ತಾಳಿಕೋಟಿ: ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ: ನಾಡಗೌಡ

ಲೋಕದರ್ಶನ ವರದಿ

ತಾಳಿಕೋಟಿ 05: ಪಟ್ಟಣದ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಪಟ್ಟಣದಲ್ಲಿ ಪಕ್ಷಕ್ಕೆ ಎಲ್ಲ ವರ್ಗ ಹಾಗೂ ಸಮಾಜದವರ ಬೆಂಬಲ ಮತ್ತು ಸಹಕಾರ ಇದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರದ್ದಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ (ಅಪ್ಪಾಜಿ) ತಿಳಿಸಿದರು.

ರವಿವಾರ ಪಟ್ಟಣದ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಪುರಸಭೆ ಚುನಾವಣೆ ಪ್ರಯುಕ್ತ ಕರೆದ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ತಾಳಿಕೋಟಿ ಪುರಸಭೆಗೆ ಅತಿಹೆಚ್ಚು ಬಾರಿ ಪಕ್ಷೇತರ ಸದಸ್ಯರೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬರುತ್ತಿರುವದರಿಂದ ಯಾವುದೇ ಒಂದು ಪಕ್ಷದ ನಿಯಂತ್ರಣ ಇಲ್ಲದಿರುವದರಿಂದ ಪಟ್ಟಣದ ಅಭಿವೃದ್ದಿಗೆ ಹಿನ್ನಡೆ ಆಗುತ್ತದೆ. ಪಕ್ಷದ ಚಿಹ್ನೆಯಿಂದ ಆಯ್ಕೆಯಾಗಿ ಬರುವ ಸದಸ್ಯರಿಂದ ಪುರಸಭೆಯಲ್ಲಿ ಸ್ಥಿರ ಹಾಗೂ ಉತ್ತಮ ಆಡಳಿತ ನಡೆಸಲು ಸಾಧ್ಯವಿದೆ. ಆದ್ದರಿಂದ ಈ ಬಾರಿ ಕಾರ್ಯಕರ್ತರು ಎಲ್ಲ 23 ವಾರ್ಡಗಳಿಗೆ ಪಕ್ಷದ ಚಿಹ್ನೆಯ ಮೇಲೆಯೇ ಸ್ಪಧರ್ಿಸಬೇಕೆಂದು ತಿಳಿಸಿದ ಅವರು ವಾರ್ಡ ಮಟ್ಟದಲ್ಲಿ ಪಂಚರನ್ನು ನೇಮಕ ಮಾಡಿ ಅವರ ವರದಿಯ ಆಧಾರದಲ್ಲಿ ಟಿಕೆಟ್ ನೀಡಲಾಗುವುದು ಆಕಾಂಕ್ಷಿಗಳು ತಮ್ಮ ಹಿತಾಸಕ್ತಿಗಿಂತಲೂ ಪಕ್ಷದ ಹಿತವನ್ನು ಮುಂದಿಟ್ಟುಕೊಂಡು ಹೋಗಬೇಕು.

ಮೇತ್ರಿ ಸರಕಾರ ಇರುವದರಿಂದ ಸ್ಥಳೀಯ ಜೆಡಿಎಸ್ ಮುಖಂಡರೊಂದಿಗೆ ಚಚರ್ಿಸಿ ಸ್ಥಾನಗಳ ಹೊಂದಾಣಿಕೆ ಮಾಡಿಕೊಳ್ಳಲಾಗುವುದು, ಮೈತ್ರಿ ಸರಕಾರ ಮೇ 23ರ ನಂತರವೂ ಸ್ಥಿರವಾಗಿರುತ್ತದೆ. ವಿರೋಧ ಪಕ್ಷದವರು ಹಗಲುಕನಸು ಕಾಣುವುದನ್ನು ಕೈಬಿಡಬೇಕು ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ) ಮಾತನಾಡಿ ವ್ಯಕ್ತಿಗಿಂತ ಪಕ್ಷದೊಡ್ಡದು ಕಾರ್ಯಕರ್ತರು ತಮ್ಮ ಸ್ವಹಿತಾಸಕ್ತಿ ಬದಿಗಿಟ್ಟು ಪಕ್ಷದ ಹಿತಕ್ಕಾಗಿ ದುಡಿಯುವ ಅಗತ್ಯ ಇದೆ ಎಂದರು

ಮುಸ್ಲೀಂ ಸಮಾಜದ ಮುಖಂಡ ಖಾಜಾಹುಸೇನ ಡೋಣಿ ಮಾತನಾಡಿ ಪಕ್ಷವನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸುಲು ಸ್ಥಾನೀಯ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ ಇವುಗಳನ್ನು ಪಕ್ಷದ ಹಿಡಿತದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದರು ಮುಸ್ಲೀಂ ಧರ್ಮಗುರು ಸೈಯದ್ಶಕೀಲ ಅಹ್ಮದ್ ಖಾಜಿ ಸಾನಿಧ್ಯ ವಹಿಸಿದ್ದರು.

ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ, ಬಿ.ಎಸ್.ಗಬಸಾವಳಗಿ, ವಿರುಪಾಕ್ಷಯ್ಯ ಹಿರೇಮಠ, ಮಾಸೂಮ್ಸಾಬ ಕೆಂಭಾವಿ, ಕೆ.ಎಂ.ಡೋಣಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಪ್ರಭುಗೌಡ ಮದರಕಲ್ಲ, ಮುರಿಗೆಪ್ಪ ಸರಶಟ್ಟಿ, ಸತ್ತಾರ ಅವಟಿ, ರಾಜಅಹ್ಮದ್ ಒಂಟಿ, ಕಾಡಪ್ಪ ಹೂಗಾರ, ಶರಣು ಬ್ಯಾಲ್ಯಾಳ, ಸಂಗನಗೌಡ ಅಸ್ಕಿ, ಮೋದಿನಸಾ ನಗಾಚರ್ಿ, ಎಂ.ಕೆ.ಚೋರಗಸ್ತಿ, ಸಿಕಂದರ ವಠಾರ, ಅಲ್ಲಾಬಕ್ಷ ನಮಾಜಕಟ್ಟಿ, ಮೀರು ಬ್ಯಾಗವಾಟ ಮುಂತಾದವರು ಉಪಸ್ಥಿತರಿದ್ದರು.