ಲೋಕದರ್ಶನ ವರದಿ
ವಿಜಯಪುರ 06: ಸ್ಥಳೀಯ ತುಂಗಳ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾಥರ್ಿಗಳು ಕ್ರಮವಾಗಿ ಐಐಟಿ ಹಾಗೂ ಎನ್ಐಟಿ ಕಾಲೇಜುಗಳಿಗೆ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಳೆದ ಮೇ ತಿಂಗಳಲ್ಲಿ ನಡೆಸಿದ ಮೇನ್ಸ್ ಹಾಗೂ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.ಆಶೀಷ್ ಕುಬಸದ ಧಾರವಾಡದ ಐಐಟಿ ಕಾಲೇಜಿಗೆ ಆಯ್ಕೆಯಾಗಿದ್ದು, ಮಹ್ಮದ ದನಿಯಾಲ್ ಸುರತ್ಕಲ್ನ ಎನ್ಐಟಿ ಕಾಲೇಜಿಗೆ ಆಯ್ಕೆಯಾಗಿದ್ದಾರೆ.ಇಬ್ಬರೂ ವಿದ್ಯಾಥರ್ಿಗಳು ಮೆಕ್ಯಾನಿಕಲ್ ವಿಭಾಗಕ್ಕೆ ಪ್ರವೇಶ ಪಡೆದಿದ್ದು, ಇವರನ್ನು ಸಂಸ್ಥೆ ಟ್ರಸ್ಟಿಗಳಾದ ಅಶೋಕ ತುಂಗಳ, ಡಾ. ಲಕ್ಮೀ ತುಂಗಳ ಹಾಗೂ ಪ್ರಾಚಾರ್ಯರಾದ ಮೀನಾಕ್ಷಿ ತಳ್ಳಿ ಅಭಿನಂದಿಸಿದ್ದಾರೆ.