ಸಮಗ್ರ ಗಣಿಬಾಧಿತ ಪ್ರದೇಶದ ಅಭಿವೃದ್ಧಿ ಪರಿಷ್ಕೃತ ಕ್ರಿಯಾಯೋಜನೆಗೆ ಸೂಕ್ತ-ಸಲಹೆ: ಡಿಸಿ February 07, 2026 07:27 AM | By Admin ಬಳ್ಳಾರಿ10: ಗಣಿಬಾಧಿತ ಪ್ರದೇಶಗಳಾದ ಬಳ್ಳಾರಿ,ಹೊಸಪೇಟೆ ಮತ್ತು ಸಂಡೂರು ತಾಲೂಕುಗಳ ಸಮಗ್ರ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತವು 10 ವರ್ಷಗಳ ಪರಿಷ್ಕೃತ ಕ್ರಿಯಾಯೋಜನೆ ರೂಪಿಸಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮೂರು ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೂಕ್ತ ಕ್ರಿಯಾಯೋಜನೆ ರೂಪಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು,ಇದಕ್ಕಾಗಿ ಆಯಾ ತಾಲೂಕುಗಳ ಜಿಪಂ,ತಾಪಂ ಮತ್ತು ಗ್ರಾಪಂ ಜನಪ್ರತಿನಿಧಿಗಳು, ಗಣಿ ಕಂಪನಿಗಳು ಮತ್ತು ಆಸಕ್ತ ಸ್ವಯಂ ಸೇವಾ ಸಂಸ್ಥೆಗಳಿಂದ ಸೂಕ್ತ-ಸಲಹೆ ಮತ್ತು ಸೂಚನೆಗಳನ್ನು ನೀಡಲು ಕೇಳಿಕೊಂಡಿದೆ. ಇದಕ್ಕಾಗಿ ಬಳ್ಳಾರಿ ತಾಲೂಕಿನಲ್ಲಿ ಜು.16ರಂದು, ಸಂಡೂರಿನಲ್ಲಿ 17 ಮತ್ತು ಹೊಸಪೇಟೆಯಲ್ಲಿ 18ರಂದು ಸಲಹಾ-ಸೂಚನಾ ಸಭೆಗಳನ್ನು ಅಯೋಜಿಸಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸತ್ ಮನೋಹರ್ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೆಎಂಇಆರ್ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನಪ್ರತಿನಿಧಿಗಳು ಮತ್ತು ಆಸಕ್ತ ಎನ್ಜಿಒಗಳು, ಮೈನಿಂಗ್ ಕಂಪನಿಗಳು ಈ ಸಭೆಯಲ್ಲಿ ಭಾಗವಹಿಸಿ ನವನಾವಿನ್ಯತೆವುಳ್ಳ ಮತ್ತು ಗಣಿಬಾಧಿತ ಪ್ರದೇಶದ ಅಭಿವೃದ್ಧಿ ಬದಲಾವಣೆಯಾಗುವಂತ ಕ್ರಿಯಾಯೋಜನೆಗಳನ್ನು ಸಭೆಯಲ್ಲಿ ಮಂಡಿಸಬಹುದು. ಇವುಗಳೆಲ್ಲವುಗಳನ್ನು ಕ್ರೋಢಿಕರಿಸಿ ಜು.19ರಂದು ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಸಕರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಸೂಕ್ತವಾಗುವಂತ ಪರಿಷ್ಕೃತ ಕ್ರಿಯಯೋಜನೆ ರೂಪಿಸಲಾಗುವುದು ಮತ್ತು ನಂತರ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು. ಆದ ಕಾರಣ ಆಯಾ ತಾಲೂಕಿನ ಜನಪ್ರತಿನಿಧಿಗಳು, ಗಣಿಕಂಪನಿಗಳು, ಆಸಕ್ತ ಎನ್ಜಿಒಗಳು ಸಭೆಯಲ್ಲಿ ಭಾಗವಹಿಸಿ ಸೂಕ್ತ-ಸಲಹೆ ಸೂಚನೆಗಳನ್ನು ನೀಡಬಹುದು ಎಂದು ಅವರು ಮನವಿ ಮಾಡಿದರು. ಸಾಮಾಜಿಕ-ಅಥರ್ಿಕ ಅಭಿವೃದ್ಧಿ ಮತ್ತು ಪರಿಸರ ಪುನಃ ಮರುಸ್ಥಾಪನೆ ಮಾಡುವ ನಿಟ್ಟಿನ ಯೋಜನೆಗಳು, ಗಣಿಬಾಧಿತ ಪ್ರದೇಶಗಳ ರಸ್ತೆ ಅಭಿವೃದ್ಧಿ,ಸಾಮಾಜಿಕ ಮತ್ತು ಅಥರ್ಿಕ ಪ್ರಗತಿಗೆ ಸಂಬಂಧಿಸಿದ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಯೋಜನೆಗಳು, ಬೈಪಾಸ್ಗಳ ಅಭಿವೃದ್ಧಿ ಮತ್ತು ಗ್ರಾಮಗಳಲ್ಲಿ ಟ್ರಕ್ಸ್ಗಳು ನೇರವಾಗಿ ಹೋಗದಂತೆ ಮತ್ತು ಬೇರೆ ಮಾರ್ಗದ ಅಭಿವೃದ್ಧಿ, ಗಣಿಬಾಧಿತ ಪ್ರದೇಶಗಳಲ್ಲಿರುವ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಕಂಪೌಂಡ್ ಹಾಗೂ ಕಟ್ಟಡ ನಿಮರ್ಾಣ, ಕೌಶಲ್ಯ ಅಭಿವೃದ್ಧಿಗೆ ಒತ್ತು ತರುವ ಸ್ಕೀಂಗಳು, ಮಿಲ್ಕ್ ಡೈರಿಗಳು, ಸಾವಯವ ಕೃಷಿಗೆ ಒತ್ತು, ಘನತ್ಯಾಜ್ಯ ಸಮರ್ಪಕ ವಿಲೇವಾರಿ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು. ಸುತ್ತುವರಿದಿರುವ ವಾಯುಗುಣಮಟ್ಟ ನಿರ್ವಹಣಾ ಸಾಧನಗಳು, ನದಿ ಮತ್ತು ಕೆರೆಗಳಲ್ಲಿ ಹೂಳು ತುಂಬುವುದನ್ನು ತಡೆಗಟ್ಟುವ ಕ್ರಮ ಸೇರಿದಂತೆ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಕುರಿತು ತಮ್ಮ ಸೂಕ್ತ-ಸಲಹೆಗಳು ಯೋಜನೆಗಳನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಪ್ರೊಬೆಷನರಿ ಐಎಎಸ್ ಅಧಿಕಾರಿ ನಂದಿನಿ, ಡಿಎಫ್ಒ ರಮೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.