ಲೋಕದರ್ಶನವರದಿ
ರಾಣೇಬೆನ್ನೂರು.15: ಕೌಟಂಬಿಕ ಕಲಹ ಹಾಗೂ ಅನಾರೋಗ್ಯದಿಂದಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿದ ವ್ಯಕ್ತಿಯೋರ್ವನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಅಪ್ಪರ್ತುಂಗಾ ಜಾಗೆಯ ಬಳಿ ಇರುವ ನೂತನ ಹೌಸಿಂಗ್ ಕಾಲೋನಿಯಲ್ಲಿ ಬುಧವಾರ ನಡೆದಿದೆ. ಮೃತನನ್ನು ಸ್ಥಳೀಯ ದೊಡ್ಡಪೇಟೆಯ ಕರಬಸಪ್ಪ ಈರಪ್ಪ ದಕ್ಶೆಟ್ಟಿ(38) ಎಂದು ಗುರುತಿಸಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.