ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅಗತ್ಯ: ಎಂ.ಎ.ಶಕೀಬ್
ಕಂಪ್ಲಿ09: ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅಗತ್ಯವಾಗಿವೆ ಎಂದು ಬಳ್ಳಾರಿ ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಠಕ ಎಂ.ಎ.ಶಕೀಬ್ ಹೇಳಿದರು.
ತಾಲೂಕಿನ ಷಾಮಿಯಾಚಂದ್ ಕಾಲೇಜು ಆವರಣದಲ್ಲಿ ಬಳ್ಳಾರಿ ಗೃಹ ರಕ್ಷಕದಳ ಮತ್ತು ಕಂಪ್ಲಿ ಗೃಹ ರಕ್ಷಕದಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಬ್ದುಲ್ ರಜಾಕ್ ಕಂಪ್ಲಿ ಕ್ರಿಕೇಟ್ ಟೂನರ್ಿಮೆಂಟ್ನ ಪ್ರಶಸ್ತಿ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಗೃಹ ರಕ್ಷಕದಳದಿಂದ ಕ್ರಿಕೇಟ್ ಟೂನರ್ಿಮೆಂಟ್ ಆಯೋಜನೆ ಮೂಲಕ ಗೃಹ ರಕ್ಷಕರಲ್ಲಿ ಆತ್ಮವಿಶ್ವಾಸ ಹಾಗೂ ಉತ್ತಮ ಸೇವೆಗೆ ಆಧ್ಯತೆ ನೀಡಲಾಗಿದೆ. ಸಮಾಜದಲ್ಲಿ ಗೃಹ ರಕ್ಷಕದಳ ಸಿಬ್ಬಂದಿಗಳ ಸೇವೆ ಅಗತ್ಯವಾಗಿದೆ. ಪ್ರತಿಯೊಬ್ಬರ ಸಹಕಾರ, ಮನೋಭಾವನೆ ಸಿಗಬೇಕಾಗಿದೆ ಎಂದರು.
ಪೈನಲ್ ಪಂದ್ಯಾವಳಿಯಲ್ಲಿ ಬಳ್ಳಾರಿ ಟೈಗರ್ ಬಾಯ್ಸ್ ತಂಡ ಪ್ರಥಮ ಸ್ಥಾನದೊಂದಿಗೆ ಕಪ್ ತನ್ನದಾಗಿಸಿಕೊಂಡಿತು. ಎರಡನೇ ಸ್ಥಾನಕ್ಕೆ ಮೋಕಾ ತಂಡ ತೃಪ್ತಿಪಟ್ಟಿತು. ಈ ಟೂನರ್ಿಮೆಂಟ್ನಲ್ಲಿ 15 ತಂಡಗಳು ಪಾಲ್ಗೊಂಡಿದ್ದವು.
ಈ ಸಮಾರಂಭದಲ್ಲಿ ತಾಪಂ ಉಪಾಧ್ಯಕ್ಷ ಬಿ.ಎಸ್.ಶಿವಮೂತರ್ಿ, ಪುರಸಭೆ ಅಧ್ಯಕ್ಷ ಎಂ.ಸುಧೀರ್, ಸದಸ್ಯರಾದ ಸಿ.ಆರ್.ಹನುಮಂತ, ರಾಮಂಜಿನೀಯಲು, ರಘು ನಾಯಕ, ನಂ.10 ಮುದ್ದಾಪುರ ಗ್ರಾಪಂ ಸದಸ್ಯರಾದ ಎ.ತಾಯಣ್ಣ, ಹೊನ್ನೂರಪ್ಪ, ಬಳ್ಳಾರಿ ಗೃಹ ರಕ್ಷಕದಳದ ಜಿಲ್ಲಾ ಭೋದಕ ಹೆಚ್.ತಿಪ್ಪೇಸ್ವಾಮಿ, ಕಂಪ್ಲಿ ಗೃಹ ರಕ್ಷಕದಳದ ಘಟಕಾಧಿಕಾರಿ ಎಸ್.ಎಚ್.ಮೋಹನ್ ಮೂತರ್ಿ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಶುಭಾನ್, ಅಶೋಕ್ ಕುಕನೂರ್, ಘಟಕಾಧಿಕಾರಿಗಳು ಹಾಗೂ ಗೃಹ ರಕ್ಷಕದಳ ಸಿಬ್ಬಂದಿಗಳು ಸಿಬ್ಬಂದಿಗಳು ಮತ್ತು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.