'
ಮ್ಯಾಂಚೆಸ್ಟರ್ 03: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಇಂಗ್ಲೆಂಡ್ ಆಟಗಾರರು ಭಾಗವಹಿಸಿದ್ದು ಮೈದಾನದಲ್ಲಿ ಕಾವು ಹೆಚ್ಚಿಸಿತ್ತು. ಇದೀಗ ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯ ಹೈವೋಲ್ಟೆಜ್ ನಿಂದ ಕೂಡಿರಲಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಹಲವು ಆಟಗಾರರು ಐಪಿಎಲ್ ನಲ್ಲಿ ಆಡಿರುವುದರಿಂದ ಅವರ ಬಲಾಬಲ ತಿಳಿಯಲು ಸಾಧ್ಯವಾಗಿದೆ. ಇದರಿಂದ ನಾವು ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯಲು ಸುಲಭವಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.
ಐಪಿಎಲ್ ಪಂದ್ಯಾವಳಿಯ ವೇಳೆ ಹಲವು ಇಂಗ್ಲೆಂಡ್ ಆಟಗಾರರ ಜೊತೆ ಒಡನಾಟ ನಡೆಸಿದ್ದೇವೆ. ಅವರ ಮೈಂಡ್ ಸೆಟ್ ಹೇಗಿರಲಿದೆ ಎಂಬುದು ಮನವರಿಕೆಯಾಗಿದೆ. ನಾವು ಇಂದಿನ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.
ಜೋಸ್ ಬಟ್ಲರ್ ತಮ್ಮ ಅದ್ಭುತ ಪ್ರದರ್ಶನಕ್ಕೆ ಐಪಿಎಲ್ ಕಾರಣ. ಐಪಿಎಲ್ ಸಾಮಥ್ರ್ಯಕ್ಕೆ ತಕ್ಕ ವೇದಿಕೆ ಆಗಿತ್ತು ಎಂದಿದ್ದರು. ಇದನ್ನು ಪ್ರಸ್ತಾಪಿಸಿದ ವಿರಾಟ್ ಕೊಹ್ಲಿ ಜೋಸ್ ಬಟ್ಲರ್ ತನ್ನ ಸಾಮಥ್ರ್ಯವನ್ನು ತಿಳಿಯಲು ಐಪಿಎಲ್ ನಿಂದ ಸಾಧ್ಯವಾಯಿತು. ಈ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಇನ್ನು ಇವರ ಜೊತೆಗೆ ಹಿಂದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿರುವುದಕ್ಕೆ ವಿರಾಟ್ ಕೊಹ್ಲಿ ಅಭಿನಂದಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಇಂದಿನಿಂದ ಸರಣಿಯನ್ನು ಆರಂಭಿಸಲಿದೆ. ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು ನಂತರ ಏಕದಿನ ಸರಣಿ ಆ ಬಳಿಕ ಟೆಸ್ಟ್ ಸರಣಿ
ನಡೆಯಲಿದೆ.