ರಾಯಬಾಗ 21: ಕೃಷಿ, ತೋಟಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ ಹಾಗೂ ಪಶುಸಂಗೋಪಣೆ ಇಲಾಖೆಯಗಳ ಜಂಟಿ ಸಹಯೋಗದಲ್ಲಿ ಪ್ರಸ್ತುತ ವರ್ಷದ ಹೋಬಳಿ ಮಟ್ಟದ ಕೃಷಿ ಆಭಿಯಾನವನ್ನು ಮೇ.28 ಮತ್ತು 29 ರಂದು ರಾಯಬಾಗ ಹೋಬಳಿಯಲ್ಲಿ ಹಾಗೂ ಜೂ.4 ಮತ್ತು 5 ರಂದು ಕುಡಚಿ ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿದರ್ೇಶಕ ಎಮ್.ಸಿ.ಮನ್ನಿಕೇರಿ ತಿಳಿಸಿದರು.
ಮಂಗಳವಾರ ಪಟ್ಟಣದ ಕೃಷಿ ಇಲಾಖೆ ಕಾಯರ್ಾಲಯದಲ್ಲಿ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಜರುಗಲಿರುವ ಕೃಷಿ ಅಭಿಯಾನದಲ್ಲಿ ಮಾಹಿತಿ ರಥದೊಂದಿಗೆ ಇಲಾಖೆಗಳ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ರೈತರಿಗೆ ಕೃಷಿ ಸಂಬಂಧಿಸಿದ ಮಾಹಿತಿ ನೀಡಲಿದ್ದಾರೆ ಎಂದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಸೋಯಾಬಿನ್ ಹಾಗೂ ಉದ್ದಿನ ಬೀಜಗಳ ವಿತರಣೆ ಪ್ರಾರಂಭಿಸಿದ್ದು, ಸೊಯಾಬಿನ್ 30 ಕೆಜಿ ಪ್ಯಾಕೇಟನ್ ಬೆಲೆ ರೂ.1080 ಹಾಗೂ ಉದ್ದು 5 ಕೆ.ಜಿ. ಪ್ಯಾಕೇಟನ್ ಬೆಲೆ ರೂ.275 ಇದ್ದು, ಆಸಕ್ತ ರೈತರು ರಾಯಬಾಗ ಮತ್ತು ಕುಡಚಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳಾದ ಆಧಾರ ಕಾಡರ್್, ಬ್ಯಾಂಕ್ ಪಾಸ ಬುಕ್, ಖಾತೆ ಉತಾರ್ ಮತ್ತು ಕಂಬೈಂಡ ಉತಾರ, ಜಾತಿ ಪ್ರಮಾಣ ಪತ್ರ (ಪ.ಜಾ ಮತ್ತು ಪ.ಪಂ) ಮತ್ತು ಒಂದು ಇತ್ತಿಚಿನೆ ಭಾವಚಿತ್ರವನ್ನು ನೀಡಿದ ಖರೀದಿಸಬಹುದೆಂದರು.
2019-20ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರಸ್ತುತ ವರ್ಷದಿಂದ ಕಿರು ಸಿರಿಧಾನ್ಯ ಉತ್ತೇಜನ ಯೋಜನೆಯಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪೋತ್ಸಾಹ ಧನ ದೊರೆಯಲಿದ್ದು, ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೊಂದಾಯಿಸಬೇಕೆಂದು ತಿಳಿಸಿದರು.
2019 ರ ಮುಂಗಾರು ಹಂಗಾಮಿನಲ್ಲಿ ಬೆಳೆಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಬೆಳೆ ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಲು ಹೆಸರು (ಮಳೆ ಆಶ್ರಿತ) ಬೆಳೆಗೆ ಜುಲೈ 16 ಹಾಗೂ ಇನ್ನುಳಿದ ಉಳಿದ ಎಲ್ಲಾ ಬೆಳೆಗಳಿಗೆ ಜುಲೈ 31 ರಂದು ಕೊನೆಯ ದಿನಾಂಕವಾಗಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯನ್ನು ಸಂಪಕರ್ಿಸುವಂತೆ ತಿಳಿಸಿದರು.
ಅಣ್ಣಾಸಾಬ ಚೌಗಲೆ, ರಾಜೇಂದ್ರ ದತ್ತವಾಡೆ, ಬಿ.ಎ.ಕಿಲ್ಲೇದಾರ, ಈಶ್ವರ ಚೌಗಲೆ, ಬಸವರಾಜ ಕುರಿಮನಿ ಹಾಗೂ ರೈತ ಸಂಪರ್ಕ ಸಿಬ್ಬಂದಿ ಉಪಸ್ಥಿತರಿದ್ದರು.