ಸಿಂದಗಿ 04: ಉದರ್ು ಭಾಷಾ ಹಾಗೂ ಉದರ್ು ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ತಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದಶರ್ಿ ಡಾ. ದಸ್ತಗೀರ ಮುಲ್ಲಾ ಮಾತನಾಡಿ, ಪ್ರಾಥಮಿಕ ಶಿಕ್ಷಣವು ರಾಷ್ಟ್ರದ ಭದ್ರಬುನಾದಿ ಎಂಬಂತೆ ನಮ್ಮ ರಾಜ್ಯದಲ್ಲಿ ವಿವಿಧ ಮಾಧ್ಯಮದಲ್ಲಿ ಶಿಕ್ಷಣಗಳಲ್ಲಿ ಉದರ್ು ಮಾಧ್ಯಮವು ಒಂದಾಗಿದೆ. ಉದರ್ು ಮಾಧ್ಯಮ ಶಾಲೆಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಸಂಖ್ಯಾತ ಶಾಲೆಗಳಿಗೆ ಹಾಗೂ ವಿದ್ಯಾಥರ್ಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿರುವುದು ಸ್ವಾಗತಾರ್ಹ.
ವಿಜಯಪುರ ಜಿಲ್ಲೆಯು ಅಖಂಡ ಕನರ್ಾಟಕದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಉದರ್ು ಶಾಲೆಗಳು ಹಾಗೂ ಉದರ್ು ಭಾಷೆಯ ಅಭಿವೃದ್ಧಿಗಾಗಿ ಸಹಕರಿಸುತ್ತಿರುವ ಜಿಲ್ಲೆಯಾಗಿದೆ.
ಸಿಂದಗಿ ನಗರ ಘಟಕಾಧ್ಯಕ್ಷ ಮಹ್ಮದ ಅಸ್ಪಾಕ್ ಕರ್ಜಗಿ ಮಾತನಾಡಿ, ಉದರ್ು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅನುಪಾತವನ್ನು ರದ್ದುಪಡಿಸಿ ಮುಖ್ಯ ಗುರುಗಳ ಹುದ್ದೆ ಮಂಜೂರಿಸಬೇಕು, ಉದರ್ು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರು ಉದರ್ು ಬಲ್ಲವರಾಗಿರಬೇಕು. ಉದರ್ು ಭಾಷಾ ಅಲ್ಪಸಂಖ್ಯಾತ ಎಲ್ಲಾ ಶಾಲಾ ಆವರಣದಲ್ಲಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸಲು ಎಲ್.ಕೆ.ಜಿ ಹಾಗೂ ಯು.ಕೆ.ಜಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಹೆಚ್ಚುವರಿ ಸಂದರ್ಭದಲ್ಲಿ ಮು.ಗು ಹಾಗೂ ಕನ್ನಡ ದೈಶಿ. ಹುದ್ದೆ ಪರಿಗಣಿಸದೇ ಹೆಚ್ಚುವರಿ ಶಿಕ್ಷಕರ ನಿಗದಿ ಮಾಡಬೇಕು. ಪ್ರತಿ ಶಾಲೆಯಲ್ಲಿ ಸ್ವಚ್ಛತೆಗಾಗಿ ಗೌರವಧನದ ಆಧಾರದ ಮೇಲೆ ಆಯಾ ಹುದ್ದೆಗಳನ್ನು ನೇಮಿಸಿಕೊಳ್ಳಬೇಕು. ಉದರ್ು ಭಾಷೆ ಅಭಿವೃದ್ಧಿಗಾಗಿ ಹಾಗೂ ಶಿಕ್ಷಣದ ಸಂಪ್ಮನೂಲ ವೃದ್ದಿಸಲು ಪ್ರತಿ ತಾಕೂಕಿನಲ್ಲಿ 1 ರಂತೆ ಉದರ್ು ಶಿಕ್ಷಣ ಸಂಯೋಜಕರು ಹಾಗೂ 1 ಬಿ.ಆರ್.ಪಿ ಹುದ್ದೆಯನ್ನು ಮಂಜೂರಿ ಮಾಡಿ ಭತರ್ಿ ಮಾಡಬೇಕು. ಉದರ್ು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ ಶಿಕ್ಷಣ ಕೇಂದ್ರ ಹಾಗೂ ಕಂಪ್ಯೂಟರ ಶಿಕ್ಷಕರ ಮಂಜೂರಾತಿ ಹಾಗೂ ನೇಮಕಾತಿ ಮಾಡಿಕೊಳ್ಳುವುದು. ರಾಜ್ಯಾದಂತ ಏಕರೂಪ ವಾರದ ರಜೆಯನ್ನು ಗುರುವಾರ, ಶುಕ್ರವಾರ ಅಥವಾ ಶನಿವಾರ, ರವಿವಾರ ದಿನದಂದು ಆದೇಶಿಸಬೇಕು. ಉದರ್ು ಭಾಷೆ ಅಭಿವೃದ್ಧಿಗಾಗಿ ಪ್ರತಿ ತಾಲೂಕಿಗೆ 1 ರಂತೆ ಉದರ್ು ಭವನವನ್ನು ಮಂಜೂರ ನೀಡಬೇಕು. ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಶಾಲಾ ಬ್ಯಾಗ ಹಾಗೂ ಉಚಿತ ನೋಟ್ಬುಕ್ ನೀಡಬೇಕು. ಭಾಷಾ ಅಲ್ಪಸಂಖ್ಯಾತ ಮಕ್ಕಳಿಗಾಗಿ ಶಿಷ್ಯ ವೇತನ ನೀಡುವಾಗ ಸರಳೀಕರಣಗೊಳಿಸಬೇಕು. ಉದರ್ು ಮಾಧ್ಯಮದಲ್ಲಿ ಪಿ.ಯು.ಸಿ ವರೆಗೆ ಶಿಕ್ಷಣ ನೀಡಬೇಕೆನ್ನುವ ವಿವಿಧ ಬೇಡಿಕೆಗಳು ಶೀಘ್ರದಲ್ಲಿ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.