ಲಂಡನ್: ಪ್ರತಿಷ್ಠಿತ ವಿಂಬಲ್ಡನ್ ಸೆಮಿಫೈನಲ್ಗೆವೇದಿಕೆ ಸಜ್ಜುಗೊಂಡಿದ್ದು, ಗುರುವಾರ ವನಿತಾ ಸಿಂಗಲ್ಸ್ನಲ್ಲಿ ಮಾಜಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಮತ್ತು ಜರ್ಮನಿಯ ಜೂಲಿಯಾ ಜಾಜ್ ಪರಸ್ಪರ ಮುಖಾಮುಖೀಯಾಗಲಿದ್ದಾರೆ.
ಜೂಲಿಯಾ ಗ್ರ್ಯಾನ್ಸ್ಲಾಮ್ ಉಪಾಂತ್ಯ ತಲುಪುತ್ತಿರುವುದು ಇದೇ ಮೊದಲು ಎಂಬುದೊಂದು ವಿಶೇಷ. ಮಂಗಳವಾರ ರಾತ್ರಿಯ ಸೆಣಸಾಟದಲ್ಲಿ 13ನೇ ಶ್ರೇಯಾಂಕದ ಜೂಲಿಯಾ ಜಾಜ್ ಹಾಲೆಂಡಿನ 20ನೇ ಶ್ರೇಯಾಂಕಿತೆ ಕಿಕಿ ಬಟರ್ೆನ್ಸ್ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ ಮುನ್ನಡೆದರು. ಮೊದಲ ಸೆಟ್ ಕಳೆದುಕೊಂ ಜೂಲಿಯಾ, 2ನೇ ಸೆಟ್ನಲ್ಲೂ ಸೋಲುವ ಹಂತದಲ್ಲಿದ್ದರು. ಆದರೆ ಜರ್ಮನ್ ಆಟಗಾತರ್ಿಯ ಅದೃಷ್ಟ ಗಟ್ಟಿ ಇತ್ತು. ಅವರು 3-6, 7-5, 6-1 ಅಂತರದಿಂದ ಗೆದ್ದು ನಿಟ್ಟುಸಿರೆಳೆದರು.
ಇದಕ್ಕೂ ಮುನ್ನ ಜೂಲಿಯಾ ಜಾಜ್ ಕಳೆದ 5 ವಿಂಬಲ್ಡನ್ ಕೂಟ ಗಳಲ್ಲಿ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದ್ದರು. ಕೊನೆಗೂ 42 ಗ್ರ್ಯಾನ್ಸ್ಲಾಮ್ ಪಂದ್ಯಗಳನ್ನು ಆಡಿದ ಬಳಿಕ ಸೆಮಿಫೈನಲ್ ಅವಕಾಶ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಸೆರೆನಾ ವಿರುದ್ಧ ಇವರ ಆಟ ನಡೆಯುವುದು ಕಷ್ಟ ಎಂಬುದು ಟೆನಿಸ್ ಪಂಡಿತರ ಅಭಿಪ್ರಾಯ. ಇನ್ನೊಂದೆಡೆ ಸೆರೆನಾ ವಿಲಿಯಮ್ಸ್ ಕೂಡ 3 ಸೆಟ್ಗಳ ಕಾದಾಟ ನಡೆಸ ಬೇಕಾಯಿತು.
ಇಟಲಿಯ ಶ್ರೇಯಾಂಕ ರಹಿತ ಆಟಗಾತರ್ಿ ಕ್ಯಾಮಿಲಾ ಜಾಜರ್ಿ ವಿರುದ್ಧ ಅವರು 3-6, 6-3, 6-4 ಅಂತರದ ಗೆಲುವು ಕಂಡರು.
ದಿನದ ಇನ್ನೊಂದು ಸೆಮಿಫೈನಲ್ ಪಂದ್ಯ ಆ್ಯಂಜೆಲಿಕ್ ಕೆರ್ಬರ್ ಮತ್ತು ಜೆಲೆನಾ ಒಸ್ಟಾಪೆಂಕೊ ನಡುವೆ ನಡೆಯಲಿದೆ.