ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಕಾರ್ಯಗಾರ


ಲೋಕದರ್ಶನ ವರದಿ

ಹಾವೇರಿ10: ಇಲ್ಲಿನ ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಪಿಯು ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಒಂದು ದಿನದ ಕಾಯರ್ಾಗಾರವನ್ನು ಆಯೋಜಿಸಲಾಗಿತ್ತು. ಕಾಯರ್ಾಗಾರ ಉದ್ಘಾಟಿಸಿದ ಜಿಲ್ಲಾ ಮನೋವೈಧ್ಯರಾದ ಡಾ||ವಿಜಯಕುಮಾರ ಬಳಿಗಾರ ಮಾತನಾಡಿ ಇಂದಿನ ದಿನಮಾನಗಳಲ್ಲಿ ಯುವ ಪೀಳಿಗೆ ಹೆಚ್ಚು ಮಾದಕ ವಸ್ತುಗಳ ಬಳಕೆ ಕಂಡು ಬರುತ್ತಿದ್ದು,ಮಾನಸಿಕವಾಗಿ ತಮ್ಮ ಸ್ಥಿತಿ ಪ್ರಜ್ಞೆ ಕಳೆದುಕೊಳ್ಳುವ ಮೂಲಕ ದೇಹದ ಬಗ್ಗೆ ಕಾಳಜಿವಹಿಸದೇ ಅನಾರೋಗ್ಯಕ್ಕೆ ತುತ್ತು ಆಗುತ್ತಿದ್ದಾರೆ. ಉತ್ತಮ ಹವ್ಯಾಸದಿಂದ ಬದುಕು ರೂಪಿಸಿಕೊಳ್ಳಬೇಕಾಗಿದೆ. ಮಾದಕ ವಸ್ತುಗಳ ಸೇವನೆ ಜೀವಕ್ಕೆ ಮಾರಕವಾಗಿದ್ದು,ಜೀವಕ್ಕೆ ವ್ಯತರಿಕ್ತ ಪರಿಣಾಮ ಉಂಟಾಗಬಹುದು. ಇವುಗಳಿಂದ ದೂರವಿರುವುದು ಸೂಕ್ತ ಎಂದು ಡಾ|| ಬಳಗಾರ ವಿವರಣೆ ನೀಡಿದರು.

 ಕಾಯರ್ಾಗಾರದ ಅಧ್ಯಕ್ಷತೆವಹಿಸಿದ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಪ್ರಚಾರ್ಯರಾದ ರವಿಕುಮಾರ ಪೂಜಾರ ಮಾತನಾಡಿ ಆರೋಗ್ಯ ಉತ್ತಮವಾಗಿದ್ದರೆ ಎಲ್ಲ ಕ್ಷೇತ್ರಗಳಲ್ಲಿ ಕೆಲಸಗಳ ಮೂಲಕ ವಿದ್ಯಾಥರ್ಿಗಳು ಹಾಗೂ ಯುವಜನರು ಉತ್ತಮ ಸಾಧನೆ ಮಾಡಲು ಸಾಧ್ಯ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಕಾಯರ್ಾಗಾರ ಇಂದಿನ ದಿನಮಾನಗಳಲ್ಲಿ ತುಂಬಾ ಅವಶ್ಯಕವಾಗಿದ್ದು,ಸ್ವಾಸ್ಥೆ ಸಮಾಜ ನಿಮರ್ಾಣದ ಕಾರ್ಯಕ್ರಮಗಳಿಗೆ ನಮ್ಮ  ಸಂಸ್ಥೆ ಹಾಗೂ ಕಾಲೇಜು ಸದಾಸಿದ್ದವಾಗಿದೆ.ಆರೋಗ್ಯ ಸಂಪತ್ತು ಎಲ್ಲ ಸಂಪತ್ತಿಗಿಂತ ಮಿಗಿಲು ಎಂದು ಮಾದಕ ವಸ್ತುಗಳ ಸೇವನೆಯಿಂದ ದೂರ ಇದ್ದರೆ ಮಾತ್ರ ಸಾಮಾಜಿಕಮುಖಿಯಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಗದಗ ಮುನ್ಸಿಪಲ್ ಕಾಲೇಜಿನ ಹಿರಿಯ ಉಪನ್ಯಾಸಕರಾದ ರಾಜು ಹಿರೇಮಠ.ಸ್ವಾಮಿ ವಿವೇಕಾನಂದ ಕಾಲೇಜಿನ ಉಪನ್ಯಾಸಕರಾದ ರಾಜೇಶ ಆರ್.ಸಂತೋಷ ವೈ.ಕೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿ ವೃಂದದವರು ಪಾಲ್ಗೊಂಡಿದ್ದರು.