ಲೋಕದರ್ಶನ ವರದಿ
ಕೊಪ್ಪಳ 05: ಸಮಾಜದಲ್ಲಿ ಶಾಂತಿ ನೆಲೆಸಲು ಎಲ್ಲರೂ ಸೌಹಾರ್ದತಾಯುತವಾಗಿ ಜೀವನಸಾಗಿಸಲು ಪ್ರೀತಿ, ಪ್ರೇಮ, ವಿಶ್ವಾಸದಿಂದ ಸಾಗಿಸಲು ಸಮಾಜದಲ್ಲಿ ಸೌಹಾರ್ದತೆ ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕು. ಪ್ರತಿಯೊಬ್ಬರು ಈ ಕೆಲಸ ಮಾಡಬೇಕು. ಅಂದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹ್ಮದ್ ಕುಂಇ ಹೇಳಿದರು.
ಅವರು ನಗರದ ಸಾಹಿತ್ಯ ಭವನದಲ್ಲಿ ರಾಬಿತೇ ಮಿಲ್ಲತ್ ಸಂಸ್ಥೆಯಿಂದ ಈದ್ ಉಲ್ ಫಿತರ್ ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ ಈದ್ ಸೌಹಾರ್ದ ಕೂಟ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದ ಅವರು, ಸಮಾಜವನ್ನು ವಿಭಜಿಸುವ ಮನಸ್ಥಿತಿಗಳು ಎಲ್ಲೇಡೆ ವಿಜೃಂಭಿಸುತ್ತಿವೆ. ಅಂತಹ ಮನಸ್ಥಿತಿಯಿಂದ ಹೊರಬರುವ ಕೆಲಸವಾಗಬೇಕಿದೆ ಎಂದರು.
ಸಮಾಜ ಕಟ್ಟುವ ಸೌಹಾರ್ದತೆ ಬಲಪಡಿಸುವ ಕೆಲಸ ಸಾಧು, ಸಂತರು, ಪ್ರವಾಧಿಗಳು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಅಂತಹ ಸಜ್ಜನರಿಂದಲೇ ಇಂದು ಮಾನವ ಬದುಕಿದ್ದಾನೆ. ಈ ರೀತಿಯ ಸೌಹಾರ್ದ ಕೂಟ ನಿರಂತರವಾಗಿ ಆಯೋಜಿಸಬೇಕಾದ ಅಗತ್ಯ ಬಂದಿದೆ. ಏಕೆಂದರೇ ಕೆಲ ದುಷ್ಠ ಶಕ್ತಿಗಳು ಸಮಾಜ ವಿಭಜಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಸೌಹಾರ್ದ ಕೂಟಗಳನ್ನು ಏರ್ಪಡಿಸಿ ಸಮಾಜವನ್ನು ಸರಿದಾರಿಗೆ ತರುವಂತಹ ಕೆಲಸ ಪ್ರಗತಿಪರ ಸಂಘಟನೆ ಮಾಡಬೇಕೆಂದರು. ರಂಜಾನ್ ಉಪವಾಸ ಎಂಬುವುದು ಸುಲಭವಲ್ಲ ಒಂದು ಗುಟುಕು ನೀರು ಕುಡಿಯದೇ ಮಾಡುವ ವಿಧಾನವೇ ಉಪವಾಸವಾಗಿದೆ. ಇದರಿಂದ ಮನಸ್ಸು ಸ್ವಚ್ಛಗೊಳ್ಳಲಿದೆ. ಸ್ವಚ್ಛ ಮನಸ್ಸು ಆರೋಗ್ಯ ಕಾಪಾಡುತ್ತದೆ. ಸ್ವಚ್ಛ ಮನಸ್ಸು ಮತ್ತು ಆರೋಗ್ಯವಂತಹ ಪುಣ್ಯವ್ಯಕ್ತಿ ಮತ್ತೊಬ್ಬರಿಲ್ಲ. ಆರೋಗ್ಯ ಪೂರ್ಣ ಸಮಾಜ ಪ್ರತಿಯೊಬ್ಬರ ಕೆಲಸ ಸಮಾಜದ ಕೆಟ್ಟು ಹೋಗಲಿಕ್ಕೆ ಕಾರಣ ನಮ್ಮ ಮನಸ್ಸು ಹೀಗಾಗಿ ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸುವ ಕೆಲಸ ನಡೆಯಬೇಕಿದೆ. ವಯಕ್ತಿಕವಾಗಿ ನಾವು ಒಳ್ಳೆಯವರಾದರೆ ಮಾತ್ರ ನಾವು ಜೀವನದಲ್ಲಿ ಸಫಲತೆ ಕಂಡುಕೊಳ್ಳಲು ಸಾಧ್ಯ. ಸಮಾಜದಲ್ಲಿ ಹಲವು ಮುಖವಾಡಗಳನ್ನು ಹಾಕಿಕೊಂಡು ಬದುಕುವಕ್ಕಿಂತ ಸ್ವಚ್ಛ ಮನಸ್ಸಿನಿಂದ ಜೀವನ ಸಾಗಿಸುವುದು ಮುಖ್ಯ. ನಿಮಗೊಬ್ಬ ದೇವನಿದ್ದಾನೆ. ನಿಮಗೆ ಒಂದು ದಿವಸ ಮರಣ ಬರುತ್ತದೆ ಎಂಬುದನ್ನು ಪ್ರತಿಯೊಬ್ಬರು ನೆನಪಿಡಬೇಕು. ಆದರೆ ಇನ್ನೊಬ್ಬರಿಗೆ ಮಾಡಿದ ಉಪಕಾರ ಹಾಗೂ ಯಾರಾದರೂ ನಿಮಗೆ ಮಾಡಿದ ಮೋಸ ಈ ಎರಡನ್ನು ಮರೆತು ಬಿಡಬೇಕಾಗಿದೆ. ಅದೇ ಈ ಸಂದೇಶ ಪ್ರವಾದಿಗಳು ಹೇಳಿದ್ದಾರೆ. ಅದರ ಅನುಸಾರವೇ ನಾವೆಲ್ಲ ಜೀವನ ಸಾಗಿಸೋಣ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹ್ಮದ್ ಕುಂಇ ಹೇಳಿದರು.
ಸಮಾರಂಭದ ಸಾನಿಧ್ಯವನ್ನು ಯುಸೂಫಿಯಾ ಮಸೀದಿಯ ಪೇಶ ಇಮಾಮ ಮುಪ್ತಿ ಮೌಲಾನಾ ಮಹ್ಮದ್ ನಜೀರ ಅಹ್ಮದ್ ಖಾದ್ರಿ-ತಸ್ಕೀನಿರವರು ವಹಿಸಿದ್ದರು. ಎಸ್.ಎಫ್.ಎಸ್.ನ ಚರ್ಚನ ಫಾದರ ಸೆಬಾಸ್ಟಿಯನ್ ಸೌಹಾರ್ದತೆ ಕುರಿತು ಮಾತನಾಡಿದರು. ಹೂವಿನಹಡಗಲಿಯ ಹಿರಿಶಾಂತವೀರ ಮಹಾಸ್ವಾಮಿಗಳು ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಜೈನ್ ಸಮಾಜದ ಮುಖಂಡ ಪದಮ್ ಚಂದ ಮೆಹತಾ ಕಾರ್ಯಕ್ರಮ ಕುರಿತು ಮಾತನಾಡಿದರು. ಮೌಲಾನಾ ಸಿರಾಜುದ್ದೀನ್ ರಶಾದಿ, ಮೌಲಾನಾ ಮಹ್ಮದ್ ಅಲಿ ಹಿಮಾಯತಿ ಸೇರಿದಂತೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಸಂಸ್ಥೆಯ ಅಧ್ಯಕ್ಷ ಎಂ.ಲಾಯಕ್ ಅಲಿ, ಹಿರಿಯ ವೈದ್ಯ ಡಾ.ಕೆ.ಜಿ.ಕುಲಕಣರ್ಿ, ಹಿರಿಯ ನ್ಯಾಯವಾದಿ ಆರ್.ಬಿ.ಪಾನಗಂಟಿ, ಹಿರಿಯ ಪತ್ರಕರ್ತ ಎಂ. ಸಾಧಿಕ್ ಅಲಿ, ಹೋರಾಟಗಾರ ಡಿ.ಹೆಚ್.ಪೂಜಾರ, ಯುವ ನಾಯಕ ಗುರುರಾಜ ಹಲಗೇರಿ ಅಲ್ಲದೇ ಸಂಸ್ಥೆಯ ಪದಾಧಿಕಾರಿಗಳಾದ ಸಯ್ಯದ್ ಜಮೀರ್ ಖಾದ್ರಿ, ಸಯ್ಯದ್ ತಾಜುದ್ದೀನ್, ಅಬ್ದುಲ್ ರಹೇಮಾನ, ಖಾಜಾ ಅಮೀನ್, ಅಸ್ಪಾಕ್ ಅಹ್ಮದ್, ಖಾಜಿ ಇಸಾಕ್ ಸಾಹೇಬ ಪಾಲ್ಗೊಂಡಿದ್ದರು. ರಾಬಿತೆ ಮಿಲ್ಲತ್ ಜಿಲ್ಲಾಧ್ಯಕ್ಷ ಎಂ.ಲಾಯಕ್ ಅಲಿ ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಪ್ತಾಬ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಹಿಂದು-ಮುಸ್ಲಿಂ ಬಾಂಧವರು ವಿಶೇಷವಾಗಿ ಮಹಿಳೆಯರು ಈದ್ ಸೌಹಾರ್ದ ಕೂಟದಲ್ಲಿ ಪಾಲ್ಗೊಂಡಿದ್ದರು.