ಲೋಕದರ್ಶನ ವರದಿ
ತಾಂಬಾ 11: ಈ ಭಾಗದಲ್ಲಿ ಸಕಾಲಕ್ಕೆ ಸಮರ್ಪಕ ಮಳೆಯಾಗದೇ ಬೀತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ ಕಳೆದ ಮುಂಗಾರು ಹಂಗಾಮಿನಲ್ಲಿ ಜೂನ್ ಅಂತ್ಯದವರೆಗೆ ಶೇ.85ರಷ್ಟು ಬಿತ್ತನೆ ಆಗಿದ್ದರೆ ಈ ವರ್ಷ ಕೇವಲ ಶೇ.27ರಷ್ಟು ಮಾತ್ರ ಬಿತ್ತನೆ ಕಾರ್ಯ ಮುಗಿದಿದೆ.
ಜುಲೈ ತಿಂಗಳು ಆರಂಭವಾಗಿ ಒಂದುವಾರ ಕಳೆದರು ಈ ಭಾಗದಲ್ಲಿ ಸಮರ್ಪಕ ಮಳೆ ಬಂದಿಲ್ಲ ಇಷ್ಟೋತ್ತಿಗೆ ಬಿತ್ತನೆಯಾಗಿ ಹಚ್ಚು ಹಸಿರಾಗಿ ಕಂಗೆಳಿಸಬೇಕಿದ್ದ ಭೂಮಿ ಬರುಡಾಗಿದ್ದು ರೈತರನ್ನು ಆತಂಕಕ್ಕಿಡು ಮಾಡಿದೆ ಸತತ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ರೈತರನ್ನು ಈ ಸಲದ ಮುಂಗಾರು ಆರಂಭದಲ್ಲೇ ಚಿಂತೆಗಿಡು ಮಾಡಿದೆ. ಎರಡ್ಮೂರು ದಿನದ ಹಿಂದೆ ಜಿಲ್ಲೆಯಲ್ಲಿ ಕೊಂಚ ಮಳೆ ಬಿದ್ದಿದ್ದು ಬಿತ್ತನೆ ಕಾರ್ಯ ಸುರುವಾಗಿದೆ ಈವರೆಗೆ ಕೇವಲ ಶೇ.27ರಷ್ಟು ಮಾತ್ರ ಬೀತ್ತನೆ ಯಾಗಿದೆ ಈ ವರ್ಷ ಜೂಲೈ ತಿಂಗಳು ಒಂದು ವಾರ ಕಳೆದರು ಬೇಸಿಗೆ ಮುಂದುವರೆದ ವಾತವರಣವಿದೆ ಕೇಲವಡೆ ಮೂಡ ಮುಸೂಕಿದ ವಾತಾವರಣ ಇದ್ದರು ಮಳೆ ಬರುತ್ತಿಲ್ಲ ಕೇಲ ಭಾಗದಲ್ಲಿ ಉತ್ತಮ ಮಳೆ ಇದ್ದು ಬೀತ್ತನೆ ನಡೆದಿದೆ ಮಳೆ ಬೀಳದ ಪ್ರದೇಶದ ರೈತರು ಮುಗಿಲ ಕಡೆ ಮುಖಮಾಡಿ ಯಾವಾಗ ಮಳೆ ಯಾಗುತ್ತದೆ ಎಂದು ಕಾದು ಸುತ್ತಾಗುತ್ತಿದ್ದಾರೆ, ಸತತ ಹತ್ತು ವರ್ಷಗಳ ಬರಗಾಲದಿಂದ ಈಗಾಗಲೆ ರೈತರು ಆಥರ್ಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ ಈಭಾರಿಯ ಮಳೆ ಪರಸ್ಥಿತ್ತಿ ನೋಡದೆ ಕೇಲಭಾಗದಲ್ಲಿ ಬೀತ್ತನೆಯೆ ಅನುಮಾನ ಎಂಬತ್ತಾಗಿದೆ ಇದು ರೈತರ ನಿದ್ದೆಗೇಡಿಸಿದ್ದೆ.
2018ರಲ್ಲಿ ಬರಗಾಲ ಬೀದ್ದರು ಮೇ,ಜೂನ್ ತಿಂಗಳಲ್ಲಿ ಮಳೆಯಾದ್ದರಿಂದ ಈ ವೇಳೆಗಾಗಲೆ ಬಿತ್ತನೆ ನಡದಿತ್ತು ಒಟ್ಟು 3.50ಲಕ್ಷ ಹೇಕ್ಟರ್ ಬೀತ್ತನೆ ಗುರಿಯಲ್ಲಿ ಕಳೆದ ವರ್ಷ ಜೂನ್ ಅಂತ್ಯದ ವೇಳೆಗೆ 1.60ಲಕ್ಷ ಏಕದಳ ಧಾನ್ಯ 1.40ಲಕ್ಷ ಹೇಕ್ಟರ್ ದ್ವೀದಳ ಧಾನ್ಯ ಸೇರಿದಂತೆ ಒಟ್ಟು 3ಲಕ್ಷ ಹೇಕ್ಟರ್ ಪ್ರದೇಶದಲ್ಲಿ ಬೀತ್ತನೆ ಯಾಗಿತ್ತು ಅಂದರೆ ಬೀತ್ತನೆ ಗುರಿಯಲ್ಲಿ ಇವೇಳೆಗಾಗಲೆ ಶೇ.85ರಷ್ಟು ಬೀತ್ತನೆ ಆಗಿತ್ತು ಆದರೆ ಬಿತ್ತಿದ ಬೇಳೇಗಳೆಲ್ಲಾ ಒಣಗಿ ಹೋಗಿ ರೈತ ಸಂಕಷ್ಟಕ್ಕೆ ಇಡಾಗಿದ್ದನು. ಈಸಲ ಬೀತ್ತನೆ ಕಾರ್ಯ ಮಂದಗತ್ತಿಯಲ್ಲಿ ಸಾಗಿದಂತ್ತಾಗಿದೆ ಮಳೆ ಬಂದು ರೈತನ ಕೈಹಿಡಿವವನೆ ಆ ಭಗವಂತ ಎಂದು ರೈತರು ಜಾತಕ ಪಕ್ಷೀಯಂತೆ ಆಕಾಶ ದತ್ತ ಮುಖಮಾಡಿ ಕಾಯುತ್ತಿದ್ದಾರೆ.