ಮುಗಳಖೋಡ ಶ್ರೀಗಳಿಂದ ಆಶೀವರ್ಾದ ಪಡೆದ ಅಂಗಡಿ

ಮುಗಳಖೋಡ 06: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಯಲ್ಲಾಲಿಂಗೇಶ್ವರ ಬೃಹನ್ ಮಠಕ್ಕೆ ಬೆಳಗಾವಿ ಸಂಸದರು ಹಾಗೂ ಕೇಂದ್ರ ಸರಕಾರದ ಸಂಪುಟದಲ್ಲಿ ನೂತನವಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಆಯ್ಕೆಯಾದ ಸುರೇಶ ಅಂಗಡಿ ಅವರು ಶ್ರೀಮಠಕ್ಕೆ ಭೇಟಿ ನೀಡಿ ಡಾ.ಮುರಘರಾಜೇಂದ್ರ ಶ್ರೀಗಳ ಆಶೀವರ್ಾದ ಪಡೆದುಕೊಂಡರು. 

     ಅದರೊಂದಿಗೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ನೂತನ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ದಂಪತಿಗಳು ಕೂಡಾ ಆಗಮಿಸಿ ಯಲ್ಲಾಲಿಂಗೇಶ್ವರರ ಕತರ್ೃ ಗದ್ದುಗೆಗೆ ಪೂಜೆ ಸಲ್ಲಿಸಿ ಶ್ರೀಗಳ ಆಶೀವರ್ಾದ ಪಡೆದುಕೊಂಡರು.

   ಕುಡಚಿ ಶಾಸಕ ಪಿ.ರಾಜೀವ, ಬೆಳಗಾವಿ ಜಿ.ಪಂ.ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ, ಶಿವಬಸು ಕಾಪಸಿ, ಸುರೇಶ ಜಂಬಗಿ, ರಮೇಶ ಖೇತಗೌಡರ, ಬಸನಗೌಡ ಆಸಂಗಿ, ಮಹಾದೇವ ಮರಡಿ, ಮಾಂತು ಯರಡತ್ತಿ, ಲತಾ ಹುದ್ದಾರ, ಮಂಗಲಾ ಪನದಿ, ಕೆಂಪಣ್ಣ ಅಂಗಡಿ, ಅಣ್ಣಪೂಣರ್ಾ ಯರಡತ್ತಿ ಮುಂತಾದವರು ಉಪಸ್ಥಿತರಿದ್ದರು.