ಮಧ್ಯಪ್ರದೇಶದ ಬಾಲಕಿಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಧಾರವಾಡ 05:  ಮಧ್ಯಪ್ರದೇಶದ ಮಂಡಸೌರದಲ್ಲಿ ಏಳು ವರ್ಷದ ಬಾಲಕಿಯ ಮೇಲೆನ ಅತ್ಯಾಚಾರವನ್ನು ಖಂಡಿಸಿ ಹಾಗೂ ಅತ್ಯಾಚಾರವೆಸಗಿದ ಅಪರಾಧಿಗಳಿಗೆ ಉಗ್ರಶಿಕ್ಷೆ ವಿಧಿಸಲು ಆಗ್ರಹಿಸಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್, ಸಂಘಟನೆಗಳು ಜಂಟಿಯಾಗಿ ಇಂದು ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾಥರ್ಿ, ವಿದ್ಯಾಥರ್ಿನಿಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಎಐಎಂಎಸ್ಎಸ್ ಮಹಿಳಾ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಮಧುಲತಾ ಗೌಡರ್ ಮಾತನಾಡಿ ದಿವ್ಯಾ ಘಟನೆ ನಾಗರಿಕ, ಸಭ್ಯ ಸಮಾಜ ತಲೆತಗ್ಗಿಸುವಂತದ್ದು. ಈ ಕೃತ್ಯ ಎಸಗಿದವರನ್ನು ಕೂಡಲೇ ಉಗ್ರ ಶಿಕ್ಷೆಗೊಳಪಡಿಸಬೇಕು. ಇಂತಹ ವಿಕೃತ ಮನಸ್ಥಿತಿಗಳನ್ನು ಹುಟ್ಟುಹಾಕುತ್ತಿರುವ ಸಾಮಾಜಿಕ ಪರಿಸ್ಥಿತಿ ಬದಲಾಯಿಸಬೇಕಿದೆ. ದೇಶದಲ್ಲಿ ಬಾಲಕಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳಿಗೆ ಪ್ರಮುಖವಾಗಿ ಅಶ್ಲೀಲ ವೆಬ್ಸೈಟ್ಗಳು, ಸಿನಿಮಾ ಸಾಹಿತ್ಯಗಳು ಕಾರಣ. ಆದ್ದರಿಂದ ಸಕರ್ಾರಗಳು ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ, ಸಿನಿಮಾ, ಸಾಹಿತ್ಯಗಳಲ್ಲಿ ಅಶ್ಲೀಲತೆಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂದರು. 

ಮಹಿಳೆಯರನ್ನು ಗೌರವದಿಂದ ಕಾಣುವ ವಾತಾವರಣವನ್ನು ಸೃಷ್ಟಿಸುವುದು ಗಳಿಗೆಯ ಅವಶ್ಯಕತೆಯಾಗಿದೆ. ಅದಕ್ಕೆ ಉನ್ನತ ನೀತಿ, ಮೌಲ್ಯಗಳನ್ನು ಶಿಕ್ಷಣದಲ್ಲಿ ತರುವ ಅವಶ್ಯಕತೆಯಿದೆ. ಅದೇರೀತಿ 2012ರ ನಿರ್ಭಯಾ ಘಟನೆಯ ನಂತರ ಹೋರಾಟದ ಫಲವಾಗಿ ಮಹಿಳೆಯರ ಭದ್ರತೆಗಾಗಿ ಜಸ್ಟೀಸ್ ವಮರ್ಾ ಆಯೋಗ ನೀಡಿರುವ ವರದಿಯನ್ನು ಸಕರ್ಾರಗಳು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ಅದರಿಂದ ಇಂತಹ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು. 

ಎಐಡಿವೈಓ ಜಿಲ್ಲಾಧ್ಯಕ್ಷರಾದ ರಮೇಶ ಹೊಸಮನಿ ಮಾತನಾಡಿ ನಿರಂತರವಾಗಿ ಹೆಚ್ಚುತ್ತಿರುವ ಬಾಲಕಿಯರ, ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯಗಳನ್ನು ತಡೆಗಟ್ಟಲು ಸಕರ್ಾರಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಪರಿಣಾಮವಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಇಂತಹ ಹೀನಕೃತ್ಯಗಳಲ್ಲಿ ಯುವಜನರು ತೊಡಗಲು ಮುಖ್ಯವಾಗಿ ಮಾಧ್ಯಮಗಳಲ್ಲಿ ಹೆಣ್ಣುಮಕ್ಕಳನ್ನು ಅಸಭ್ಯವಾಗಿ ಚಿತ್ರಿಸುವುದು, ಅಶ್ಲೀಲ ಸಿನಿಮಾ ಸಾಹಿತ್ಯಗಳ ಪ್ರಚಾರ, ಮದ್ಯ ಮಾರಾಟ ಹಾಗೂ ಮಾದಕ ವಸ್ತುಗಳ ಮಾರಾಟ ಪ್ರಮುಖ ಕಾರಣವಾಗುತ್ತಿವೆ. ಮತ್ತೊಂದೆಡೆ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾದ್ಯವಿಲ್ಲ. ನಮ್ಮ ಸಂಘಟನೆಗಳು ಹಲವು ದಶಕಗಳಿಂದ ಅಶ್ಲೀಲತೆ, ಮದ್ಯ ಹಾಗೂ ಮಾದಕ ವಸ್ತುಗಳ ನಿಷೇದಕ್ಕೆ ಒತ್ತಾಯಿಸುತ್ತಾ ಬಂದಿದ್ದರೂ ಸಕರ್ಾರಗಳು ಕ್ರಮಕೈಗೊಳ್ಳದಿರುವುದು ಬಾಲಕಿಯರ, ಮಹಿಳೆಯರ ಭದ್ರತೆಯ ಬಗ್ಗೆ ಸಕರ್ಾರಗಳ ನಿಶ್ಕಾಳಜಿಯನ್ನು ತೋರಿಸುತ್ತದೆ. ಈಗಲಾದರೂ ಸಕರ್ಾರಗಳು ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸದಿರಲು ಅಶ್ಲೀಲ ಸಿನಿಮಾ ಸಾಹಿತ್ಯ ಹಾಗೂ ಮದ್ಯ ನಿಷೇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಯುವಜನರಲ್ಲಿ ಉನ್ನತ ನೀತಿ, ನೈತಿಕತೆಯನ್ನು ಬೆಳೆಸಲು ಸೂಕ್ತ ವಾತಾವರಣವನ್ನು ಸೃಷ್ಟಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾಧ್ಯಕ್ಷರಾದ ಶರಣು ಗೋನವಾರ ಸೇರಿದಂತೆ ಭವಾನಿಶಂಕರ್ ಎಸ್.ಗೌಡ, ಹನುಮೇಶ ಹುಡೇದ, ವಿಜಯಲಕ್ಷ್ಮಿ ದೇವತ್ಕಲ್, ಗಂಗಾ ಕೋಕರೆ, ಮಹಾಂತೇಶ ಬೀಳೂರು, ರಂಜಿತ್ ದೂಪದ್, ನಿಂಗಮ್ಮ, ದೇವಮ್ಮ, ಶಶಿಕಲಾ ಮೇಟಿ ಮುಂತಾದವರು ಭಾಗವಹಿಸಿದ್ದರು.