ಜಿಲ್ಲಾ ಪಂಚಾಯತಿಯಿಂದ ಅಂಗವಿಕಲರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ


ಕೊಪ್ಪಳ 07: ಕೊಪ್ಪಳ ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯ 30 ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರು ವಾಹನಗಳನ್ನು ಶನಿವಾರದಂದು ಜಿಲ್ಲಾ ಪಂಚಾಯತಿ ಆವರಣದಲ್ಲಿ ಅಧ್ಯಕ್ಷರಾದ ರಾಜಶೇಖರ ಹಿಟ್ನಾಳ ಅವರು ವಿತರಿಸಿದರು. 

  ಜಿಲ್ಲಾ ಪಂಚಾಯತಿ ಅಧ್ಯಕ್ಷರ 2017-18 ನೇ ಸಾಲಿನ ಅನಿರ್ಬಂಧಿತ ಅನುದಾನದ ಪೈಕಿ ಶೇ. 03 ರ ಅನುದಾನವನ್ನು ಅಂಗವಿಕಲರಿಗಾಗಿ ಮೀಸಲಿರಿಸಿದ್ದು, ಇದೀಗ ಜಿಲ್ಲೆಯ 30 ಅಂಗವಿಕಲರಿಗೆ ತ್ರಿಚಕ್ರ ಮೋಟಾರು ವಾಹನವನ್ನು ವಿತರಿಸಲಾಗಿದೆ.  ಕೊಪ್ಪಳ ತಾಲೂಕಿನ 09 ಫಲಾನುಭವಿಗಳು, ಗಂಗಾವತಿ-08, ಕುಷ್ಟಗಿ-07 ಹಾಗೂ ಯಲಬುಗರ್ಾ ತಾಲೂಕಿನ 06 ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರು ವಾಹನ ವಿತರಿಸಲಾಯಿತು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರು ವಾಹನದ ಕೀ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

  ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಹಲವು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರು ವಾಹನ ವಿತರಿಸಿದರು.