ಎಲ್ಲರೊಂದಿಗೆ ಬೆರೆತು ಬದುಕು ನಡೆಸಿ: ಶಿವಕುಮಾರ

ಲೋಕದರ್ಶನವರದಿ

ರಾಣೆಬೆನ್ನೂರು 30: ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಹೊಂದಿ ಎಲ್ಲರೊಂದಿಗೆ ಬೆರೆತು ಬದುಕು ನಡೆಸಬೇಕು, ಇದು ನಮ್ಮ ಪ್ರಗತಿಗೆ ಪೂರಕವಾಗುತ್ತದೆ ಎಂದು ಪ್ರಾಂಶುಪಾಲ ಡಾ| ಬಿ.ಶಿವಕುಮಾರ ಹೇಳಿದರು.

   ನಗರ ಹೊರವಲಯದ ಶ್ರೀತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   

  ಇಂದಿನ ವಿದ್ಯಾಥರ್ಿಗಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮುಖಮಾಡುತ್ತಿರುವುದು ಭಾರತ ದೇಶದ ಇತಿಹಾಸ ಪರಂಪರೆಯ ಜನಪದ ಕಲೆಯು ನಶಿಸುವಂತಾಗಿದೆ.  ಸಂಸ್ಕೃತಿ ಪರಂಪರೆಯ ದೇಶೀಯ ಸಾಂಪ್ರದಾಯಿಕ ಜೀವನ ಬಿಂಬಿಸುವ, ಉಡುಗೆ ತೊಡುಗೆಗಳನ್ನು ತೊಡುವ ಮೂಲಕ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು.

    ಪ್ರೊ. ದಿನೇಶ ಮಾಗನೂರ, ಡಾ| ಶಿವಕುಮಾರ ಹೊನ್ನಾಳಿ, ಶಶಿಧರ ಕುರಗೋಡಪ್ಪನವರ ಸೇರಿದಂತೆ ವಿದ್ಯಾಥರ್ಿಗಳು ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು.  ಕಾಲೇಜಿನ  ನೂರಾರು ವಿಧ್ಯಾಥರ್ಿಗಳು ಸಂಸ್ಕೃತಿ ಪ್ರತಿಬಿಂಬಿತ ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಜಾನಪದ, ಕೋಲಾಟ, ಭಜನೆ, ಕುಟ್ಟುವ, ಬೀಸುವ, ಕೋಲಾಟದ ನೃತ್ಯಗಳನ್ನು ಪ್ರದಶರ್ಿಸಿ ಸಾರ್ವಜನಿಕರ ಗಮನ ಸೆಳೆದರು.