ಸಂಗನಬಸವ ಮಹಾಶಿವಯೋಗಿಗಳ 118ನೇ ಜನ್ಮ ದಿನೋತ್ಸವ


ತಾಂಬಾ 10: ಬಂಥನಾಳದ ಲಿಂ: ಸಂಗನಬಸವ ಮಹಾಶಿವಯೋಗಿಗಳವರ ಪಟ್ಟಧಿಕಾರ ಶತಮಾನೋತ್ಸವ ಹಾಗೂ 118ನೇ ಜನ್ಮ ದಿನೋತ್ಸವ ಮತ್ತು ಗುರುವಿರಕ್ತರ ಹಾಗೂ ಸರ್ವ ದರ್ಮದ ಮಠಾಧಿಶ್ವರ ಸದ್ಬಾವನಾ ಸಮಾರಂಭವು ದಿ.24ರಿಂದ 27ರವರೆಗೆ ಜರುಗಲಿದೆ ಎಂದು ಬಂಥನಾಳದ ವೃಷಭಲಿಂಗೇಶ್ವರ ಮಹಾ ಶಿವಯೋಗಿಗಳು ಹೆಳೀದರು.

ತಾಂಬಾ ಗ್ರಾಮದ ಗುರು ವಿರಕ್ತಮಠದ ಆವರಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಗನಬಸವ ಶಿವಯೋಗಿಗಳು ಬಂಥನಾಳ ಮಠಕ್ಕೆ ನಾಲ್ಕನೇ ಪೀಠಾಧಿಪತಿಗಳಾಗಿ ಆಗಮಿಸಿ ತಮ್ಮ ಚಿಕ್ಕ ವಯಸ್ಸಿನಲ್ಲಿ ಪುರಾಣ ಪ್ರವಚನ ಆರಂಭಿಸಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುತ್ತ ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಗೈದ ಶಿವಯೋಗಿಗಳ ಜನ್ಮ ದಿನೋತ್ಸವವನ್ನು ಪ್ರತಿವರ್ಷ ಆಚರಿಸುತ್ತ ಬರಲಾಗಿದೆ ಈ ವರ್ಷ ವಿಶೇಷವಾಗಿ ಶ್ರೀಮದ್  ಉಜ್ಜಯನಿ ಶ್ರೀಮದ್ ಶ್ರೀಶೈಲ ಶ್ರೀಮದ್ ಕಾಶಿ ಶ್ರೀಮದ್ ಹೇಮಕೂಟ ಹೋಸಪೆಟೆ ಶ್ರೀಮದ್ ಮುಂಡರಗಿ ಜಗದ್ಗುರುಗಳವರ ಸಾನಿಧ್ಯದಲ್ಲಿ ಜರುಗಲಿದೆ ಶಿವಯೋಗಳ ಭವ್ಯ ಮೆರವಣಿಗೆಯನ್ನು ಗವಿಸಿದ್ಧೇಶ್ವರ ವಿರಕ್ತಮಠದಿಂದ ಜಗದ್ಗುರುಗಳವರ ಸಾರೋಟದ ಮೆರವಣಿಗೆಯಲ್ಲಿ 1008 ಕುಂಭ ಕಳಸ ಆರತಿ ಯೋಂದಿಗೆ ಭವ್ಯ ಮೆರವಣಿಗೆ ಜರುಗಲಿದೆ ನಂತರ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘದ ಶಾಲಾ ಆವರಣದಲ್ಲಿ ಧರ್ಮ ಸಭೆ ಜರುಗಲಿದೆ ಈ ಸಮಾರಂಭದಲ್ಲಿ ನಾಡಿನ ಶರಣರು ಹಾಗೂ ಶಿವಯೋಗ ಮಂದಿರದ ಶಿವಯೋಗಿಗಳು ಆಗಮಿಸಲಿದ್ದಾರೆ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಎಸ್ವ್ಹಿವ್ಹಿ ಸಂಘದ ಚೇರಮನ್ ಜೆ ಎಸ್ ಹತ್ತಳ್ಳಿ ಜಿ ಪಂ ಸದಸ್ಯ ಸುಭಾಸ ಕಲ್ಲೂರ ರುದ್ರಪ್ಪ ನಾವದಗಿ ಶಂಕ್ರೆಪ್ಪ ಜಾಲವಾದಿ ಕಾಶಿರಾಯಗೌಡ ಬಿರಾದಾರ ಬಸಲಿಂಗಪ್ಪಗೌಡ ಕುಬೇರನಾವದಗಿ ಸುಭಾಸ ಪ್ಯಾಟಿ ಸಿದ್ದಗೊಂಡ ಸೋಮಲಿಂಗ ರೇವಣಸಿದ್ಧ ಪಾಸೋಡಿ ಮಲ್ಲು ಹುಲ್ಲೂರ ಅಣ್ಣಾರಾಯ ಗೌಡ ಪಾಟೀಲ ಭಗವಂತ ಮಾಲಗಾರ ಶರಣಯ್ಯ ಹಿರೆಮಠ ಸಿದ್ದರಾಮ ಸೋಲಾಪೂರ ಸೇರಿದಂತೆ ಮತ್ತಿತರರು ಇದ್ದರು.