ಸಂಬರಗಿ 04: ಗಡಿ ಭಾಗದಲ್ಲಿ ಬರಗಾಲ ಬಿದ್ದಿರುವ ಪರಿಣಾಮ ಜನರು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ ಅನಂತಪೂರ ಗ್ರಾಮದಲ್ಲಿ 7 ಕೊಳವೆ ಬಾವಿ ನಿಮರ್ಾಣ ಮಾಡಿ ಗ್ರಾಮದ ನೀರಿನ ಸಮಸ್ಯೆ ಎದುರಿಸಲು ತಾಲೂಕಾ ಆಡಳಿತ ಮುಂದಾಗಿದೆ. ಆದರೆ ಶುದ್ಧ ಕುಡಿಯುವ ನೀರು ಉಚಿತವಾಗಿ ಸರಬರಾಜು ಮಾಡುವುದು ಬೆಳಗಾವಿ ಜಿಲ್ಲೆಯಲ್ಲಿ ಮೊದಲನೇ ಗ್ರಾಮ ಪಂಚಾಯತಿ ಇದ್ದು ವಿದ್ಯುತ್ ಕೊರತೆಯಿಂದ ಶುದ್ಧ ಕುಡಿಯುವ ನೀರಿಗಾಗಿ ಸಾಲಾಗಿ ಕೊಡಗಳನ್ನು ಇಟ್ಟು ನೀರು ಪಡೆದುಕೊಳ್ಳುವ ಸ್ಥಿತಿ ಬಂದಿದೆ.
ಅನಂತಪೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 2 ಗ್ರಾಮಗಳು ಬರುತ್ತಿದ್ದು ಈ ಗ್ರಾಮದ ಜನಸಂಖ್ಯೆ ಸುಮಾರು 10 ಸಾವಿರ ಇದ್ದು ಈ ಗ್ರಾಮದಲ್ಲಿ 3 ಶುದ್ಧ ಕುಡಿಯುವ ನೀರಿನ ಘಟಕಗಳಿವೆ 4 ನೇ ಘಟಕವನ್ನು ಹೊಸದಾಗಿ ಪ್ರಾರಂಭ ಮಾಡಲಾಗುವುದು. ಜನರಿಗೆ ಕೆಲಸವಿಲ್ಲ ಕೈಯಲ್ಲಿ ಸಾಕಷ್ಟು ದುಡ್ಡಿಲ್ಲ ಆ ಕಾರಣ ಉಚಿತವಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ ಗ್ರಾಮದಲ್ಲಿ ವಿದ್ಯುತ್ ಸರಿಯಾಗಿ ಇಲ್ಲದ ಕಾರಣ ಶುದ್ದ ಕುಡಿಯುವ ನೀರಿಗಾಗಿ ಜನರಿಗೆ ಸಾಲಾಗಿ ನಿಂತುಕೊಳ್ಳಬೇಕಾಗುತ್ತದೆ. ಗ್ರಾಮದಲ್ಲಿ 7 ಕೊಳವೆ ಭಾವಿ ಹೊಸದಾಗಿ ನಿಮರ್ಾಣ ಮಾಡಿದ್ದಾರೆ ಆ ಕೊಳವೆ ಭಾವಿ ನೀರನ್ನು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಲಗತ್ತಿಸಲಾಗಿದೆ ಬಳಕೆ ನೀರಿಗಾಗಿ ಟ್ಯಾಂಕರ್ ಮುಖಾಂತರ ನೀರಿನ ಪಯರ್ಾಯ ವ್ಯವಸ್ಥೆ ಮಾಡಲಾಗಿದೆ. ತೋಟದ ವಸತಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗಿದ್ದು ತೋಟದ ಪೂರೈಸಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಜನರು ಶುದ್ಧ ಕುಡಿಯುವ ನೀರಿಗಾಗಿ ಬಿಸಿಲೆನ್ನದೇ ಪರದಾಡುವ ಸ್ಥಿತಿ ಬಂದಿದೆ.
ಗ್ರಾಮದಲ್ಲಿ ಜನಸಂಖ್ಯೆ 10 ಸಾವಿರ ಇದ್ದರೂ ಬಹಳಷ್ಟು ಜನರು ತೋಟದ ವಸತಿಗಳಲ್ಲಿ ವಾಸವಾಗಿದ್ದಾರೆ. ತೋಟದ ವಸತಿಗಳಿಗೆ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿದ್ದಾರೆ ತೋಟದ ವಸತಿಗಳಲ್ಲಿ ಕೊಳವೆ ಭಾವಿಗಳು ಬತ್ತಿ ಹೋಗಿವೆ ಟ್ಯಾಂಕರ್ ಒಂದೇ ಪಯರ್ಾಯವಾಗಿದೆ ಟ್ಯಾಂಕರ್ ಮೂಲಕ ಸರಿಯಾಗಿ ನೀರು ಸರಬರಾಜು ಮಾಡಬೇಕು ಹಾಗೂ ಜಾನುವಾರುಗಳಿಗೆ ತೊಟ್ಟೆ ವ್ಯವಸ್ಥೆ ಮಾಡಬೇಕೆಂದು ಗ್ರಾಮದ ಜನರು ಒತ್ತಾಯಿಸಿದ್ದಾರೆ. ಸದ್ಯದಲ್ಲಿ ಒಂದೇ ಮೇವು ಸಂಗ್ರಹ ಕೇಂದ್ರವಿದ್ದು ಸುಮಾರಾಗಿ 6 ಸಾವಿರ ಜಾನುವಾರುಗಳಿಗೆ ಮೇವು ಪೂರೈಕೆಯಾಗುತ್ತಿದೆ. ಆದರೆ ಒಂದೇ ಮೇವು ಸಂಗ್ರಹ ಕೇಂದ್ರದಿಂದ ಮೇವು ಪಡೆದುಕೊಳ್ಳಲು ಜನರು ಪರದಾಡುವ ಸ್ಥಿತಿ ಬಂದಿದೆ ಮತ್ತೊಂದು ಮೇವು ಸಂಗ್ರಹ ಕೇಂದ್ರ ಪ್ರಾರಂಭ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಈ ಕುರಿತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗುಂಡು ಮಿರಜಕರ ಇವರಿಗೆ ಸಂಪಕರ್ಿಸಿದಾಗ ಗ್ರಾಮದಲ್ಲಿ ಹೊಸದಾಗಿ 7 ಕೊಳವೆ ಭಾವಿ ನಿಮರ್ಾಣ ಮಾಡಿದ್ದು ಆ ನೀರನ್ನು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಜೋಡಿಸಲಾಗಿದೆ. ಮತ್ತು ಅವಶ್ಯಕವಿದ್ದಲ್ಲಿ ನೀರಿನ ಟ್ಯಾಂಕರ್ ಪ್ರಾರಂಭ ಮಾಡಲಾಗಿದೆ ಎಂದು ಹೇಳಿದರು.