ಸಾಯಿಬಾಬಾರ 100 ನೇ ವರ್ಷದ ಸಮಾಧಿ ಉತ್ಸವ

 

ಲೋಕದರ್ಶನ ವರದಿ

ಧಾರವಾಡ 05:  ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘ, (ರಿ.) ಧಾರವಾಡ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಸಾಯಿಬಾಬಾರವರ 100 ನೇ ವರ್ಷದ ಸಮಾಧಿ ಉತ್ಸವದ ಅಂಗವಾಗಿ ಸಾಯಿ ಸಚ್ಛರಿತೆ ಆಧಾರಿತ ಕಥೆಗಳ ಬೆಳಕು, ಧ್ವನಿ ಮತ್ತು ದೃಶ್ಯ ರೂಪಕ "ಓ ಸಾಯಿ ಆವೋ ಸಾಯಿ" ಮೂಲ ಮರಾಠಿ ಹೇಮಾಂಡ ಪಂತ, ಕನ್ನಡ ಅನುವಾದ ಲಲಿತಾ ಇನಾಮದಾರ ಧಾರವಾಡ. ದೃಶ್ಯ, ಪರಿಕಲ್ಪನೆ ಹಾಗೂ ನಿದರ್ೇಶನ ಸಂತೋಷ ಗಜಾನನ ಮಹಾಲೆ, ಸಹ ನಿದರ್ೇಶನ ಗೋಪಾಲ ಉಣಕಲ್, ಸಹಾಯ ಸುಭಾಶ ಭಜಂತ್ರಿ, ಡಾ. ಪ್ರಕಾಶ ಮಲ್ಲಿಗವಾಡ ನೀಡುತ್ತಿದ್ದಾರೆ. 

ಅಧ್ಯಕ್ಷರಾಗಿ ಕನರ್ಾಟಕ ವಿದ್ಯಾವರ್ಧಕ ಸಂಘದ ಕಾರ್ಯದಶರ್ಿಗಳಾದ ಪ್ರಕಾಶ ಉಡಿಕೇರಿ, ಉಧ್ಘಾಟಕರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡದ ಸಹಾಯಕ ನಿದರ್ೇಶಕರಾದ ಸಿದ್ಧಲಿಂಗೇಶ ರಂಗಣ್ಣನವರ, ಮುಖ್ಯ ಅತಿಥಿಗಳಾಗಿ ಡಾ. ಶಶಿಧರ ನರೇಂದ್ರ, ಕೃಷ್ಣಾ ಜೋಶಿ, ಮಹೇಶ ಶೆಟ್ಟಿ, ಎಸ್.ಎಸ್.ರೋಣದ, ಬಸವರಾಜ ಪೂಜಾರ ಹಾಗೂ ಪ್ರಕಾಶ ಪಿಕಳೆ ಆಗಮಿಸಲಿದ್ದಾರೆ. 

ಸ್ಥಳ: ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ, ಕನರ್ಾಟಕ ವಿದ್ಯಾವರ್ಧಕ ಸಂಘ, ಧಾರವಾಡ ದಿ. 08 ರವಿವಾರ ಸಂಜೆ 6.30 ಘಂಟೆಗೆ ಹಮ್ಮಿಕೊಳ್ಳಲಾಗಿದೆ. ರೂಪಕದಲ್ಲಿ ಗೋಪಾಲ ಉಣಕಲ್, ಸುಭಾಶ ಭಜಂತ್ರಿ, ಡಾ. ಪ್ರಕಾಶ ಮಲ್ಲಿಗವಾಡ, ಕೃಷ್ಣಾನಂದ ಮಹಾಲೆ, ಅಪೂವರ್ಾ ಮಹಾಲೆ, ಪ್ರಣವ ಮಹಾಲೆ. ಕಿರಣ ಮಹಾಲೆ, ಕೃತಿಕಾ ಮಹಾಲೆ, ಸರಸ್ವತಿ ಮಹಾಲೆ, ಸೌಮ್ಯಾ(ದೀಪಾ) ಮಹಾಲೆ, ಸಾರಿಕಾ ಮಹಾಲೆ, ರೇಣುಕಾ ಮಹಾಲೆ, ಸ್ನೇಹಾ ಮಹಾಲೆ, ತೀಶಾ ಮಹಾಲೆ, ಸಂಪ್ರೀತಾ ಮಹಾಲೆ, ಸೋಹನ ಮಹಾಲೆ, ಆದರ್ಶ ಮಹಾಲೆ, ಪೂವರ್ಿ ಮಹಾಲೆ. ಅಶೋಕ ನಿಂಗೋಲಿ ನಟಿಸಲಿದ್ದು, ನಾಟಕ ಮನೆ (ರಿ) ಧಾರವಾಡ, ಆರ್.ಕೆ.ಛಾಯಾ ಫೌಂಡೇಶನ್, ಧಾರವಾಡ, ರೈಜಿಂಗ್ಸ್ಟಾರ್ಸ್ ಆರ್ಟ ಆಂಡ್ ಕಲ್ಚರಲ್ ಅಕಾಡಮಿ ಧಾರವಾಡ, ನಾಟ್ಯಸ್ಪೂತರ್ಿ ಆರ್ಟ ಆಂಡ ಕಲ್ಚರಲ್ ಅಕಾಡಮಿ, ಧಾರವಾಡ. ಸಾಯಿಚರಣ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ ಧಾರವಾಡ. ಸದಾನಂದ ಬಂಗೇಣ್ಣನವರ ಹಾಗೂ ರಾಮಚಂದ್ರ ಕುಲಕಣರ್ಿ, ನಾಗರಾಜ ಘಾಟಗೆ ಸಹಕಾರವಿದೆ.

ವಿಜಯೀಂದ್ರ ಅರ್ಚಕರವರ ನಿರೂಪಣೆವಿದೆ. ರಾಜಶೇಖರ ಕುರಿಯವರರವರ ಬಬ್ರುವಾಹನ ಏಕಪಾತ್ರಾಭಿನಯವಿದೆ. ಪ್ರವೇಶ ಉಚಿತವಿದ್ದು ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಸಂತೋಷ ಮಹಾಲೆ ಎಂದು ಈ ಮೂಲಕ ಪ್ರಕಟನೆಯಲ್ಲಿ ಕೋರಿದ್ದು ಹೆಚ್ಚಿನ ಮಾಹಿತಿಗಾಗಿ 9880854481, 9945423735 ಹಾಗು 9844759591 ಗೆ ಸಂಪಕರ್ಿಸಬಹುದು