ಜಾತ್ರೆಗಳ ವೈಜ್ಞಾನಿಕ, ಧಾಮರ್ಿಕ ತಳಹದಿ ಅರಿತುಕೊಳ್ಳಬೇಕಿದೆ: ರುದ್ರಮುನಿ ಸ್ವಾಮೀಜಿ


ಲೋಕದರ್ಶನ ವರದಿ

ರಾಮದುರ್ಗ 09: ಜಾತ್ರೆಗಳನ್ನು ಕೇವಲ ಮನರಂಜನೆಗಾಗಿ ಆಚರಣೆ ಮಾಡಲಾಗುತ್ತದೆ ಎಂಬ ಭಾವ ಬೇಡ. ಜಾತ್ರೆ ಆಚರಣೆಯ ಹಿಂದಿರುವ ವೈಜ್ಞಾನಿಕ, ಧಾಮರ್ಿಕ ತಳಹದಿಯ ಜೊತೆಗೆ ಅದರ ಮಹತ್ವನ್ನು ಯುವ ಪೀಳಿಗೆಗೆ ಅರ್ಥ ಮಾಡಿಸಬೇಕಿದೆ ಎಂದು ಕೆರೂರಿನ ರುದ್ರಮುನಿ ಸ್ವಾಮೀಜಿ ದೇವಾಂಗಮಠ ಹೇಳಿದರು.

ಪಟ್ಟಣದ ಕುದುರೆ ಬಯಲು ಆವರಣದಲ್ಲಿ ಕಿಲಬನೂರ-ರಾಮದುರ್ಗ ಗ್ರಾಮದೇವಿ ಜಾತ್ರೆಯ ಪ್ರಯುಕ್ತ ರವಿವಾರ ರಾತ್ರಿ ಏರ್ಪಡಿಸಿದ ಗುರುರಾಜ ಹೊಸಕೋಟಿ ಅವರ ಜಾನಪದ ಝೇಂಕಾರ ಎಂಬ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಜಾತ್ರೆಯಲ್ಲಿ ಇಂದು ಕೆಲ ಮನರಂಜನೆ ನಡೆದರೆ ಸಾಲದು, ಜನೆಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ಜಾತ್ರೆಗಳ ಸಂಘಟನೆ ಮಾಡಲು ಕಮಿಟಿ ಕ್ರಮ ತೆಗೆದುಕೊಳ್ಳಬೇಕೆಂದು ಕರೆ ನೀಡಿದರು.

ಬಂಕಿಮ್ ಚಂದ್ರ ಚಟಜರ್ಿ ಅವರು ಕೊಟ್ಟಿರುವ  ಒಂದೇ ಮಾತರಂ ಮಂತ್ರದಂತೆ ಇಡೀ ಪ್ರಕೃತಿಯನ್ನು ತಾಯಿಯ ರೂಪದಲ್ಲಿ ಕಂಡ ಅವರು ಭಾರತ ಮಾತೆ ದುಗರ್ೆಯ ಸ್ವರೂಪ ತಾಳಿ ಭಾರತವನ್ನು ಉದ್ಧರಿ, ಜಗಜ್ಜಾಹಿರಾಗಿದ್ದಾಳೆ. ಕಾರಣ ದೇವಿಯ ಆರಾಧನೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಪರಂಪರೆಯಾಗಿದೆ ಎಂದರು.

  ಜಾನಪದ ಗಾರುಡಿಗ ಚಿತ್ರನಟ ಗುರುರಾಜ ಹೊಸಕೋಟಿ ಅವರನ್ನು ಜಾತ್ರಾ ಕಮಿಟಿಯ ಪರವಾಗಿ ಸತ್ಕರಿಸಲಾಯಿತು.

ವಿಠ್ಠಲ ಮುರುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೇಕಾರ ಮುಖಂಡರಾದ ಅಶೋಕ ಕಡಕೋಳ, ಚಿದಾನಂದ ಸೂಳಿಭಾಂವಿ ಸೇರಿದಂತೆ ಇತರರಿದ್ದರು. 

ಗಣೇಶ ಕೊಳದೂರ ಸ್ವಾಗತಿಸಿದರು. ಆರ್. ಪಿ. ಬೆಟಗೇರಿ ನಿರೂಪಿಸಿದರು. ಶಿವಾನಂದ ಯರಗಣ್ಣಿ ವಂದಿಸಿದರು.