಶ್ಯಕತೆಗಳನ್ನು ಪೂರೈಸಿರುವದಿಲ್ಲ. ಈ ನಿಟ್ಟಿನಲ್ಲಿ ಸರಕಾರವು ವಿಫಲಗೊಂಡಿದೆ. ರಾಜ್ಯದ ವಿದ್ಯಾಥರ್ಿಗಳ ಹಾಗೂ ಶಿಕ್ಷಕರ ಪಾಲಿಗೆ ಇದೊಂದು ನಿರಾಶಾದಾಯಕ ಬಜೆಟ್ ಆಗಿದ್ದು, ಆದ್ದರಿಂದ ರಾಜ್ಯ ಸರಕಾರದ ಈ ದೂರದೃಷ್ಟಿ ರಹಿತ, ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸದೇ ಇರುವದರಿಂದ ನಿನ್ನೆ ಮಂಡನೆಯಾದ ಬಜೆಟ್ನ್ನು ಅಖಿಲ ಭಾರತ ವಿದ್ಯಾಥರ್ಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಪೂಜಾರಿ, ಐಶ್ವರ್ಯ ಪವಾರ, ಅಂಬಿಕಾ ವಗ್ಗರ, ಕವಿತಾ ಸಂದಿಮನಿ, ಕೀತರ್ಿ, ಸತೀಶ ಗೋಪಗಾರ, ಸಂಭಾಜಿ ಗಜಾಕೋಶ, ಉಮೇಶ ಕಟಗರ, ಕಾತರ್ಿಕ ಇಂಗಳೆ, ಶಿವಾಜಿ ಗಾಯಕವಾಡ, ವಿವೇಕ ಗಜಾಕೋಶ, ವಿಕ್ರಮ ಚವ್ಹಾಣ, ಸಮರ್ಥ ಮಾನೆ, ರಾಕೇಶ ಚವ್ಹಾಣ, ಭಾಗ್ಯವಂತ ಚಾಂದಕವಟೆ, ಅಮೀತ ಬಜಂತ್ರಿ, ಮಂಜುನಾಥ ಯಾದವಾಡ, ಅನೀಲ ಕ್ಷೀರಸಾಗರ, ದೀಪಕ ಸಿಂದೆ, ಕಾತರ್ಿಕ ಇಲಕಲ್, ಅಮೀತ ಬಜಂತ್ರಿ, ರೋಹನ ಕಟ್ಟಿಮನಿ ಇನ್ನಿತರರು ಇದ್ದರು.