ವಿಜಯಪುರ :04 ಮಧ್ಯಪ್ರದೇಶದ ಮಂಡಸೌರನಲ್ಲಿ ಮಗುವಿನ ಮೇಲೆ ಅತ್ಯಾಚಾರವೆಸಗಿದ ನಿರ್ದಯಿ ಆರೋಪಿಗೆ ನಿರ್ದಯವಾದ ಶಿಕ್ಷೆ ನೀಡುವುದು ಹಾಗೂ ಅತ್ಯಾಚಾರಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸುವ ಕಾನೂನು ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಡಿಎಸ್ಓ, ಎಐಡಿವೈಓ, ಎಐಎಂಎಸ್ಎಸ್ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳ ನಿಯೋಗ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಈ ಸಂಧರ್ಭದಲ್ಲಿ ಮಾತನಾಡಿದ ಎಐಡಿವೈಓ ಜಿಲ್ಲಾಧ್ಯಕ್ಷ ಸಿದ್ಧಲಿಂಗ ಬಾಗೇವಾಡಿ, ಮಧ್ಯಪ್ರದೇಶದ ಮಂಡಸೌರನಲ್ಲಿ ಅತ್ಯಾಚಾರಕ್ಕೆ ಬಲಿಯಾದ ಮಗು ದಿವ್ಯಾಳ ಸುದ್ದಿ ಕೇಳಿದ ಪ್ರತಿಯೊಬ್ಬರ ಮನಸ್ಸು ಕಂಬನಿ ಮಿಡಿಯುವಂತಾಯ್ತು. ದೇಶದ ಎಲ್ಲಾ ಭಾಗಗಳಲ್ಲಿ ಎಳೆಯ ಮಗುವಿನಿಂದ ಹಿಡಿದು ವಯಸ್ಕ ಮಹಿಳೆಯತನಕ ಲೈಂಗಿಕ ಕಿರುಕುಳ, ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಸವರ್ೇ ಸಾಮಾನ್ಯವಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು. ಇಂತಹ ಸಮಸ್ಯೆಗಳಿಗೆ ಮೂಲ ಕಾರಣ ನಮ್ಮ ಆಳ್ವಿಕೆ ವ್ಯವಸ್ಥೆ, ಹಾಗೂ ಸೆನ್ಸಾರ್ಬೋಡರ್ಿನ ನಿರ್ಲಕ್ಷತೆ ಎಂಬುದು ಖಾತ್ರಿಯಾಗಿದೆ. ಅಶ್ಲೀಲ ಸಿನೆಮಾ, ಅಶ್ಲೀಲ ಸಾಹಿತ್ಯವೇ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಅಶ್ಲೀಲ ದೃಶ್ಯಾವಳಿಗಳನ್ನು ವೀಕ್ಷಿಸುವ ಮೂಲಕ ಯುವಜನತೆ ತಪ್ಪು ದಾರಿ ತುಳಿಯುತ್ತಿದ್ದಾರೆ, ಅವರಿಗೆ ಮಹಿಳೆ, ಮಕ್ಕಳ ಮೇಲಿನ ಗೌರವವೇ ಕಡಿಮೆಯಾಗುತ್ತಿದೆ ಎಂದರು. ಒಟ್ಟಾರೆ ಈ ಕುಸಂಸ್ಕೃತಿ ವಿರುದ್ದ ಪ್ರತಿಯೊಬ್ಬರು ಧ್ವನಿ ಎತ್ತಲೇಬೇಕು. ಈ ಕೂಡಲೇ ಸಕರ್ಾರ ಇಂತಹ ಕೃತ್ಯಗಳಲ್ಲಿ ಭಾಗಿಯಾದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಅತ್ಯಾಚಾರವೆಸಗುವ ಆರೋಪಿಗಳಿಗೆ ನಿರ್ದಯವಾದ ಶಿಕ್ಷೆ ನೀಡುವುದು, ಅಶ್ಲೀಲ್ ವೆಬ್ಸೈಟ್ಗಳನ್ನು ನಿಷೇಧಿಸುವುದು, ಸಾಮಾಜಿಕ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪದಾಧಿಕಾರಿಗಳು ಸಕರ್ಾರಕ್ಕೆ ಮನವಿ ಸಲ್ಲಿಸಿದರು.
ಎಐಡಿಎಸ್ಓ ಜಿಲ್ಲಾಧ್ಯಕ್ಷ ಸುನೀಲ ಸಿದ್ರಾಮಶೆಟ್ಟಿ, ಎಐಎಂಎಸ್ಎಸ್ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ, ಬಾಳು ಜೇವೂರ, ಸುರೇಖಾ ಕಡಪಟ್ಟಿ, ಕಾವೇರಿ, ಪ್ರೇಮಾ, ಮುತ್ತುರಾಜ ಮೊದಲಾದವರು ಪಾಲ್ಗೊಂಡಿದ್ದರು.