ಬೆಳಗಾವಿ ಪೊಲೀಸರಿಗೂ ಮೋಸ್ಟ್ ವಾಂಟೆಡ್ ರಶೀದ್ ಮಲಬಾರಿ

ಬೆಳಗಾವಿ: ಬೆಳಗಾವಿ ಪೊಲೀಸರಿಗೆ ಚಳ್ಳೆ ಹಣ್ಣು ತನ್ನಿಸಿ ಪರಾರಿಯಾಗಿದ್ದ ಪಾತಕಿ ರಶೀದ್ ಮಲಬಾರಿ ಇದೀಗ ಮತ್ತೆ ಸಿಕ್ಕಿಬಿದ್ದಿದ್ದಾನೆ. ಉದ್ಯಮಿ ಪುತ್ರನ ಕೊಲೆ ಪ್ರಕರಣ ಹಾಗೂ ಬಿಲ್ಡರ್ಸ್ ಗಳಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ªÀÄvÉÛ  ಬೆಳಗಾವಿ ಪೊಲೀಸರು ಮಲಬಾರಿಯನ್ನು ವಶಕ್ಕೆ ಪಡೆಯಲಿದ್ದಾರೆ.

 

ಮೂರು ವರ್ಷಗಳ ಕಾಲ ಗಡಿ ಜಿಲ್ಲೆ ಬೆಳಗಾವಿಯನ್ನೇ ಕೇಂದ್ರ ಸ್ಥಾನವಾಗಿಸಿಕೊಂಡಿದ್ದ ರಶೀದ್ ಉತ್ತರ ಕರ್ನಾಟಕ ಭಾಗದ ಬಿಲ್ಡರ್ಸ್ ಹಾಗೂ ಹಣವಂತರಿಗೆ ಜೀವಬೆದರಿಕೆ, ಅಪಹರಣದಂಥ ಕೃತ್ಯ ಎಸಗುತ್ತಿದ್ದನು. ಬೆಳಗಾವಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಜೀರ್ ನದಾಫ್ ಅವರಿಗೆ ಸೇರಿದ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಫಾರ್ಮ್ಹೌಸ್ನಲ್ಲಿ ರಶೀದ್ ಮಲಬಾರಿ ವಾಸ್ತವ್ಯ ಹೂಡುತ್ತಿದ್ದ. ಎರಡು ದಿನಗಳ ಹಿಂದೆ ಅಬುದಾಬಿಯಲ್ಲಿ ಸಿಕ್ಕಿ ಬಿದ್ದಿರುವ ದಾವೂದ್ ಬಂಟ ಹಾಗೂ ಭೂಗತ ಪಾತಕಿ ರಶೀದ್ ಮಲಬಾರಿಯನ್ನು ಬೆಳಗಾವಿ ಪೊಲೀಸರು ಬಂಧಿಸಲಿದ್ದಾರೆ.


ಬಿಲ್ಡರ್ ಶರೀಫ್ ಯರಗಟ್ಟಿ ಅವರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಮಲಬಾರಿ ಸಹಚರರನ್ನು ಬಂಧಿಸಿದ್ದರು. ವೇಳೆ ರಶೀದ್ ಮಲಬಾರಿ ಬೆಳಗಾವಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಪಾತಕಿ ರಶೀದ್ ಮಲಬಾರಿ ಬೆಳಗಾವಿಯಲ್ಲಿ ನೆಲೆಯೂರುತ್ತಿದ್ದ ಎಂಬ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಇಡೀ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದರು.