ಲೋಕದರ್ಶನ ವರದಿ
ಶಿಗ್ಗಾವಿ20 : ಹೆಣ್ಣು ಮನೆಯ ಹೊಸ್ತಿಲು ದಾಟುವ ಅಪರಾಧವಾಗಿದ್ದ ಕಾಲದಲ್ಲಿ ಮಹಿಳೆಗೆ ಧಾರ್ಮಿಕ ಕ್ಷೇತ್ರದಲ್ಲಿ ಅವಳಿಗು ಸ್ಥಾನಮಾನ ನೀಡುವ ಬಗ್ಗೆ ಆ ಕಾಲದಲ್ಲಿಯೇ ಆಲೋಚಿಸಿದ್ದ ಮಹಾನ್ ಮಾತೆ ಜಗದಕ್ಕ (ಅಕ್ಕಮಹಾದೇವಿ) ಆಗಿದ್ದಳು ಎಂದು ಶರಣೆ ನಿವೃತ್ತ ಶಿಕ್ಷಕಿ ಉಷಾ ಕೆ ಪಾಟೀಲ್ ಹೇಳಿದರು.
ಪಟ್ಟಣದ ಜಯನಗರದಲ್ಲಿರುವ ವರಗಣಪತಿ ದೇವಸ್ಥಾನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಶಿಗ್ಗಾವಿ, ಜಯನಗರ ಅಕ್ಕನ ಬಳಗ ಮತ್ತು ವಚನ ನಿಧಿ ವನಿತಾ ಸಂಘ ಹಾಗೂ ಸ್ತ್ರೀ ಶಕ್ತಿ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಾತೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವು ಜರುಗಿತು.
ಅವರು, 21 ನೇ ಶತಮಾನದಲ್ಲಿ ಹೆಣ್ಣು ತಾನು ಎಷ್ಟೆ ಸಬಲ ಎಂದು ಹೇಳಿಕೊಂಡರು ಕೂಡಾ ನೈಜ ಪರಿಸ್ಥಿತಿ ಬದಲಾಗಿಲ್ಲ ಇನ್ನು 900 ವರ್ಷಗಳ ಹಿಂದಿನ ಪರಿಸ್ಥಿತಿಯನ್ನೊಮ್ಮೆ ತಮ್ಮ ಸ್ಮೃತಿ ಪಟಲದ ಮೇಲೆ ಹಾಯಿಸಿ ಅಂದಿನ ಹೆಣ್ಣಿನ ಸ್ಥಾನಮಾನ ಹೇಗಿತ್ತೆಂದು ಊಹಿಸಿ, ಮೌಡ್ಯದ ಜಾಡ್ಯವೇ ತುಂಬಿ ಕೊಳೆತು ನಾರುತ್ತಿದ್ದ ಸಮಾಜದಲ್ಲಿ ಅತ್ಯಂತ ವೈಚಾರಿಕ ಹಾಗೂ ವಿವೇಕ ಪ್ರಜ್ಞೆಯುಳ್ಳ ಹದಿಹರೆಯದ ಹೆಣ್ಣು ಮಗಳೊಬ್ಬಳು ಮದುವೆಯನ್ನು ಧಿಕ್ಕರಿಸಿ ನೂರಾರು ಮೈಲು ದೂರಲ್ಲಿದ್ದ ಶಿವಪ್ರಜ್ಞೆಯ ಬಸವಣ್ಣ ಮತ್ತು ಅನೇಕ ಶರಣರ ಒಡನಾಟವನ್ನು ಬಯಸಿ ಸತ್ಯ ಸದ್ಬಾವದ ನುಡಿಗಳನ್ನು ನುಡಿಯಲು ಸಾರ್ಥಕತೆಯ ಧಾರ್ಮಿಕ ಜೀವನವನ್ನು ಕಳೆದವಳು ಆ ಅಕ್ಕ ವೈರಾಗ್ಯದ ತಳಹದಿ ಮತ್ತು ಬದುಕಿನ ಸ್ವೀಕಾರ ಜೊತೆಗೆ ಗುರು ಮಹಾತ್ಮೆ ಕುರಿತು ವಿವರವಾಗಿ ವಿಶ್ಲೇಷಿಸಿದರು.
ಇದಕ್ಕೂ ಮೊದಲು ಹನುಮಂತ ಜಯಂತಿ ಹಾಗೂ ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ತೋಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಜಯಶ್ರೀ ಪಾಟೀಲ್, ಗಿರಿಜಮ್ಮ ಹೆಸರೂರ, ಅನುಸುಯಾ ಶೇರೆವಾಡ, ಕವಿತಾ ನೆಲ್ಲಿಕೋಪ್ಪ, ಶಶಿಕಲಾ ಖುಷರ್ಾಪೂರ, ಪುಷ್ಬಾ ಬುಳ್ಳಕ್ಕನವರ, ಶಶಿಕಲಾ ಕೆ, ತುಳಸಕ್ಕ ಮರಾಠೆ, ಸೇರಿದಂತೆ ವಿವಿದ ಮಹಿಳಾ ಮಣಿಗಳು ಇದ್ದರು, ಬಸಮ್ಮ ಭರಮಗೌಡ್ರ ನಿರೂಪಿಸಿದರು, ಜಯಮ್ಮ ಕಲ್ಲಪ್ಪನವರ ವಂದಿಸಿದರು.