ಲೋಕದರ್ಶನ ವರದಿ
ಸಂಬರಗಿ 13: ತಾಂವಶಿ ಗ್ರಾಮದ ಹೊರವಲಯದಲ್ಲಿ ಸ್ಥಗಿತಗೊಂಡಿರುವ ಸನದಿ ತೋಟದ ಕನ್ನಡ ಕಿರಿಯ ಪ್ರಾಥಮಿಕ ಶಾಲೆ 2016ರಿಂದ ಮರಳಿ ಪ್ರಾರಂಭ ಮಾಡಿದರು. ಪ್ರಾರಂಭವಾದಾದ ಮಕ್ಕಳ ಸಂಖ್ಯೆ ಕೇವಲ 5 ಇತ್ತು ಆದರೆ ಈಗ 57ಕ್ಕೆ ಬೆಳೆದು ನಿಂತಿದೆ. ಶಿಕ್ಷಕರ ಹಾಗೂ ಕೊಠಡಿ ಕೊರತೆಯಿಂದ ಮತ್ತೆ ಸಮಸ್ಯೆಗೆ ಕಾರಣವಾಗಿದೆ.
2004ರಲ್ಲಿ ಶಾಲೆಯು ಪ್ರಾರಂಬಗೊಳಿಸಲಾಗಿತ್ತು. 2008ರ ವರೆಗೆ ಶಾಲೆಯು ಸುರಕ್ಷಿತವಾಗಿ ನಡೆಯಿತು. ಶಿಕ್ಷಕರ ಹಾಗೂ ಮಕ್ಕಳ ಕೊರತೆಯಿಂದ 2016ರ ವರೆಗೆ ಸ್ಥಗಿತಗೊಂಡಿತು. ಆನಂತರ ಶಾಲೆಯನ್ನು 1-5 ನೇ ತರಗತಿಯ ವರೆಗೆ ಶಾಲೆಯನ್ನು ಮರಳಿ ಪ್ರಾರಂಭವಾದ ನಂತರ ಕೇವಲ 5 ಮಕ್ಕಳ ಸಂಖ್ಯೆ ಇತ್ತು. ಅಲ್ಲಿನ ಶಾಲೆಯ ಪ್ರಧಾನ ಗುರುಗಳು ಹಾಗೂ ಎಸ್.ಡಿ.ಎಮ್.ಸಿ ಸಿಬ್ಬಂದಿ ಸೇರಿಕೊಂಡು ತೋಟದ ವಸತಿಗೆ ಪ್ರತಿ ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ದಾಖಲು ಮಾಡಬೇಕೆಂದು ವಿನಂತಿಸಿದ ತರುವಾಯ ಮಕ್ಕಳನ್ನು ಪಾಲಕರು ಆ ಶಾಲೆಗೆ ದಾಖಲು ಮಾಡಿದರು. ಈ ವರ್ಷ 6ನೇ ತರಗತಿಯನ್ನು ಪ್ರಾರಂಭಿಸಿದ್ದಾರೆ. ಆಕಾರಣ ತೋಟದ ವಸತಿಯ ಮಕ್ಕಳಿಗೆ ಭಾರಿ ಅನುಕೂಲವಾಗಿದೆ.
ಈ ಶಾಲೆಗೆ ಒಟ್ಟು 4 ಕೊಠಡಿಗಳಿದ್ದು ಬಿಸಿ ಊಟದ ಕೋಣೆ, ಶಾಲೆಯ ಪ್ರಧಾನ ಗುರುಗಳಿಗೊಂದು ಹಾಗೂ ಇನ್ನುಳಿದ 2 ಕೋಣೆಗಳಲ್ಲಿ 1-6ನೇ ತರಗತಿಗಳು ನಡೆಯುತ್ತಿವೆ. ಪ್ರಧಾನ ಗುರುಗಳು ಒಬ್ಬರೇ ಇದ್ದು ಶಿಕ್ಷಕರೂ ಅವರೇ, ಪ್ರಧಾನ ಗುರುಗಳು ಅವರೇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಸಂಖ್ಯೆ ಕಡಿಮೆ ಇದ್ದರೂ ಸಹ ಮಕ್ಕಳಿಗೆ ಒಳ್ಳಯ ಪಾಠ ನೀಡಿ ಶಾಲೆಯ ಫಲಿತಾಂಶವನ್ನು ಉತ್ತಮವಾಗಿ ನೀಡಿದ್ದಾರೆ. ಶಾಲೆಗೆ ಎಸ್.ಡಿ.ಎಮ್.ಸಿ ಕಮೀಟಿ ಹಾಗೂ ತೋಟದ ವಸತಿಗಳ ನಿವಾಸಿಗಳು ಪ್ರತಿ ಮನೆ ಮನೆಗೆ 500 ರಿಂದ 1000 ರೂ ದೇಣಿಗೆ ನೀಡಿ ಶಾಲೆಗೆ ಅವಶ್ಯಕವಿರುವ ಎಲ್ಲಾ ವಸ್ತುಗಳನ್ನು(ಕುಚರ್ಿ, ಟೇಬಲ್, ಅಡುಗೆ ಸಾಮಾನುಗಳು) ಶಾಲೆಗೆ ನೀಡಿ ಒಳ್ಳೆಯ ಶಾಲೆ ಮಾಡಿದ್ದಾರೆ. ಸದ್ಯದಲ್ಲಿ ಶಿಕ್ಷಕರ ಕೊರತೆ ಹಾಗೂ ಕೊಠಡಿಗಳ ಕೊರತೆಯಿಂದ ಮಕ್ಕಳಿಗೆ ಬೇರೆ ಬೇರೆ ಕೊಠಡಿಯಲ್ಲಿ ಕೂಡ್ರಿಸಿ ಮಕ್ಕಳಿಗೆ ಪಾಠ ಹೇಳಲು ಇನ್ನೂ 4 ಕೊಠಡಿಗಳ ಅವಶ್ಯಕತೆ ಇದೆ. ಈ ಕುರಿತು ಶಿಕ್ಷಕ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಕೊಠಡಿ ಕಟ್ಟಡ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ಇನ್ನೂವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ರಾಜ್ಯ ಸಕರ್ಾರ ಗಡಿ ಭಾಗದ ಕನ್ನಡ ಶಾಲೆಗೆ ಯಾವುದೇ ಸಮಸ್ಯೆ ಇದ್ದರೆ ಶೀಘ್ರದಲ್ಲಿ ಪರಿಹಾರಗೊಳಿಸಬೇಕೆಂದು ಆದೇಶ ಹೊರಡಿಸಿದೆ. ಆದರೆ ಈ ಆದೇಶವನ್ನು ಗಡಿ ಭಾಗದಲ್ಲಿ ಅಧಿಕಾರಿಗಳು ಹಾಗೂ ಜನಪ್ರಿತಿನಿಧಿಗಳು ಗಾಳಿಗೆ ತೂರಿದ್ದಾರೆ.
ಈ ಕುರಿತು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಚನ್ನಪ್ಪಾ ಚೌಗಲಾ ಇವರನ್ನು ಸಂಪಕರ್ಿಸಿದಾಗ ನಮ್ಮ ಶಾಲೆಗೆ ಇನ್ನೂ 3 ಶಿಕ್ಷಕರು ಹಾಗೂ 4 ಕೊಠಡಿಗಳು ಅವಶ್ಯಕತೆಯಿದ್ದು ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆಯನ್ನು ಪರಿಹಾರಗೊಳಿಸಬೇಕು. ಇಲ್ಲವಾದರೆ ಕನ್ನಡ ಶಾಲೆಗಾಗಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಈ ಕುರಿತು ಕ್ಷೇತ್ರಶಿಕ್ಷಣಾಧಿಕಾರಿ ಅಥಣಿ ಸಿ.ಎಮ್.ನೇಮಗೌಡ ಇವರನ್ನು ಸಂಪಕರ್ಿಸಿದಾಗ ನಾನು ಗಡಿ ಭಾಗದ ಎಲ್ಲಾ ಕನ್ನಡ ಶಾಲೆಗಳನ್ನು ಸಂಪಕರ್ಿಸಿ ಪರಿಶೀಲನೆ ಮಾಡಿ ಕೊಠಡಿ ಹಾಗೂ ಶಾಲೆಯ ಶಿಕ್ಷಕರನ್ನು ಸಮಸ್ಯೆ ಪರಿಹಾರಗೊಳಿಸಲು ಪ್ರಯತ್ನ ಮಾಡುತ್ತೇನೆ, ಕನ್ನಡ ಶಾಲೆಗೆ ಪ್ರಾಧಾನ್ಯತೆ ನೀಡುತ್ತೇನೆಂದು ಅವರು ಸ್ಪಷ್ಟಪಡಿಸಿದರು.