ಇಂದು ರಾಜಾಬಾಗ್ ಸವಾರ್ ದರ್ಗಾದ ಉರುಸ್ ಆಚರಣೆ

ಇಂದು ರಾಜಾಬಾಗ್ ಸವಾರ್ ದರ್ಗಾದ ಉರುಸ್ ಆಚರಣೆ  Urus celebration at Rajabagh Sawar Dargah today

ಕೊಪ್ಪಳ 07: ನಗರದ ಮಧ್ಯಭಾಗ ಪ್ರಮುಖ ಜವಾಹರ್ ರಸ್ತೆ ಬಳಿ ಇರುವ ಪುರಾತನ ಕಾಲದ ಐತಿಹಾಸಿಕ ಧಾರ್ಮಿಕ ಸುಕ್ಷೇತ್ರ ಹಿಂದೂ ಮುಸ್ಲಿಮರ ಭವ್ಯಕ್ಯತೆಯ ಪ್ರತೀಕ ಹಜರತ್ ರಾಜಾ ಬಾಗ್ ಸವಾರ್ ದರ್ಗಾದ ಉರುಸ್ ಆಚರಣೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ, ದಿ, 7 ರ ಶನಿವಾರ ಗಂಧ ದೊಂದಿಗೆ ಆರಂಭ ಗೊಳ್ಳಲಿರುವ ಉರುಸ್ ಆಚರಣೆ ದಿನಾಂಕ 8ರ ರವಿವಾರ ಬೆಳಿಗ್ಗೆಯಿಂದ ರಾತ್ರಿ ವರೆಗೆ ಉರುಸ್ ಆಚರಣೆ ಧಾರ್ಮಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ಜರುಗಲಿದೆ, ದರ್ಗಾ ಆಡಳಿತ ಮಂಡಳಿ ಅಧ್ಯಕ್ಷರಾದ ಮೌಲಾ ಹುಸೇನ್ ಜಮೇದಾರ್ ನೇತೃತ್ವದಲ್ಲಿ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಅಬ್ದುಲ್ ಗನಿ ಅಲಿಯಾಸ್ ಅಫ್ಸರ್ ಸಾಬ್ ರವರ ಉಪಸ್ಥಿತಿಯಲ್ಲಿ ಮುಸ್ಲಿಂ ಸಮಾಜದ ಧಾರ್ಮಿಕ ಗುರುಗಳು ಸಮಾಜದ  ಎಲ್ಲಾ ಮುಖಂಡರು ಸಮಾಜದ ಜನಪ್ರತಿನಿಧಿಗಳು ಉರೂಸ್ ಆಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಉಪಸ್ಥಿತರಿರುವವರು ಎಂದು ದರ್ಗಾದ ಮುಜಾವರ್ ಮರ್ದಾನ್ ಅಲಿ ಮುಜಾವರ್ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ,